ಕೊರೊನಾ ಮುಂಜಾಗ್ರತೆ ಕುರಿತು ನ.ಪಂ.ನಲ್ಲಿ ಪೂರ್ವಭಾವಿ ಸಭೆ

Advt_Headding_Middle
Advt_Headding_Middle

 

ಸುಳ್ಯ ನಗರದಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಳ : ಕ್ವಾರಂಟೈನ್ ನಿಯಮ ಬಿಗು ಮಾಡಲು ನಿರ್ಣಯ

ಕೊರೊನಾ ಪಾಸಿಟಿವ್ ಪ್ರಕರಣ ಸುಳ್ಯ ನಗರದಲ್ಲಿ ಹೆಚ್ಚಾಗುತ್ತಿದ್ದು, ಕ್ವಾರಂಟೈನ್ ನಿಯಮ ಬಿಗು ಮಾಡಲು ಕ್ರಮಕೈಗೊಳ್ಳುವ ಕುರಿತು ನ.ಪಂ. ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸುಳ್ಯ ನ.ಪಂ. ನಲ್ಲಿ ಕೊರೊನಾ ಮುಂಜಾಗ್ರತಾ ಸಭೆ ನಡೆಯಿತು. ಅಧ್ಯಕ್ಷತೆಯನ್ನು ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ವಹಿಸಿದ್ದರು. ತಹಶೀಲ್ದಾರ್ ಅನಿತಾಲಕ್ಷ್ಮೀ, ನ.ಪಂ.ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ದ ನಾಯ್ಕ, ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಡೇವಿಡ್ ಧೀರಾ ಕ್ರಾಸ್ತ, ಉಮ್ಮರ್ ಕೆ.ಎಸ್., ಶರೀಫ್ ಕಂಠಿ, ಸುಧಾಕರ ಕುರುಂಜಿಭಾಗ್, ಬಾಲಕೃಷ್ಣ ರೈ, ಶಶಿಕಲಾ ನೀರಬಿದಿರೆ, ಶೀಲಾ ಕುರುಂಜಿ, ಶಿಲ್ಪಾ ಸುದೇವ್, ಪ್ರವೀತಾ ಪ್ರಶಾಂತ್, ಸುಶೀಲ ಕಲ್ಲುಮುಟ್ಲು ಇದ್ದರು. ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್ ಮಾಹಿತಿ ನೀಡಿದರು. “ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚುತ್ತಿದ್ದು ಇದು ಹೀಗೆ ಮುಂದುವರಿದರೆ ಪರಿಣಾಮ ಹದಗೆಡಬಹುದು. ಜನರಲ್ಲಿ ಉದಾಸೀನ, ನಿರ್ಲಕ್ಷ್ಯ ಹೆಚ್ಚಾಗಿದೆ. ಕ್ವಾರಂಟೈನ್ ನಿಯಮ ಉಲ್ಲಂಘನೆ ಆಗುತ್ತಿದೆ. ಕ್ವಾರಂಟೈನ್ ನಲ್ಲಿದ್ದವರು ಹೊರಗೆ ಬಂದರೆ ದಾಕ್ಷಿಣ್ಯ ನೋಡದೇ ಅವರಿಗೆ ನಿಯಮ ಪಾಲನೆಗೆ ಟಾಸ್ಕ್ ಫೋರ್ಸ್ ನವರು ಹೇಳಬೇಕು ಎಂದು ಮಾಹಿತಿ ನೀಡಿದರು.

ಆಗ ಸದಸ್ಯ ಡೇವಿಡ್ ಧೀರಾ ಕ್ರಾಸ್ತರು, ನನ್ನ ವಾರ್ಡಲ್ಲಿ ವೈದ್ಯರೊಬ್ಬರಿಗೆ ಪಾಸಿಟಿವ್ ಬಂದಿದೆ. ಅವರು ಹೊರಗೆ ಬರುತ್ತಿದ್ದಾರೆ ಎಂದು ಆರೋಪಿಸಿದರು. ” ಅವರು ಹಾಗೆ ಹೊರಗೆ ಬಂದರೆ ಅಪರಾಧ” ಎಂದು ವೈದ್ಯಾಧಿಕಾರಿ ಸಹಿತ ಸಭೆಯಲ್ಲಿದ್ದವರು ಹೇಳಿದರು. ಗಂಭೀರ ಚರ್ಚೆ ನಡೆದು ಆ ವೈದ್ಯರ ಆಸ್ಪತ್ರೆ ಯನ್ನು ಸೀಲ್ ಡೌನ್ ಮಾಡುವ ಬಗ್ಗೆಯೂ ಅಭಿಪ್ರಾಯ ವ್ಯಕ್ತವಾಯಿತು.

ಸದಸ್ಯ ವೆಂಕಪ್ಪ ಗೌಡರೂ ಮಾತನಾಡಿ, “ಅಗತ್ಯ ವಸ್ತು ಖರೀದಿಗೆ ೧೦ ಗಂಟೆ ಒಳಗೆ ಅವಕಾಶ ನೀಡಿದರೆ ಸಾಕು. ಪೇಟೆಯಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ವಾತಾವರಣ ನೋಡಿದರೆ ಭಯವಾಗುತ್ತದೆ ಎಂದು ಹೇಳಿದರು.

ತಹಶೀಲ್ದಾರ್ ಅನಿತಾಲಕ್ಷ್ಮೀ ಯವರು ” ಆ ಕುರಿತು ಜನರೇ ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗೋಣ. ಕ್ವಾರಂಟೈನ್ ನಿಯಮ ಬಿಗು ಮಾಡೋಣ ” ಎಂದು ಹೇಳಿದರು.

ಅಧ್ಯಕ್ಷ ವಿನಯ ಕುಮಾರ್‌ರು ” ನಗರದಲ್ಲಿ ವಾರ್ಡ್ ಸಮೀಕ್ಷೆ ನಡೆಸಲಿದ್ದೇವೆ
ಅದಕ್ಕಾಗಿ ಅಧಿಕಾರಿಗಳ ತಂಡ ಇಂದೇ ರಚನೆ ಮಾಡಿ ಪ್ರತೀ ವಾರ್ಡ್ ಸದಸ್ಯರಿಗೂ ಪಟ್ಟಿ ಕಳುಹಿಸುತ್ತೇವೆ. ವಾರ್ಡ್ ನಲ್ಲಿ ಪಾಸಿಟಿವ್ ಪ್ರಕರಣ ಗೊತ್ತಾದರೆ ಆ ಮನೆ ಕ್ವಾರಂಟೈನ್ ಕಡ್ಡಾಯ ಆಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡುತ್ತೇವೆ” ಎಂದು ಹೇಳಿದರು.

ಎಸ್.ಐ.ಹರೀಶ್ ಎಂ.ಆರ್. “ಸ್ಥಳೀಯ ವಾಗಿ ಆಹಾರ ಖರೀದಿಸಬೇಕೆಂದು ಸುತ್ತೋಲೆಯಲ್ಲಿದ್ದರೂ ಜನರು ಸುಳ್ಯಕ್ಕೆ ಬರುತ್ತಿದ್ದಾರೆ. ಆದ್ದರಿಂದ ಜನ ದಟ್ಟನೆ ಹೆಚ್ಚಾಗುತ್ತದೆ. ಕಾನೂನು ಉಲ್ಲಂಘಿಸಿ ದವರ ಮೇಲೆ ನಾವು ಪ್ರಕರಣ ದಾಖಲಿಸಿದ್ದೇವೆ” ಎಂದು ಹೇಳಿದರು.

ಶಿಕ್ಷಣ ಇಲಾಖೆಯ ಭವಾನಿ, ಗ್ರಾಮಲೆಕ್ಕಾಧಿಕಾರಿ ತಿಪ್ಪೇಶಪ್ಪ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.