Breaking News

ಕೊಲ್ಲಮೊಗ್ರು: ಯುವಕನಿಗೆ ಅರಣ್ಯಾಧಿಕಾರಿಗಳಿಂದ ಹಲ್ಲೆ ಆರೋಪ; ನಡೆಯಲಾಗದ ಸ್ಥಿತಿಯಲ್ಲಿರುವ ಯುವಕ

Advt_Headding_Middle

 

ಅರಣ್ಯಾಧಿಕಾರಿಗಳಿಂದ ಆರೋಪ ನಿರಾಕರಣೆ, ಹರಳು ಕಲ್ಲು ಅಗೆತಕ್ಕೆ ಸಂಬಂಧಿಸಿ ವಿಚಾರಿಸಿದ್ದಾಗಿ ಹೇಳಿಕೆ

ಹರಳು ಕಲ್ಲು ಅಗೆತಕ್ಕೆ ಸಂಬಂಧಿಸಿ ವಿಚಾರಣೆಗಾಗಿ
ಕೊಲ್ಲಮೊಗ್ರು ಗ್ರಾಮದ ಇಬ್ಬರು ವ್ಯಕ್ತಿಗಳನ್ನು ಸುಬ್ರಹ್ಮಣ್ಯದ ಅರಣ್ಯಾಧಿಕಾರಿಗಳು ಕರೆದೊಯ್ದು ಓರ್ವ ಯುವಕನಿಗೆ ತೀವ್ರ ಹಲ್ಲೆ ನಡೆಸಿದ್ದರೆಂಬ ಆರೋಪ ಕೇಳಿಬಂದಿದ್ದು, ಆ ಯುವಕ ನಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಆದರೆ ಈ ಹಲ್ಲೆ ಆರೋಪವನ್ನು ಅರಣ್ಯಾಧಿಕಾರಿಗಳು ನಿರಾಕರಿಸಿದ್ದು ಹರಳು ಕಲ್ಲು ಅಗೆತಕ್ಕೆ ಸಂಬಂಧಿಸಿ ವಿಚಾರಣೆ ಮಾತ್ರ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಕೊಲ್ಲಮೊಗ್ರು ಗ್ರಾಮದ
ಮೋಹನ ಕೊಳಗೆ ಮತ್ತು ಕಮಲಾಕ್ಷ ಪೆರ್ನಾಜೆ ಎಂಬವರನ್ನು ಏ.27 ರಂದು ಅರಣ್ಯಾಧಿಕಾರಿಗಳು ಬಂಧಿಸಿ ಕರೆದೊಯ್ದು ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಅವರು ಹಲ್ಲೆ ನಡೆಸಿದ್ದರಿಂದ ಮೋಹನ್ ರವರ ಭುಜಕ್ಕೆ ಏಟಾಗಿದ್ದು ಕಾಲು ಬಾತುಕೊಂಡಿದ್ದು, ನಡೆಯಲಾಗದೆ ಬಳಲುತಿದ್ದಾರೆ. ಅಲ್ಲದೆ ಒತ್ತಾಯ ಪೂರ್ವಕವಾಗಿ ಕೆಲವರ ಹೆಸರು ಹೇಳಿಸಿ, ಖಾಲಿ ಹಾಳೆ ಗೆ ಸಹಿ ಹಾಕಿಸಿರುವುದಾಗಿ ಮೋಹನ್ ಕೊಳಗೆ ಮತ್ತಿತರರು ಆರೋಪಿಸಿದ್ದಾರೆ.

ಈ ಆರೋಪದ ಬಗ್ಗೆ ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ರಾಘವೇಂದ್ರರನ್ನು ಸಂಪರ್ಕಿಸಿ ವಿಚಾರಿಸಿದಾಗ ” ನಾವು ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ. ಹರಳು ಕಲ್ಲು ಅಗೆತಕ್ಕೆ ಸಂಬಂಧಿಸಿ ಮಾಹಿತಿ ಕಲೆ ಹಾಕಿಯೇ ಬಂಧಿಸಿದ್ದೇವೆ. ಅವರ ಹೇಳಿಕೆ ಆಧರಿಸಿ ಮತ್ತೆ 12 ಜನರ ಮೇಲೆ ಕೇಸು ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದೇವೆ ” ಎಂದು ಪ್ರತಿಕ್ರಿಯಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.