Breaking News

ರಾಜ್ಯದಲ್ಲಿ ಆದೇಶ ಹೊರಡಿಸಲು ಮಾತ್ರ ಸರ್ಕಾರವಿರುವುದಲ್ಲ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು — ಶೌವಾದ್ ಗೂನಡ್ಕ

Advt_Headding_Middle

ರಾಜ್ಯ ಸರ್ಕಾರವು “ಅಘೋಷಿತ ಲಾಕ್ ಡೌನ್” ಬಿಗಿ ಕ್ರಮಗಳ ಮೂಲಕ ಮೇ.24 ರವರೆಗೆ ಕೋವಿಡ್ ಕರ್ಫ್ಯೂವನ್ನು ಮುಂದುವರೆಸಿದೆ. ಬಹುತೇಕ ಈ ಹಿಂದಿನ ನಿಯಮಗಳನ್ನೇ ಮುಂದುವರೆಸಿದ್ದು ಇಲ್ಲಿ ಯಾವುದೇ ಬಿಗಿಕ್ರಮಗಳು ನಮಗೆ ಕಂಡುಬರುವುದಿಲ್ಲ. ರಾಜ್ಯದಲ್ಲಿ ಪ್ರಸ್ತುತ ಆದೇಶಗಳನ್ನು ಹೊರಡಿಸಲು ಮಾತ್ರ ಸರ್ಕಾರವಿದ್ದು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಇದು ನಾಮಕಾವಸ್ತೆಯ ಸರ್ಕಾರವೆಂದು ಕೆ.ಪಿ.ಸಿ.ಸಿ.ವಕ್ತಾರ ಶೌವಾದ್ ಗೂನಡ್ಕರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಕೋವಿಡ್ – 19 ನಿರ್ವಹಣೆಯಲ್ಲಿ ಸರ್ಕಾರದಲ್ಲೇ ಸಮನ್ವಯತೆಯಿಲ್ಲ. ಆರೋಗ್ಯ ಸಚಿವರನ್ನು ಮೂಲೆಗುಂಪು ಮಾಡಲಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರ ಜೀವನ ಪರಿಸ್ಥಿತಿ ಕೊರೋನಾಗಿಂತಲೂ ಭೀಕರವಾಗಿದ್ದು ಸರ್ಕಾರಕ್ಕೆ ಎಲ್ಲವೂ ಕಾಣುತ್ತಿದ್ದರೂ ಕೂಡ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ. ಮುಖ್ಯಮಂತ್ರಿಗಳು ಜನಪರವಾದ ಯೋಜನೆಗಳನ್ನು ನೀಡದೆ ಕಾರ್ಮಿಕರನ್ನು, ಬಡ ವ್ಯಾಪಾರಸ್ಥರನ್ನು, ದಿನಗೂಲಿ ನೌಕರರನ್ನು ಮನೆಯಲ್ಲಿ ಕುಳಿತುಕೊಳ್ಳಲು ಸೂಚಿಸುತ್ತಿದ್ದಾರೆ. ಅವರ ಜೀವನ ನಿರ್ವಹಣೆಗೆ ಸರ್ಕಾರ ಸಹಾಯಹಸ್ತವನ್ನು ನೀಡುವ ಮೂಲಕ ರಾಜ್ಯದಲ್ಲಿ ಸರ್ಕಾರ ಜೀವಂತವಿದೆ ಎಂದು ತೋರ್ಪಡಿಸಿ ಆ ನಂತರ ಬಿಗಿಕ್ರಮಗಳನ್ನು ಜಾರಿಗೊಳಿಸಿ ಎಂದು ಶೌವಾದ್ ಗೂನಡ್ಕರವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.