Breaking News

ಮೇ ತಿಂಗಳಲ್ಲಿ ಕುಚ್ಚಲು ಮತ್ತು ಬೆಳ್ತಿಗೆ ಅಕ್ಕಿ ಸಮ ಪ್ರಮಾಣದಲ್ಲಿ ವಿತರಣೆ : ತಹಶೀಲ್ದಾರ್

Advt_Headding_Middle

 

ಮೇ ತಿಂಗಳಲ್ಲಿ ಕುಚ್ಚಲು ಅಕ್ಕಿ ಮತ್ತು ಬೆಳ್ತಿಗೆ ಅಕ್ಕಿ ಸರಬರಾಜು ಆಗಿರುವುದರಿಂದ ಶೇ.50-50ರ ಸಮ ಪ್ರಮಾಣದಲ್ಲಿ ವಿತರಣೆ ಮಾಡಬೇಕು. ಯಾವುದೇ ಕಾರ್ಡುದಾರರಿಂದ ಬೆಳ್ತಿಗೆ ಅಕ್ಕಿ ಸಿಕ್ಕಿಲ್ಲ ಎಂಬ ದೂರು ಬರದಂತೆ ವಿತರಣೆ ಮಾಡಬೇಕು ಎಂದು ಸುಳ್ಯ ತಹಶೀಲ್ದಾರ್ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿದಾರರಿಗೆ ಸೂಚನೆ ನೀಡಿದ್ದಾರೆ.

 


2021 ಮೇ ತಿಂಗಳಲ್ಲಿ ಹೆಚ್ಚುವರಿಯಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಕ್ಕಿ ಹಂಚಿಕೆ ಇರುವುದರಿಂದ ನ್ಯಾಯಬೆಲೆ ಅಂಗಡಿದಾರರು ರಜಾದಿನಗಳಲ್ಲಿ ಕೂಡಾ ಹಾಜರಿದ್ದು ಸಗಟು ಗೋದಾಮಿನಿಂದ ಸರಬರಾಜಾದ ಪಡಿತರವನ್ನು ಸರಿಯಾಗಿದೆಯೇ ಎಂದು ಪರಿಶೀಲಿಸಬೇಕು. ದಾಸ್ತಾನಾಗಿರುವ ಪಡಿತರ ಇಡಲು ವ್ಯವಸ್ಥೆ ಇಲ್ಲದಿದ್ದರೆ ಪರ್ಯಾಯ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಪಡಿತರ ವಿತರಣೆಗೆ ಹೆಚ್ಚುವರಿ ಸಿಬ್ಬಂದಿ ಬೇಕಾಗಿದ್ದರೆ ತಾತ್ಕಾಲಿಕ ನೆಲೆಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಬೇಕು. ಕೇಂದ್ರ ಹಾಗೂ ರಾಜ್ಯದ ಪಡಿತರ ಹಂಚಿಕೆ ಇರುವುದರಿಂದ ಕಾರ್ಡುದಾರರಿಗೆ ಕಾಣುವಂತೆ ದಪ್ಪಕ್ಷರದಲ್ಲಿ ಬರೆದು ತೋರಿಸಬೇಕು. ಪ್ರಸ್ತುತ ಲಾಕ್‌ಡೌನ್ ಇರುವುದರಿಂದ ಸರ್ಕಾರದ ಆದೇಶದಂತೆ ಬೆಳಗ್ಗೆ ೭ರಿಂದ ೧೨ರವರೆಗೆ ಪಡಿತರ ವಿತರಣೆ ಮಾಡಬೇಕು. ಎಪಿಎಲ್ ಪೂರ್ಣ ಪ್ರಮಾಣದ ಹಂಚಿಕೆ ಇಲ್ಲದಿರುವುದರಿಂದ ಯಾರೂ ಕೂಡಾ ಬಿಪಿಎಲ್ ಅಕ್ಕಿಯನ್ನು ಎಪಿಎಲ್ ಕಾರ್ಡುದಾರರಿಗೆ ವಿತರಿಸಬಾರದು. ಎಪಿಎಲ್ ಅಕ್ಕಿಗೆ ಬಿಲ್ ಆಗಿರುವುದನ್ನು ಖಚಿತಪಡಿಸಿಕೊಂಡು ನಂತರ ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ನೆಗೆಟಿವ್ ದಾಸ್ತಾನು ಬರದಂತೆ ಎಚ್ಚರ ವಹಿಸಬೇಕು. ಜೊತೆಗೆ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ತಹಶೀಲ್ದಾರ್ ಅನಿತಾಲಕ್ಷ್ಮಿಯವರು ನ್ಯಾಯಬೆಲೆ ಅಂಗಡಿಯವರಿಗೆ ಸೂಚನೆ ನೀಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.