Breaking News

ಸರ್ವರೂ ಜಾಗೃತರಾಗಿ ಮಾರ್ಗಸೂಚಿ ಪಾಲನೆ ಮಾಡಿ ಕೊರೋನಾ ನಿರ್ಮೂಲನೆ ಮಾಡಿ : ಡಾ.ತ್ರಿಮೂರ್ತಿ

Advt_Headding_Middle

 

ಕಟ್ಟುನಿಟ್ಟಿನ ಕ್ರಮ, ನಿಯಮ ಪಾಲಿಸಿ, ಆರೋಗ್ಯ ಉಳಿಸಿಕೊಳ್ಳಿ: ಠಾಣಾಧಿಕಾರಿ ಓಮನಾ

ಕೊರೋನಾ ಎರಡನೇ ಅಲೆಯು ದೇಶವ್ಯಾಪ್ತಿ ಹರಡಿದೆ. ಇಂತಹ ಸಂದರ್ಭದಲ್ಲಿ ಸರ್ವರೂ ಜಾಗೃತರಾಗಿ ಸರಕಾರವು ವಿಧಿಸಿದ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು ಕೊರೋನಾ ನಿರ್ಮೂಲನೆ ಪ್ರಧಾನ ಅಸ್ತವಾಗಿದೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸರ್ ಬಳಕೆ ಮಾಡವುದು ಪ್ರತಿಯೊಬ್ಬರ ದಿನಚರಿಯಾಗಬೇಕು. ಅನಗತ್ಯ ತಿರುಗಾಟವನ್ನು ಸ್ಥಗಿತಗೊಳಿಸಿ ಕೋವಿಡ್-೧೯ ವೈರಸ್ ನಿರ್ಮೂಲನೆ ಜನತೆ ಕರ ಜೋಡಿಸಬೇಕು.ಅಲ್ಲದೆ ಸರ್ವರೂ ಲಭ್ಯತೆಯ ಸಮಯದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೂಲಕ ಆರೋಗ್ಯ ಸಮೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ಹೇಳಿದರು.
ಅವರು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಕೋವಿಡ್-೧೯ ವಿರುದ್ದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಸಲುವಾಗಿ ಕೋವಿಡ್-೧೯ ಟಾಸ್ಕ್ ಪೋರ್ಸ್ ಅಧಿಕಾರಿಗಳ ಮತ್ತು ಪ್ರಮುಖರ ಸಭೆಯಲ್ಲಿ ಮೇ.7 ರಂದು ಮಾತನಾಡಿದರು. ಟಾಸ್ಕ್ ಫೊರ್ಸ್ ಸದಸ್ಯರು ಸದಾ ಜಾಗೃತರಾಗಿ ಕಾರ್ಯಪ್ರವೃತ್ತರಾಗಬೇಕು.ಅಲ್ಲದೆ ಪಂಚಾಯತ್ ವ್ಯಾಪ್ತಿಯಲ್ಲಿ ರೋಗ ಲಕ್ಷಣವಿರುವ ಜನರಿಗೆ ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಧೈರ್ಯ ತುಂಬುತ್ತಾ ಅವರು ಹೊರಗಡೆ ಹೋಗದಂತೆ ಎಚ್ಚರ ವಹಿಸಬೇಕು.ಅಲ್ಲದೆ ಮುಂದೆ ಮೂರನೇ ಅಲೆಯು ಅಕ್ಟೋಬರ್ ಸಮಯದಲ್ಲಿ ಬರುತ್ತದೆ ಎಂಬುದು ತಜ್ಞರ ಹೇಳಿಕೆಯಾಗಿದೆ.ಆದುದರಿಂದ ಎರಡನೇ ಅಲೆಯನ್ನು ಗ್ರಾಮೀಣ ಭಾಗದಲ್ಲಿ ಹಬ್ಬದಂತೆ ಕ್ರಮ ವಹಿಸಿ ಮೂರನೇ ಅಲೆ ಬಾರದ ರೀತಿಯಲ್ಲಿ ಈಗಿನಿಂದಲೇ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಬೇಕು. ಅಲ್ಲದೆ ಈ ಸಮಯದಲ್ಲಿ ಡೆಂಗ್ಯೂ ಜ್ವರದ ಹಾವಳಿಯು ಇರುವುದರಿಂದ ಮನೆಯ ಪಕ್ಕದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಹೆಚ್ಚಿನ ಕ್ರಮವಹಿಸಬೇಕು. ಅನಗತ್ಯವಾಗಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

*ಆರೋಗ್ಯ ಸಮೃದ್ಧಿಗೆ ಕಟ್ಟುನಿಟ್ಟಿನ ಕ್ರಮ: ಠಾಣಾಧಿಕಾರಿ ಓಮನಾ*
ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ಜನತೆಯ ಆರೋಗ್ಯ ಸಮೃದ್ಧಿಯ ಹಿತದೃಷ್ಠಿಯಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು.ಅನವಶ್ಯಕವಾಗಿ ತಿರುಗಾಡುತ್ತಿದ್ದವರಿಗೆ ಈ ತನಕ ಕೇವಲ ಜಾಗೃತಿ ಮಾತುಗಳನ್ನು ಹೇಳಿ ಬಿಡಲಾಗುತ್ತಿತ್ತು.ಆದರೆ ಮುಂದೆ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು.ಕಾನೂನು ಪ್ರಕಾರವಾಗಿ ಇದಕ್ಕೆ ಸರ್ವರೂ ಸಹಕರಿಸಬೇಕು.ಕೊರೋನಾವನ್ನು ನಾವೆಲ್ಲರೂ ಜಾಗೃತರಾಗಿ ನಿಯಂತ್ರಣಕ್ಕೆ ತರಬೇಕು. ಜನತೆ ಎಲ್ಲರೂ ಬೆಳಗ್ಗೆ ಮತ್ತು ಸಂಜೆ ಹಬೆಯನ್ನು ತೆಗೆದುಕೊಂಡು ಬಿಸಿ ನೀರು ಕುಡಿಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕುಲ್ಕುಂದ, ಪಂಜ ಮತ್ತು ಗುತ್ತಿಗಾರಿ ಮೂರು ಕಡೆಯಲ್ಲಿ ಚೆಕ್‌ಪೋಸ್ಟ್ ರಚನೆ ಮಾಡಿ ದಿನದ ೨೪ ಗಂಟೆ ನಿರಂತರವಾಗಿ ತಪಾಸಣೆ ನಡೆಸಲಾಗುತ್ತಿದೆ.ಮುಂದೆ ಅನಗತ್ಯವಾಗಿ ತಿರುಗಾಡುವವವರಿಗೆ ಕಾನೂನುಕ್ರಮ ಜರುಗಿಸಲಾಗುವುದು ಆದುದರಿಂದ ಸರ್ವರೂ ಎಚ್ಚರವಹಿಸುವುದು ಸೂಕ್ತ ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನಾ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಲಲಿತಾ ಗುಂಡಡ್ಕ ವಹಿಸಿದ್ದರು.ಉಪಾಧ್ಯಕ್ಷೆ ಸವಿತಾ ಭಟ್, ಪಿಡಿಓ ಮುತ್ತಪ್ಪ ಧವಳಗಿ, ಕಾರ್ಯದರ್ಶಿ ಮೋಹನಪ್ಪ.ಡಿ, ನಿಕಟಪೂರ್ವ ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ ವೇದಿಕೆಯಲ್ಲಿದ್ದರು. ಗ್ರಾ.ಪಂ.ಸಿಬ್ಬಂಧಿ ರಘು ಎನ್.ಬಿ ವಂದಿಸಿದರು.ಗ್ರಾ.ಪಂ ಸದಸ್ಯರು,ಸಿಬ್ಬಂಧಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಉದ್ಯಮಿಗಳು, ಪ್ರಮುಖರು, ಪೋಲೀಸ್ ಸಿಬ್ಬಂಧಿಗಳು ಪ್ರಂಟ್‌ಲೈನ್ ವಾರಿಯಸ್೯ಗಳಾದ ಪತ್ರಕರ್ತರು, ಕೊರೋನಾ ಟಾಸ್ಕ್ ಫೋರ್ಸ್ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.