ಆಲೆಟ್ಟಿ ಗ್ರಾಮ ಪಂಚಾಯತ್‌ನಲ್ಲಿ ಕೊರೋನಾ ಕಾರ್ಯಪಡೆಯ ತುರ್ತು ಸಭೆ

Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮ ಪಂಚಾಯತ್‌ನ ಕೊರೋನಾ ಕಾರ್ಯಪಡೆಯ ತುರ್ತು ಸಭೆಯು ಪಂಚಾಯತ್ ಸಭಾಭವನದಲ್ಲಿ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲುರವರ ಅಧ್ಯಕ್ಷತೆಯಲ್ಲಿ ನಡೆಯಿತು .
ಆಲೆಟ್ಟಿ ಗ್ರಾಮದಲ್ಲಿ ಕೊರೋನಾ ಪ್ರಕರಣ ಜಾಸ್ತಿಯಾಗುತ್ತಿರುವ ಬಗ್ಗೆ ಆರೋಗ್ಯಾಧಿಕಾರಿಗಳು ಮತ್ತು ಪಂಚಾಯತ್ ಸದಸ್ಯರು ವಿಷಯ ಪ್ರಸ್ತಾಪಿಸಿದರು . ಗ್ರಾಮದಲ್ಲಿ ಕೆಲವು ಕಾರ್ಯಕ್ರಮ ನಡೆಯುವಾಗ ಅನುಮತಿ ಪಡೆದು ಕಾರ್ಯಕ್ರಮದ ದಿನ ಕಡ್ಡಾಯವಾಗಿ ಪಂಚಾಯತ್ ಅಧಿಕಾರಿಗಳು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು . ಬೆಂಗಳೂರು ಮತ್ತು ಕೆಲ ಕಡೆಗಳಿಂದ ಬಂದ ವ್ಯಕ್ತಿಗಳ ಮಾಹಿತಿ ಕಲೆ ಹಾಕಿ ಹೋಮ್ ಕ್ವಾರೆಂಟೇನ್ ಮಾಡಿಸುವುದು. ಜನರಲ್ಲಿ ಮಾಹಿತಿ ನೀಡುವ ಸಲುವಾಗಿ ಪ್ರಚಾರ ನಡೆಸುವುದು ಎಂಬಿತ್ಯಾದಿ ಹಲವಾರು ವಿಷಯಗಳು ಪ್ರಸ್ತಾಪವಾದವು. ಸದಸ್ಯರಾದ ಸತ್ಯಕುಮಾರ್ ಆಡಿಂಜ, ಮುತ್ತಪ್ಪ ಪೂಜಾರಿ , ಚಂದ್ರಕಾಂತ ನಾರ್ಕೋಡು , ಶಿವಾನಂದ , ವೇದಾವತಿ , ವೀಣಾ , ಮೀನಾಕ್ಷಿ , ಧರ್ಮಪಾಲ ಕೊಯಿಂಗಾಜೆ , ಗ್ರಾಮ ಕರಣಿಕರು , ಆರೋಗ್ಯ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರು , ಪಿ ಡಿ ಒ , ಕಾರ್ಯದರ್ಶಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.