ನಿವೃತ್ತ ಮುಖ್ಯ ಶಿಕ್ಷಕ ಕೇನ್ಯ ಜಯಸೀತಾರಾಮ ಕಡಂಬಳಿತ್ತಾಯ ನಿಧನ

Advt_Headding_Middle
Advt_Headding_Middle

 

ಕೇನ್ಯ ಗ್ರಾಮದ ಕೆರೆಕ್ಕೋಡಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯರಾದ ಜಯಸೀತಾರಾಮ ಕಡಂಬಳಿತ್ತಾಯ ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಮೇ.1 ರಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಅವರು ಶಿಕ್ಷಕರಾಗಿ ಸತ್ಯಸಾಯಿ ವಿದ್ಯಾಕೇಂದ್ರ ಅಳಿಕೆ, ಎಸ್. ಡಿ.ಎಂ. ಪ್ರೌಢಶಾಲೆ ಉಜಿರೆ, ಮುಖ್ಯೋಪಾಧ್ಯಾಯರಾಗಿ ವಿದ್ಯಾಬೋಧಿನಿ ಪ್ರೌಢ ಶಾಲೆ ಬಾಳಿಲ, ಭಕ್ತಕೋಡಿ ಸರ್ವೆ ಎಸ್. ಜಿ ಎಂ. ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವ್ಯವಸ್ಥಾಪಕರಾಗಿ ಒಟ್ಟು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.

 ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಪಂಜ ಅಂಬಿಕಾ ಟ್ಯುಟೇರಿಯಲ್ಸ್ ಇದರ ಸ್ಥಾಪಕರಾಗಿ, ಪಂಜ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಂಚಾಲಕರಾಗಿ, ಪಂಜ ಶಿವಳ್ಳಿ ಸಂಪನ್ನದ ಮಾರ್ಗದರ್ಶಕರಾಗಿ,ಸುಳ್ಯ ಬೃಂದಾವನ ಸೇವಾ ಟ್ರಸ್ಟಿನ ಟ್ರಸ್ಟಿಯಾಗಿ ಶೈಕ್ಷಣಿಕ, ಸಾಮಾಜಿಕ, ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿರುತ್ತಾರೆ. ಮೃತರು ಪತ್ನಿ ಶಕುಂತಲಾ, ಪುತ್ರರಾದ ಶ್ರೀಶ, ಹೇಮಂತ್, ಪುತ್ರಿಯರಾದ ಮಮತಾ, ಪಲ್ಲವಿ ಹಾಗೂ ಅಪಾರ ಬಂಧು ಮಿತ್ರರನ್ನು, ಶಿಷ್ಯ ವೃಂದವನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.