ಸುಳ್ಯ ಲಸಿಕಾ ಕೇಂದ್ರ ಪುರಭವನಕ್ಕೆ ಶಿಫ್ಟ್

Advt_Headding_Middle
Advt_Headding_Middle

ಅವ್ಯವಸ್ಥೆಯಿಂದಾಗಿ ಬೆಳಿಗ್ಗೆಯಿಂದ ಕಾಯುತ್ತಿರುವ ಜನರು

ಸುಳ್ಯದಲ್ಲಿ 45  ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಕೇಂದ್ರವನ್ನು ಜ್ಯೋತಿ ಸರ್ಕಲ್ ಬಳಿಯ ಸ.ಮಾ..ಹಿ.ಪ್ರಾ.ಶಾಲೆಯಿಂದ ಕೆ.ವಿ.ಜಿ. ಪುರಭವನಕ್ಕೆ ಸ್ಥಳಾಂತರಗೊಂಡಿದ್ದು, ಅಲ್ಲಿ ವ್ಯವಸ್ಥೆ ಸರಿಯಾಗಿ ಮಾಡದ ಕಾರಣದಿಂದಾಗಿ ಲಸಿಕೆ ಪಡೆಯಲು ಬಂದ ನೂರಕ್ಕೂ ಅಧಿಕ ಮಂದಿ ಬೆಳಿಗ್ಗೆಯಿಂದಲೇ ಕಾದು ಕುಳಿತಿರುವ ಘಟನೆ ವರದಿಯಾಗಿದೆ.
ಪ್ರಥಮ ಬಾರಿಗೆ ಲಸಿಕೆ ಪಡೆಯುವ ನೂರಕ್ಕೂ ಅಧಿಕ ಮಂದಿಗೆ ಕೂಪನ್ ಕೊಡಲಾಗಿದೆ. ಲಸಿಕೆಯ ಎರಡನೇ ಪಡೆಯ ಬಂದ ನೂರರಷ್ಟು ಜನ ಕೂಡಾ ಇದ್ದಾರೆ. ಆದರೆ ಎರಡು ಕೌಂಟರ್ ಮಾಡದೆ ಒಂದೇ ಕೌಂಟರ್ ಮಾಡಿರುವುದರಿಂದ ಜನ ಗಂಟೆಗಟ್ಟಲೆ ಕಾಯುವಂತಾಗಿದೆ. ಇದರಿಂದ ಕಾಯುತ್ತಿರುವ ಜನ ಆಕ್ರೋಶ ವ್ಯಕ್ತಪಡಿಸತೊಡಗಿದ್ದಾರೆ.
ಪೋರ್ಟಲ್ ನಿಧಾನಗತಿಯಲ್ಲಿರುವುದರಿಂದ ಸಮಸ್ಯೆಯಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.