Breaking News

ರಾತ್ರಿ ರಸ್ತೆ ಬದಿ ನಿಂತಿದ್ದ ಗ್ರಾ ಪಂ ಅಧ್ಯಕ್ಷರಿಗೆ ಅರಣ್ಯಾಧಿಕಾರಿ ಪ್ರಶ್ನೆ

Advt_Headding_Middle

 

ಗ್ರಾ. ಪಂ .ಅಧ್ಯಕ್ಷರಿಂದ ಆಕ್ಷೇಪ

ಅಧಿಕಾರಿಗಳ ವರ್ತನೆ ಖಂಡಿಸಿ ಕೊರೋನಾ ಕಾರ್ಯಪಡೆ ಕೆಲಸ ತಡೆಗೆ ನಿರ್ಧಾರ

ರಾತ್ರಿ 9 ಗಂಟೆ ಹೊತ್ತಿಗೆ ರಸ್ತೆ ಬದಿ ನಿಂತು ಮಾತನಾಡುತ್ತಿದ್ದ ಗ್ರಾ.ಪಂ ಅಧ್ಯಕ್ಷರನ್ನು ಆ ದಾರಿಯಾಗಿ ಬಂದ ಉಪವಲಯಾರಣ್ಯಧಿಕಾರಿ ಮತ್ತು ಸಿಬ್ಬಂದಿ ಪ್ರಶ್ನಿಸಿದ ಹಾಗೂ ಇದನ್ನು ಆಕ್ಷೇಪಿಸಿದ ಗ್ರಾ.ಪಂ ಅಧ್ಯಕ್ಷರು, ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಕೊರೋನಾ ಕಾರ್ಯಪಡೆಯ ಕರ್ತವ್ಯ ನಿಲ್ಲಿಸುವುದಾಗಿ ನಿರ್ಧಾರ ಮಾಡಿದ ಘಟನೆ ಕೊಲ್ಲಮೊಗ್ರ ದಿಂದ ವರದಿಯಾಗಿದೆ.

ಮೇ.4 ರಂದು ರಾತ್ರಿ 9ಗಂಟೆ ಸುಮಾರು ಕೊಲ್ಲಮೊಗ್ರ ಗ್ರಾ. ಪಂ ಅಧ್ಯಕ್ಷ ಉದಯ ಕೊಪ್ಪಡ್ಕ ತಮ್ಮ ಕೊರೋನಾ ಕಾರ್ಯಪಡೆಯ ಇತರ ಇಬ್ಬರು ಸದಸ್ಯರೊಂದಿಗೆ ಅರುಣೋದಯ ಚಿಕನ್ ಸೆಂಟರ್ ಬಳಿ ಮಾತನಾಡುತ್ತಿದ್ದರೆನ್ನಲಾಗಿದೆ. ಆ ಹೊತ್ತಿಗೆ ಅಲ್ಲಿಗೆ ಬಂದ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಅಪೂರ್ವ ಅಚ್ರಪ್ಪಾಡಿ ಮತ್ತು ಸಿಬ್ಬಂದಿಗಳು, ” ನಮ್ಮ ವಾಹನವನ್ನು ಫಾಲೋ ಮಾಡಿಕೊಂಡು ಬೈಕಿನಲ್ಲಿ ಬಂದ ವರು ಈ ಕಡೆ ತಿರುಗಿಸಿ ಬಂದಿದ್ದರೇ, ನೀವು ಅವರನ್ನು ನೋಡಿದ್ದೀರಾ ಎಂದು ಕೇಳಿದರೆನ್ನಲಾಗಿದೆ. ನಾವು ನೋಡಿಲ್ಲ ನಮಗೆ ಗೊತ್ತಿಲ್ಲ ಎಂದು ಉದಯ ಕೊಪ್ಪಡ್ಕ ಜತೆಗಿದ್ದವರು ತಿಳಿಸಿದರು.

ಆಗ ಅರಣ್ಯ ಇಲಾಖೆಯ ಉಪ ವಲಯಾರಣ್ಯಾಧಿಕಾರಿ, ಜತೆಯಲ್ಲಿದ್ದ ಅರಣ್ಯ ರಕ್ಷಕ ರೊಬ್ಬರು ಉದಯ ಕೊಪ್ಪಡ್ಕ ಜತೆಗಿದ್ದ ಇನ್ನಿಬ್ಬರ ಮುಖಕ್ಕೆ ಟಾರ್ಚ್ ಬೆಳಕು ಹಾಯಿಸಿ ನೀವು ಇಲ್ಲಿ ನಿಂತಿದ್ದೇಕೆ ಬೈಕ್ ನಲ್ಲಿ ಬಂದವರು ಯಾರೆಂದು ನಿಮಗೆ ಗೊತ್ತಿರಬೇಕಲ್ವಾ ಎಂದು ಪ್ರಶ್ನಿಸಿದರು. ಆಗ ಉದಯ ಕೊಪ್ಪಡ್ಕ ಕೋಪಗೊಂಡು ನೀವು ನಮ್ಮನ್ನು ಪ್ರಶ್ನಿಸುತ್ತಿರುವುದೇಕೆ. ನಾವು ಕೊರೋನಾ ಕಾರ್ಯಪಡೆಯ ಸದಸ್ಯರು. ಗೋಳಿಗುಂಡಿ ಎಂಬಲ್ಲಿರುವ ಕೊರೋನಾ ಪೀಡಿತರ ಮನೆಗೆ ಆಹಾರ ಕೊಡಲೆಂದು ಬಂದವರು ಎಂದು ಉತ್ತರಿಸಿದರು. ಆ ಸಂದರ್ಭ ಎರಡೂ ಕಡೆ ಮಾತಿನ ವಿನಿಮಯ ಆಯಿತೆ ನ್ನಲಾಗಿದೆ ಬಳಿಕ ಇತ್ತಂಡ ದವರು ತಮ್ಮ ಕಾರ್ಯಕ್ಕೆ ತೆರಳಿದರು.

ಕಾರ್ಯಪಡೆ ಸ್ಥಗಿತಕ್ಕೆ ನಿರ್ಧಾರ
ಘಟನೆ ಬಗ್ಗೆ ಉದಯ ಕೊಪ್ಪಡ್ಕ ಅವರನ್ನು ಸಂಪರ್ಕಿಸಿದ್ದಾಗ ರಾತ್ರಿ ಕಾರ್ಯಪಡೆ ಸದಸ್ಯರು ಕರ್ತವ್ಯದಲ್ಲಿರುವಾಗ ಅರಣ್ಯ ಇಲಾಖೆಯವರು ಬಂದು ಅನಗತ್ಯವಾಗಿ ಪ್ರಶ್ನಿಸಿ ಕಿರುಕುಳ ನೀಡಿದ್ದಾರೆ, ಅವರ ವರ್ತನೆ ಖಂಡಿಸಿ ಪಂಚಾಯತ್ ನ ಕೊರೋನಾ ಕಾರ್ಯಪಡೆ ಕೆಲಸವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಎ.ಸಿ, ತಹಶಿಲ್ದಾರ್, ಕಾರ್ಯನಿರ್ವಹಣಾಧಿಕಾರಿ ಅವರಿಗೆ ಫೋನ್ ನಲ್ಲಿ ವಿಷಯ ತಿಳಿಸಿದ್ದೇವೆ. ಎಂದವರು ತಿಳಿಸಿದ್ದಾರೆ.

ಉಪವಲಯಾರಣ್ಯಾಧಿಕಾರಿ ಅಪೂರ್ವ ಅಚ್ರಪ್ಪಾಡಿ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ ನಾವು ಕಲ್ಮಕಾರಿನಿಂದ ಕೊಲ್ಲಮೊಗ್ರ ದಾಟಿ ಬರುತ್ತಿರುವಾಗ ಉದಯ ಕೊಪ್ಪಡ್ಕ ರವರು ರಸ್ತೆ ಸಮೀಪ ಮಾತನಾಡುತ್ತಿರುವದನ್ನು ನೋಡಿದ್ದೇವು. ಕೊಲ್ಲಮೊಗ್ರು ದಾಟಿ ಬರುವಾಗ ಬೈಕೊಂದು ನಮ್ಮ ವಾಹನವನ್ನು ಹಿಂಬಾಲಿಸಿ ಬರುವುದನ್ನು ಗಮನಿಸಿದ್ದೇವು. ಇದರಿಂದ ಅನುಮಾನಗೊಂಡ ನಾವು ನಿಲ್ಕೂರು ಬಳಿ ಜೀಪು ನಿಲ್ಲಿಸಿದಾಗ, ಹಿಂಬಾಲಿಸಿದ ಬೈಕ್ ತಿರುಗಿಸಿ ಕೊಲ್ಲಮೊಗ್ರುವಿನತ್ತ ಹೋಗಿದ್ದು ಇದರಿಂದ ಅನುಮಾನಗೊಂಡ ನಾವು ಜೀಪು ಹಿಂತಿರುಗಿಸಿ ಕೊಲ್ಲಮೊಗ್ರ ಕಡೆಗೆ ಹೋಗಿ ಉದಯ ಕೊಪ್ಪಡ್ಕ ಮತ್ತಿತರರಲ್ಲಿ ಬೈಕ್ ಬಗ್ಗೆ ವಿಚಾರಿಸಿರುತ್ತೇವೆ. ಅದಕ್ಕವರು ಅರಣ್ಯ ಇಲಾಖೆಯನ್ನು ದೂಷಿಸಿ ಮಾತನಾಡಿದ್ದು ನಾವು ಮಾತು ಬೆಳೆಸದೆ ಹಿಂತಿರುಗಿ ಬಂದಿದ್ದೇವೆ ಎಂದವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.