ಲಸಿಕೆ ಕೇಂದ್ರದಲ್ಲಾದ ಗೊಂದಲಕ್ಕೆ ನ.ಪಂ.ಅಧ್ಯಕ್ಷರ ಸ್ಪಷ್ಟನೆ

Advt_Headding_Middle
Advt_Headding_Middle

 

ನಾಳೆಯಿಂದ ಹಿರಿಯ ನಾಗರಿಕರಿಗೆ ಪ್ರತ್ಯೇಕ ವ್ಯವಸ್ಥೆ, ಕಾಯುವರಿಗೆ ಉಪಾಹಾರ

” ಲಸಿಕಾ ಕೇಂದ್ರದಲ್ಲಿನ ಅವ್ಯವಸ್ಥೆಯಿಂದಾಗಿ ಜನ ಬೆಳಗ್ಗಿನಿಂದ ಕಾಯುತ್ತಿರುವುದಲ್ಲ. ಸರ್ವರ್ ನಿಧಾನಗತಿಯಲ್ಲಿರುವುದರಿಂದ ಕಾಯುವಂತಾಗಿದೆ ” ಎಂದು ಸುಳ್ಯ ನ.ಪಂ.ಅಧ್ಯಕ್ಷ ವಿನಯ್ ಕಂದಡ್ಕ ಸ್ಪಷ್ಟನೆ ನೀಡಿದ್ದಾರೆ.
” ಒಂದು ದಿನದಲ್ಲಿ ಗರಿಷ್ಟ 150 ರಿಂದ 200 ಜನಕ್ಕೆ ಮಾತ್ರ ವ್ಯಾಕ್ಸಿನೇಶನ್ ಮಾಡಲು ಸಾಧ್ಯವಿರುವುದು. ಮೊನ್ನೆಯ ತನಕ ಪ್ರತಿ 2ವಾರ್ಡ್ ಗಳಿಗೆ ಒಂದು ಕಡೆ ಲಸಿಕಾ ಶಿಬಿರ ಏರ್ಪಡಿಸಿ ಪ್ರಚಾರ ನೀಡಿದರೂ ಜನ ಸ್ವಲ್ಪ ಅಪನಂಬಿಕೆಯಿಂದ ( ಲಸಿಕೆ ಕುರಿತ ಅಪಪ್ರಚಾರ ) ಬಂದಿರಲಿಲ್ಲ. ಇವತ್ತು ಏಕಾಏಕಿ ಬೆಳಿಗ್ಗೆ 8.30 ರಿಂದಲೇ ಬಂದಿದ್ದುದರಿಂದ 100-130 ಜನ ಕಾಯುವಂತಾಗಿದೆ. ಆದರೂ ಅವರಿಗೆಲ್ಲ ಟೋಕನ್ ನಂಬರ್ ಕೊಡಲಾಗಿದೆ. 2ನೇ ಡೋಸ್ ತೆಗೆದುಕೊಳ್ಳುವವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದು ಅವರನ್ನು ಪ್ರತ್ಯೇಕ ಬಿಟ್ಟದ್ದರಿಂದ ಕೆಲವರಿಗೆ ವ್ಯರ್ಥ ಅನುಮಾನ ಬಂದು ಕಿರಿಕಿರಿ ಮಾಡಿದ್ದಾರಷ್ಟೇ. ಅದು ಬಿಟ್ಟರೆ ಬೇರಾವ ಅವ್ಯವಸ್ಥೆಯೂ ಆಗಿಲ್ಲ.”

” ಮಧ್ಯಾಹ್ನಕ್ಕೆ ಕೇಬಲ್ ಇಂಟರ್ನೆಟ್ ವ್ಯವಸ್ಥೆ ಮಾಡಿದ್ದೇವೆ. ನಾಳೆಯಿಂದ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್ ಮಾಡುವ ಯೋಚನೆ ಇದೆ. ಅಗತ್ಯ ಬಿದ್ದರೆ ಕಾಯುವವರಿಗೆ ಉಪಾಹಾರದ ವ್ಯವಸ್ಥೆಯನ್ನು ಕೂಡಾ ಮಾಡುವ ಯೋಚನೆ ಇದೆ.
ಇಡೀ ದೇಶದಲ್ಲಿ ಸದ್ರಿ ಪೋರ್ಟಲ್ 10 ಗಂಟೆಗೆ ಓಪನ್ ಆಗುತ್ತಿದ್ದು 9.00ಗಂಟೆಗೆ ಓಪನ್ ಆದರೆ ಇನ್ನಷ್ಟು ಅನುಕೂಲ ಆಗಬಹುದು ” ಎಂದು ವಿನಯ ಕುಮಾರ್ ಕಂದಡ್ಕ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.