Breaking News

ಕೋಳಿತ್ಯಾಜ್ಯ ಎಸೆಯುವವರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಊರವರು

Advt_Headding_Middle

ರಸ್ತೆ ಬದಿ ಕೋಳಿತ್ಯಾಜ್ಯ ಎಸೆಯುತ್ತಿದ್ದವರನ್ನು ಪ್ರಶ್ನಿಸಿ ಗ್ರಾ.ಪಂ.ನವರ ಸಹಕಾರದೊಂದಿಗೆ ಊರವರು ತ್ಯಾಜ್ಯ ಎಸೆದವರನ್ನು ಪೊಲೀಸರಿಗೊಪ್ಪಿಸಿದ ಘಟನೆ ವರದಿಯಾಗಿದೆ.

ಮಂಡೆಕೋಲು ವ್ಯಾಪ್ತಿಯ ದೇವರಗುಂಡ ಎಂಬಲ್ಲಿ ರಸ್ತೆ ಬದಿ ನಿಂತು ಮೋರಿಯೊಂದಕ್ಕೆ ಹುಣಸೂರು ಮೂಲದ ವಾಹನದಲ್ಲಿ ಬಂದವರು ಕೋಳಿತ್ಯಾಜ್ಯವನ್ನು ಎಸೆಯುತ್ತಿದ್ದರು. ಇದನ್ನು ನೋಡಿದ ಸ್ಥಳಿಯರು ಮಂಡೆಕೋಲು ಗ್ರಾ.ಪಂ.ನವರಿಗೆ ಹಾಗೂ ಜಾಲ್ಸೂರು ಗ್ರಾ.ಪಂ.ನವರಿಗೆ ವಿಷಯ ತಿಳಿಸಿದರು.

ಮಂಡೆಕೋಲು ಗ್ರಾ.ಪಂ. ಅಧ್ಯಕ್ಷೆ ವಿನುತಾ ಪಾತಿಕಲ್ಲು, ಪಿಡಿಒ ರಮೇಶ್, ಜಾಲ್ಸೂರು ಗ್ರಾ.ಪಂ. ಅಧ್ಯಕ್ಷ ಬಾಬು ಕೆ.ಎಂ., ಪಿಡಿಒ ಸುಬ್ಬಯ್ಯ, ಮಂಡೆಕೋಲು ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಮತ್ತಿತರರು ಸ್ಥಳಕ್ಕೆ ಬಂದರು. ಬಳಿಕ ಸುಳ್ಯ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಪೊಲೀಸರು ಸ್ಥಳಕ್ಕೆ ಬಂದು ಕೋಳಿ ತ್ಯಾಜ್ಯ ಎಸೆದವರನ್ನು ವಶಕ್ಕೆ ಪಡೆದರು. ರಸ್ತೆ ಬದಿ ಎಸೆದ ಕೋಳಿತ್ಯಾಜ್ಯವನ್ನು ಊರವರೇ ಎಸೆದವರಿಂದ ವಾಪಾಸ್ ಹೆಕ್ಕಿಸಿ ಅವರ ವಾಹನಕ್ಕೆ ಹಾಕಿಸಿದರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.