Breaking News

ಮಂಡೆಕೋಲು ಕೋವಿಡ್ ಟಾಸ್ಕ್ ಪೋರ್ಸ್ ಸಮಿತಿ ಸಭೆ

Advt_Headding_Middle

ಮಂಡೆಕೋಲು, ಪೇರಾಲು ಶಾಲೆ ಕೋವಿಡ್ ಕೇರ್ ಸೆಂಟರ್

ಮಂಡೆಕೋಲು ಗ್ರಾಮದ ಕೋವಿಡ್ ಟಾಸ್ಕ್ ಪೋರ್ಸ್ ಸಭೆಯು ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲುರವರ ಅಧ್ಯಕ್ಷತೆಯಲ್ಲಿ ಮೇ.07 ರಂದು ಅಮೃತ ಸಹಕಾರ ಸದನ ಸಭಾಂಗಣದಲ್ಲಿ ನಡೆದಿದ್ದು ಗ್ರಾಮದಲ್ಲಿ ಕೊರೋನಾ ಹರಡುವಿಕೆಯನ್ನು ಹತೋಟಿಗೆ ತರಲು ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಅತೀ ಹೆಚ್ಚು ಕೊರೋನಾ ಪಾಸಿಟಿವ್ ಬಂದಿರುವ ದೇವರಗುಂಡ ಭಾಗವನ್ನು ಕಂಟೈನ್ಮೆಂಟ್ ಏರಿಯಾ ಎಂದು ಘೋಷಿಸುವುದು. ಗ್ರಾಮದಲ್ಲಿ ಕೊರೋನಾ ಕೇರ್ ಸೆಂಟರ್ ಗಳಾಗಿ ಮಂಡೆಕೋಲು, ಪೇರಾಲು ಹಾಗೂ ಮಾರ್ಗ ಶಾಲೆಗಳನ್ನು ಬಳಸಿಕೊಳ್ಳುವುದು, ಧ್ವನಿವರ್ಧಕಗಳ ಮೂಲಕ ಗ್ರಾಮದಾದ್ಯಂತ ಜನತೆಯಲ್ಲಿ ಜಾಗೃತಿ ಮೂಡಿಸುವುದು, ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಿರುವ ಉದ್ದಂತಡ್ಕ ಹಾಗೂ ದೇವರಗುಂಡ ಭಾಗಗಳಿಗೆ ಟಾಸ್ಕ್ ಪೋರ್ಸ್ ಸಮಿತಿ ಭೇಟಿ ನೀಡಿ ಅರೋಗ್ಯ ತಪಾಸಣೆ ಹಾಗೂ ಅರೋಗ್ಯ ಮಾರ್ಗಸೂಚಿಗಳನ್ನು ನೀಡುವುದು, ದಿನಸಿ ಸಾಮಾಗ್ರಿಗಳು ಹಾಗೂ ಅಗತ್ಯ ಸಾಮಾಗ್ರಿಗಳನ್ನು ಸ್ಥಳೀಯವಾಗಿ ಖರೀದಿಸುವುದು, ವರ್ತಕರು ಕೋವಿಡ್ ನಿಯಮಗಳನ್ನು ಕಡ್ಡಾಯ ಪಾಲಿಸುವುದು ಹಾಗೂ ಗ್ರಾಹಕರಿಗೆ ನಿಯಮ ಪಾಲಿಸುವಂತೆ ಸೂಚನೆ ನೀಡಬೇಕು. ನಿಯಮ ಪಾಲಿಸದ ವರ್ತಕರಿಗೆ ದಂಡ ವಿಧಿಸುವುದರ ಜೊತೆ ವ್ಯಾಪಾರ ಪರವಾನಿಗೆಯನ್ನು ರದ್ದುಪಡಿಸಲಾಗುವುದು, ಸಾರ್ವಜನಿಕರು ಅನಾವಶ್ಯಕ ಗುಂಪು ಸೇರಿದ್ದು ಕಂಡುಬಂದಲ್ಲಿ ದಂಡ ಸಹಿತ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗ್ರಾಮದೊಳಗೆ ಆಟೋಟ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಲಾಗುವುದು. ಸ್ಥಳೀಯ ಅಂಗಡಿಗಳಲ್ಲಿ ನಿಗಧಿತ ದರಕ್ಕಿಂತ ದುಪ್ಪಟ್ಟು ಅಥವಾ ಗಮನಾರ್ಹ ಹೆಚ್ಚುವರಿ ದರ ಪಡಕೊಂಡಲ್ಲಿ ಅಂತಹ ಅಂಗಡಿಗಳ ವಿರುದ್ಧ ದಂಡ ಸಹಿತ ಕಠಿಣ ಕ್ರಮ ಕೈಗೊಳ್ಳವುದು, ಈಗಾಗಲೇ ಪಾಸಿಟಿವ್ ಬಂದ ವ್ಯಕ್ತಿಗಳ ಅಥವಾ ಅವರ ಮನೆಯವರ ಸಂಪರ್ಕಕ್ಕೆ ಬಂದವರು ಸ್ವಯಂ ಕ್ವಾರಂಟೈನ್ ಒಳಗಾಗಿ ಸಹಕರಿಸುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.