ಎಲ್ ಐಸಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಕೆ. ಸೇವಾ ನಿವೃತ್ತಿ

Advt_Headding_Middle
Advt_Headding_Middle

 

ಭಾರತೀಯ ಜೀವವಿಮಾ ನಿಗಮದ ಪುತ್ತೂರು ಶಾಖೆಯ ಸುಳ್ಯ ಸೆಟ್ಲೈಟ್ ಕಚೇರಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀನಿವಾಸ ಕೆ. ಯವರು ಏಪ್ರಿಲ್ 30 ರಂದು ಸೇವಾ ನಿವೃತ್ತಿ ಹೊಂದಿದರು.
1993 ರಲ್ಲಿ ಭಾರತೀಯ ಜೀವವಿಮಾ ನಿಗಮದ ಪುತ್ತೂರು ಶಾಖೆಗೆ ಸೇರ್ಪಡೆಗೊಂಡ ಅವರು ಅಭಿವೃದ್ಧಿ ಅಧಿಕಾರಿಯಾಗಿ ಸುದೀರ್ಘ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಗತಿಪರರಾಗಿ ಕಾರ್ಯನಿರ್ವಹಿಸುತ್ತಿರುವ 50 ಮಂದಿ ಏಜೆಂಟರಿಗೆ ಅಧಿಕಾರಿಯಾಗಿ ಅತ್ಯುತ್ತಮ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಲಯಮಟ್ಟದ ಉತ್ತಮ ಅಭಿವೃದ್ದಿ ಅಧಿಕಾರಿ ಎಂಬ ಪ್ರಶಸ್ತಿಗೂ ಹಲವು ಬಾರಿ ಭಾಜನರಾಗಿದ್ದಾರೆ.
ತನ್ನ ವೃತ್ತಿಯೊಂದಿಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಶ್ರೀನಿವಾಸರು 25 ವರ್ಷಗಳಿಂದ ಸುಳ್ಯ ರೋಟರಿ ಕ್ಲಬ್ ನ ಸದಸ್ಯರಾಗಿ, 2015-16ನೇ ಸಾಲಿಗೆ ಕ್ಲಬ್ ನ ಅಧ್ಯಕ್ಷರಾಗಿ, 3 ವರ್ಷ ರೋಟರಿ ಶಾಲೆಯ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದಾರೆ. ಸುವರ್ಣ ವರ್ಷದ ಸಂಭ್ರಮದ ಸಮಯದಲ್ಲಿ ಶಾಲಾ ನೂತನ ಕಟ್ಟಡಕ್ಕೆ ಎಲ್ಲೈಸಿ ವತಿಯಿಂದ 25 ಲಕ್ಷ ರೂ. ಅನುದಾನ ತರಿಸಿ ಮಹತ್ವದ ಕೊಡುಗೆ ನೀಡಿದ್ದರು.
ಶ್ರೀನಿವಾಸ ರವರ ಪತ್ನಿ ಸುಧಾ ಶ್ರೀನಿವಾಸ ಗೃಹಿಣಿಯಾಗಿದ್ದು, ಪುತ್ರಿ ಸ್ಮಿತಾ ಎಸ್. ಬೆಂಗಳೂರು ವಿಪ್ರೋ ಕಂಪನಿಯಲ್ಲಿ ರಿಸೋರ್ಸ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇನ್ನೋರ್ವ ಪುತ್ರಿ ಸೃಷ್ಟಿ ಎಸ್. ಕೆವಿಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇ & ಸಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.