ಲಸಿಕಾ ಕೇಂದ್ರದಲ್ಲಿ ಸೇವಾ ಭಾರತಿಯಿಂದ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ

Advt_Headding_Middle
Advt_Headding_Middle

ಕೆವಿಜಿ ಪುರಭವನದಲ್ಲಿ ತೆರೆಯಲಾಗಿರುವ ಕೊರೋನಾ ಲಸಿಕಾ ಕೇಂದ್ರದಲ್ಲಿ ಇಂದು ಮಧ್ಯಾಹ್ನ ಸೇವಾ ಭಾರತಿ ವತಿಯಿಂದ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು.
ನಿನ್ನೆ ಹೆಚ್ಚು ಜನ ಬಂದು ರಶ್ ಆಗಿದ್ದುದರಿಂದ ಮತ್ತು ಇಂಟರ್‌ನೆಟ್ ಸ್ಲೋ ಇದ್ದುದರಿಂದ ನೂರಾರು ಜನ ಗಂಟೆಗಟ್ಟಲೆ ಕಾಯುವಂತಾಗಿತ್ತು. ಇದನ್ನು ಮನಗಂಡ ಶಾಸಕರ ವಾರ್ ರೂಂ ಕಾರ್ಯಕರ್ತರು ಲಸಿಕಾ ಕೇಂದ್ರದಲ್ಲಿ ಜನರು ಬಂದು ಕಾಯಬೇಕಾಗಿ ಬಂದರೆ ಅವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮತ್ತು ಉಪಾಹಾರದ ವ್ಯವಸ್ಥೆ ಮಾಡಲು ನಿರ್ಧರಿಸಿದ್ದರು. ಅದರಂತೆ ಇಂದು ಮಧ್ಯಾಹ್ನ ಗಂಜಿ ಊಟ, ಚಟ್ನಿ, ಪಲ್ಯ, ಉಪ್ಪಿನಕಾಯಿಯನ್ನೊಳಗೊಂಡ ಶುಚಿರುಚಿಯಾದ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಕೇರ್ಪಳದ ಕಾರ್ಯಕರ್ತರಾದ ಚಂದ್ರಶೇಖರ ಎಂಬವರು ಮನೆಯಲ್ಲೇ ತಯಾರಿಸಿದ ಮಾವಿನ ಹಣ್ಣಿನ ಚಂಡ್ರುಪುಳಿಯನ್ನು ತಂದು ವಿತರಿಸುವ ವ್ಯವಸ್ಥೆ ಮಾಡಿದ್ದರು. ಬೂಡು ರಾಧಾಕೃಷ್ಣ ರೈ, ಸುನಿಲ್ ಕೇರ್ಪಳ, ಮಹೇಶ್ ರೈ ಮೇನಾಲ, ಶ್ರೀನಾಥ್ ರೈ ಬಾಳಿಲ, ವಿನಯಕುಮಾರ್ ಕಂದಡ್ಕ, ಚಂದ್ರಶೇಖರ ಜಟ್ಟಿಪಳ್ಳ, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ನ.ಪಂ.ನ ಶ್ರಿಜೇಶ್ ಮೊದಲಾದವರು ಸಹಕರಿಸಿದರು.
ನಾಳೆ ಆದಿತ್ಯವಾರ ಲಸಿಕಾ ಕೇಂದ್ರಕ್ಕೆ ರಜೆ ಇದ್ದು ಸೋಮವಾರ ಮತ್ತೆ ಲಸಿಕೆ ನೀಡುವ ಕಾರ್ಯ ಮುಂದುವರಿಯಲಿದೆ. ಎಷ್ಟು ಜನ ಬಂದರೂ ಅವರಿಗೆ ಊಟದ ವ್ಯವಸ್ಥೆ ಮಾಡುವುದಾಗಿ ವಿನಯಕುಮಾರ್ ಕಂದಡ್ಕ ಮತ್ತು ಬೂಡು ರಾಧಾಕೃಷ್ಣ ರೈ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.