ಶೇಷೋಧರ ಎಣ್ಣೆಮಜಲು ನಿಧನ

Advt_Headding_Middle
Advt_Headding_Middle

ಬೆಂಗಳೂರು ನಿವಾಸಿಯಾಗಿದ್ದ ಗುತ್ತಿಗಾರು ಎಣ್ಣೆಮಜಲು ನಿವಾಸಿ ಶೇಷೋಧರ ಎಣ್ಣೆಮಜಲು ರವರು ಅಸೌಖ್ಯ ಉಲ್ಬಣಿಸಿ ನಿನ್ನೆ ರಾತ್ರಿ ಮಂಗಳೂರು ಕೆ.ಎಸ್.ಹೆಗ್ದೆ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು ಉಸಿರಾಟದ ಸಮಸ್ಯೆಯುಂಟಾಗಿತ್ತೆನ್ನಲಾಗಿದೆ.
ಅವರಿಗೆ 61 ವರ್ಷ ವಯಸ್ಸಾಗಿತ್ತು.
ಬೆಂಗಳೂರಿನಲ್ಲಿ ಟ್ರಾವೆಲ್ ಉದ್ಯಮಿಯಾಗಿದ್ದ ಅವರು ಊರಿಗೆ ಬಂದಿದ್ದವರು ಮೂರು ವಾರದ ಹಿಂದೆ ಬೆಂಗಳೂರಿಗೆ ಹಿಂದಿರುಗಿದ್ದರು. ಹೋದ ಮೇಲೆ ಅವರಿಗೆ ಮೈಕೈ ನೋವು ಮತ್ತು ಅಲ್ಪಮಟ್ಟಿನ ಜ್ವರ ಆರಂಭವಾಗಿತ್ತು. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ ಟೆಸ್ಟ್ ನಡೆಸಿದಾಗ ನೆಗೆಟಿವ್ ಬಂದಿತ್ತು. ಆದರೆ ಅಸೌಖ್ಯ ಕಡಿಮೆಯಾಗದಿದ್ದುದರಿಂದ ಸುಳ್ಯಕ್ಕೆ ಕರೆತಂದು ಕೆ.ವಿ.ಜಿ.ಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರ ಮನೆಯವರು ಮಂಗಳೂರಿನ ಕೆ.ಎಸ್.ಹೆಗ್ದೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ಅಲ್ಲಿ ರಾತ್ರಿ 11.30 ರ ಸುಮಾರಿಗೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.