ಆದರ್ಶ ವಿವಿಧೋದ್ದೇಶ ಸಹಕಾರ ಸ೦ಘವು 2020-21 ನೇ ಸಾಲಿನ ಆರ್ಥಿಕ ವರ್ಷದಲ್ಲಿ 420.65 ಕೋಟಿ ರೂ. ಗಳ ವ್ಯವಹಾರ ನಡೆಸಿ 1.04 ಕೋಟಿ ರೂ.ಗಳಷ್ಟು ನಿವ್ವಳ ಲಾಭ: ಕೆ.ಸೀತಾರಾಮ ರೈ ಸವಣೂರು

Advt_Headding_Middle
Advt_Headding_Middle

ಪುತ್ತೂರಿನಲ್ಲಿ ಕೇ೦ದ್ರ ಕಚೇರಿಯನ್ನು ಹೊ೦ದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸ೦ಘವು 19 ವರ್ಷಗಳಿ೦ದ ಸಹಕಾರಿ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಪುತ್ತೂರು, ಸುಳ್ಯ, ಬೆಳ್ತ೦ಗಡಿ ಮತ್ತು ಬ೦ಟ್ವಾಳ ತಾಲೂಕಿನಲ್ಲಿರುವ 12 ಶಾಖೆಗಳ ಮೂಲಕ ನೀಡಿಕೊ೦ಡು ಬರುತ್ತಿದ್ದು 2020-21 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕೋವಿಡ್-19 ನ ಸ೦ಕಷ್ಟದ ಸಮಯದಲ್ಲಿಯೂ ತನ್ನ ಸ೦ಘದ ಸದಸ್ಯರ ಸಹಕಾರದಿ೦ದ ಅತ್ಯುತ್ತಮ ಕಾರ್ಯದಕ್ಷತೆಯನ್ನು ಸಾಧಿಸಿ ಸ೦ಘವು 420.65 ಕೋಟಿ ರೂ. ಗಳ ದಾಖಲೆಯ ವ್ಯವಹಾರಗವನ್ನು ನಡೆಸಿ ರೂ.1.04 ಕೋಟಿ ರೂ. ಗಳಷ್ಟು ಲಾಭವನ್ನು ಗಳಿಸಿರುತ್ತದೆ ಎ೦ದು ಸ೦ಘದ ಅಧ್ಯಕ್ಷರಾದ ಕೆ ಸೀತಾರಾಮ ಸವಣೂರು ರವರು ತಿಳಿಸಿರುತ್ತಾರೆ.
ಸ೦ಘದ 2020-21 ನೇ ಆರ್ಥಿಕ ಸಾಲಿನ ಅ೦ತ್ಯಕ್ಕೆ ಸ೦ಘದಲ್ಲಿ ಒಟ್ಟು 6904 ಸದಸ್ಯರಿದ್ದು ಒಟ್ಟು 2.32ಕೋಟಿ ರೂ. ಗಳಷ್ಟು ಪಾಲು ಬ೦ಡವಾಳವನ್ನು ಹೊ೦ದಿರುತ್ತದೆ. ಸ೦ಘವು 84.30 ಕೋಟಿ ರೂ. ಠೇವಣಿಯನ್ನು ಹೊ೦ದಿದ್ದು, ಕಳೆದ ವರ್ಷ ಕ್ಕೆ ಹೋಲಿಸಿದರೆ ಶೇಕಡಾ 20.42 ರಷ್ಟು ಹೆಚ್ಚಳವಾಗಿದೆ. ರೂ. 67.10 ಕೋಟಿ ರೂ.ಗಳಷ್ಟು ಹೊರಬಾಕಿ ಸಾಲ ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.13.30 ರಷ್ಟು ಹೆಚ್ಚಳವಾಗಿದೆ. ಸ೦ಘವು 2.06 ಕೋಟಿ ರೂ.ಗಳಷ್ಟು ಕ್ಷೇಮ ನಿಧಿ ಮತ್ತು 4.88 ಕೋಟಿ ರೂ. ಗಳಷ್ಟು ಇತರ ನಿಧಿಗಳನ್ನು ಹೊ೦ದಿ ರೂ. 90.38ಕೋಟಿಗಳಷ್ಟು ದುಡಿಯುವ ಬ೦ಡವಾಳವನ್ನು ಹೊ೦ದಿರುತ್ತದೆ. ಸ೦ಘವು ಸ್ಥಾಪನೆಗೊ೦ಡ ವರ್ಷದಿ೦ದ ತನ್ನ ಸದಸ್ಯರಿಗೆ ಡಿವಿಡೆ೦ಡ್ ನೀಡಿಕೊ೦ಡು ಬರುತ್ತಿರುವ ಏಕೈಕ ಸ೦ಘವಾಗಿರುತ್ತದೆ. ಮಾತ್ರವಲ್ಲದೆ ಆಡಿಟ್ ವರ್ಗದಲ್ಲಿ ಸತತವಾಗಿ “ಏ” ತರಗತಿಯನ್ನು ಕಾಯ್ದುಕೊ೦ಡು ಬ೦ದಿರುತ್ತದೆ. 2021-22 ನೇ ಸಾಲಿನಲ್ಲಿ ಸ೦ಘವು ರೂ.100 ಕೋಟಿ ರೂ. ಗಳ ಠೇವಣಿ ಹಾಗೂ ರೂ.78 ಕೋಟಿ ರೂ. ಗಳಷ್ಟು ಸಾಲ ಹೊರಬಾಕಿ ಮಾಡಿ ಸುಮಾರು 1.25ಕೋಟಿ ರೂ.ಗಳ ಲಾಭವನ್ನು ದಾಖಲಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎ೦ದು ಅಧ್ಯಕ್ಷರು ತಿಳಿಸಿದರು. ಈ ಸ೦ದರ್ಭದಲ್ಲಿ ಸ೦ಘದ ಉಪಾಧ್ಯಕ್ಷರಾದ ಎನ್. ಸು೦ದರ್ ರೈ ನಿರ್ದೇಶಕರಾದ ರಾಮಯ್ಯ ರೈ, ಜೈರಾಜ್ ಭ೦ಡಾರಿ, ಅಶ್ವಿನ್ ಎಲ್. ಶೆಟ್ಟಿ, ಎಸ್.ಎಂ.ಬಾಪು ಸಾಹೇಬ್, ಕೇನ್ಯಾ ರವೀಂದ್ರನಾಥ್ ಶೆಟ್ಟಿ ಮತ್ತು ಮಹಾಪ್ರಬ೦ಧಕರಾದ ವಸ೦ತ ಜಾಲಾಡಿ ಉಪಸ್ಥಿತರಿದ್ದರು .


2002ರಲ್ಲಿ ಆರಂಭಗೊಂಡ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘವು ಒಟ್ಟು 12 ಶಾಖೆಗಳನ್ನು ಹೊಂದಿದೆ. ಅವುಗಳು ಪುತ್ತೂರು ದರ್ಬೆ, ಪುತ್ತೂರು ಬೊಳುವಾರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ ಮತ್ತು ಪಂಜದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಹಕಾರಿ ಕ್ಷೇತ್ರದಲ್ಲಿ ನನಗಿದ್ದ 32 ವರ್ಷಗಳ ಅನುಭವದ ಆಧಾರದಲ್ಲಿ ಈ ಸಹಕಾರ ಸಂಘವನ್ನು ಸ್ಥಾಪನೆ ಮಾಡಿದ್ದೇವೆ. ಗ್ರಾಹಕರಿಗೆ ಕೂಡಲೇ ಸೇವೆ ಸಿಗಬೇಕು, ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ವಾರದೊಳಗೆ ಸಾಲ ಸೌಲಭ್ಯದ ವ್ಯವಸ್ಥೆಯಾಗಬೇಕು ಎಂಬ ನಿಟ್ಟಿನಲ್ಲಿ ಮತ್ತು ತೆಗೆದುಕೊಂಡ ಸಾಲದ ಸದುಪಯೋಗದೊಂದಿಗೆ ಮರುಪಾವತಿಯೂ ಸರಿಯಾದ ರೀತಿಯಲ್ಲಿ ಆಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ದಿ.ಸುಂದರ ಶೆಟ್ಟಿ, ದಿ.ನಾರಾಯಣ ಗೌಡ ಮತ್ತಿತರರು ಸೇರಿಕೊಂಡು ಈ ಸಹಕಾರ ಸಂಘವನ್ನು ಸ್ಥಾಪನೆ ಮಾಡಿದ್ದೇವೆ. ಗ್ರಾಹಕರ ಸಹಕಾರದಿಂದ ಸಂಘವು ಉತ್ತಮ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದು, ಮುಂದೆಯೂ ನಿಮ್ಮೆಲ್ಲರ ಸಹಕಾರ ಹೀಗೇಯೇ ಇರಲಿ ಎಂದು ಬಯಸುತ್ತೇನೆ ಎಂದು ಕೆ.ಸೀತಾರಾಮ ರೈ ಸವಣೂರು ಹೇಳಿದ್ದಾರೆ.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.