Breaking News

ಏನೆಕಲ್ಲು : ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಇಂಗು ಗುಂಡಿ ರಚನೆಗೆ ಚಾಲನೆ

Advt_Headding_Middle

ಸುಬ್ರಮಣ್ಯ ಗ್ರಾ. ಪಂ. ವತಿಯಿಂದ ಯೇನೆಕಲ್ಲಿನ ತೆಂಗಿನ ತೋಟದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಇಂಗುಗುಂಡಿ ರಚನಾ ಕೆಲಸಕ್ಕೆ ಮೇ.4 ರಂದು ಚಾಲನೆ ನೀಡಲಾಯಿತು.

ಕೊರೋನಾ ಸಂಕಷ್ಟ ಸಮಯದಲ್ಲಿ ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ‘ದುಡಿಯೋಣ ಬಾ’ ಮೂಲಕ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಯೇನೆಕಲ್ಲಿನ ತೆಂಗಿನ ತೋಟದಲ್ಲಿ ಇಂಗು ಗುಂಡಿ ರಚಿಸಲಾಗುತ್ತಿದೆ. ಕೆಲಸಕ್ಕಾಗಿ ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತು ಮಟ್ಟದ ಒಕ್ಕೂಟ ಬೇಡಿಕೆ ಇಟ್ಟಿತ್ತು. ಇಲ್ಲಿ ಇಂಗು ಗುಂಡಿ ರಚನಾ ಕಾರ್ಯದಲ್ಲಿ ಸಂಜೀವಿನಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉದ್ಯೋಗವಕಾಶವನ್ನು ಪಡೆದುಕೊಂಡಿದ್ದಾರೆ. ದುಡಿಯೋಣ ಬಾ ಅಭಿಯಾನಕ್ಕೆ ಗ್ರಾ. ಪಂ. ಅಧ್ಯಕ್ಷೆ ಲಲಿತಾ ಗುಂಡಡ್ಕರವರು ಚಾಲನೆ ನೀಡಿದರು. ಗ್ರಾ ಪಂ. ಉಪಾಧ್ಯಕ್ಷೆ ಸವಿತಾ ಭಟ್, ತಾ. ಪಂ. ಸದಸ್ಯ ಅಶೋಕ್ ನೆಕ್ರಾಜೆ, ಪಿ.ಡಿ. ಓ ಮುತ್ತಪ್ಪ ಧವಳಗಿ, ಕಾರ್ಯದರ್ಶಿ ಮೋನಪ್ಪ, ಗ್ರಾ. ಪಂ. ಸದಸ್ಯರಾದ ವೆಂಕಟೇಶ್ ಹೆಚ್. ಎಲ್, ಶಿವರಾಮ ನೆಕ್ರಾಜೆ, ದಿಲೀಪ್, ಮೋಹನ್ ಕೋಟಿಗೌಡನ ಮನೆ, ಭವ್ಯ ಕುಮಾರಿ, ಜಯಂತಿ, ಮಾಜಿ ಸದಸ್ಯ ಭವಾನಿಶಂಕರ್ ಪೂಂಬಾಡಿ, ಓಂ ಶ್ರೀ ಗ್ರಾಮ ಪಂಚಾಯತು ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಸುಜಾತ ಗಣೇಶ್, ಕಾರ್ಯದರ್ಶಿ ಮೀನಾಕ್ಷಿ, ಉಪಾಧ್ಯಕ್ಷೆ ರಮಣಿ, ಎಂ.ಬಿ. ಕೆ ಹೇಮಾವತಿ, ಎಲ್. ಸಿ.ಆರ್. ಪಿ ರತ್ನಕುಮಾರಿ ಹಾಗೂ ಸಂಜೀವಿನಿ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.