Breaking News

ಸಂಪಾಜೆಯಲ್ಲಿ ಕೊರೋನಾ ಕಾರ್ಯಪಡೆ ಸಭೆ

Advt_Headding_Middle

ಸಂಪಾಜೆ ಗ್ರಾಮ ಪಂಚಾಯತ್ ನ  ಕೊರೋನಾ ಕಾರ್ಯಪಡೆ ಸಬೆಯು ಗ್ರಾಮ ಪಂಚಾಯತ್ ಸಬಾ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಗೂನಡ್ಕ ದರ್ಕಾಸ್ತು  ಆರೋಗ್ಯ  ಕೇಂದ್ರದ ಸಹಾಯಕಿ ಬಗ್ಗೆ,  ಸಂಪಾಜೆ ಆರೋಗ್ಯ ಕೇಂದ್ರದಲ್ಲಿ ಸಹಾಯಕಿಯರು ಇಲ್ಲದ ಬಗ್ಗೆ, ನಿರ್ಣಯವನ್ನು ಕೈಗೊಂಡು ಸರ್ಕಾರಕ್ಕೆ ಕಳಿಸಿ  ಕೂಡಲೇ ಸಹಾಯಕಿ ಕೇಂದ್ರಕ್ಕೆ ಸಿಬ್ಬಂದಿ ನೇಮಕಾತಿ ಮಾಡಬೇಕೆಂದು ತೀರ್ಮಾನಿಸಲಾಯಿತು.

ಸಭೆಗೆ  ಆರೋಗ್ಯ ಸಹಾಯಕಿ ಬಾರದ ಬಗ್ಗೆ, ವ್ಯಾಕ್ಸಿನ್ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಪೇಟೆಯಲ್ಲಿ ಅಂಗಡಿ ಮುಂದೆ ಜನರು ನಿಲ್ಲಲು ಮಾರ್ಕ್, ಮಾಡುವುದು ,ಸಾಮಾಜಿಕ ಅಂತರ ಕಾಪಾಡುವುದು, ವಾಹನ ಪೇಟೆಗೆ ಬಿಡದೆ, ಜನ ಸಂದಣಿ ಕಡಿಮೆ ಮಾಡುವ
ವಿಚಾರದಲ್ಲಿ ಚರ್ಚೆ ನಡೆಯಿತು. ಸಂಜೆ ವೇಳೆ, ಇತರ ಸಮಯದಲ್ಲಿ ವ್ಯಾಪಾರ ಮಾಡುವವರ ಬಗ್ಗೆ ಕ್ರಮ ಕೈಗೊಳ್ಳುವ  ವಿಚಾರದಲ್ಲಿ ಚರ್ಚೆ ಆಯಿತು.
ಸಭೆಯಲ್ಲಿ ಪಿಡಿಒ ಸರಿತಾ ಡಿಸೋಜಾ, ಸದಸ್ಯರುಗಳಾದ ಸೋಮಶೇಖರ್ ಕೊಯಿಂಗಾಜೆ, ಜಗದೀಶ್ ರೈ ,ಸವಾದ್ ,ಅಬೂಸಾಲಿ, ರಜನಿ ಶರತ್, ಹನೀಫ್ ಎಸ್.ಕೆ., ವಿಮಲಾ ಪ್ರಸಾದ್, ಸುಮತಿ ಶಕ್ತಿವೇಲು, ವಿಜಯ್ ಕುಮಾರ್,  ಆಶಾಕಾರ್ಯಕರ್ತೆ  ಪ್ರೇಮಲತಾ, ಸವಿತಾ ರೈ, ಕೋಮಲಾಂಗಿ, ಮೋಹನಾಂಗಿ, ಅಂಗನವಾಡಿ ಕಾರ್ಯಕರ್ತೆಯರಾದ ಧರ್ಮಕಲ ,ಶಾರದಾ,ಹರ್ಷಿತಾಕುಮಾರಿ, ಶಿಲಾವತಿ, ಜಯಲಕ್ಷ್ಮಿ,  ಸಂಘ ಸಂಸ್ಥೆಗಳ. ಕೆ. ಪಿ. ಜಾನಿ, ತಾಜ್ ಮಹಮದ್, ಅಜರುದ್ದೀನ್, ತಾಜ್ ಟರ್ಲಿ, ರಝಕ್ ಸೂಪರ್, ಕಾಂತಿ ಮೋಹನ್,ನಾಗೇಶ್,ಪಿ. ಆರ್. ಸದಾನಂದ ರೈ,ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.