Breaking News

ಆಲೆಟ್ಟಿ ಪಂಚಾಯತ್ ಸದಸ್ಯ ಚಂದ್ರಕಾಂತ್ ನೇತೃತ್ವದಲ್ಲಿ ಮನೆ ಬಾಗಿಲಿಗೆ ಅಗತ್ಯ ವಸ್ತುಗಳ ಉಚಿತ ಸಾಗಾಟ ವ್ಯವಸ್ಥೆ

Advt_Headding_Middle

ಕೊರೋನಾ ಲಾಕ್ ಡೌನ್ ಹೇರಿದರಿಂದ ಜನರಿಗೆ ಬೇಕಾಗುವ ದಿನನಿತ್ಯದ ಸಾಮಗ್ರಿಗಳನ್ನು ಖರೀದಿಸಲು ಬೆಳಗ್ಗೆ ಗಂಟೆ 6 ರಿಂದ 9ರ ವರೆಗೆ ನಿಗದಿಪಡಿಸಿದ ಸಂದರ್ಭ ಎಲ್ಲರೂ ಮುಗಿಬಿಳುವುದರಿಂದ ಸೋಂಕು ಹರಡುವಿಕೆಯ ತೀವ್ರತೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಅಲೆಟ್ಟಿ ಗ್ರಾಮದ ಆಯ್ದ ಸ್ಥಳಗಳಿಗೆ ಪಂಚಾಯತ್ ಸದಸ್ಯ ಚಂದ್ರಕಾಂತ ನಾರ್ಕೋಡು ನೇತೃತ್ವದಲ್ಲಿ ಸ್ಥಳೀಯ ಯುವಕರ ಸಹಕಾರದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳನ್ನು ಮನೆಬಾಗಿಲಿಗೆ ಉಚಿತವಾಗಿ ಸಾಗಾಟದ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ. ನಿಗದಿ ಪಡಿಸಿದ ಸ್ಥಳದ ನಿವಾಸಿಗಳು ಮುಂಚಿತವಾಗಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಈ ಕೆಳಗೆ ನಮೂದಿಸಿದ ದೂರವಾಣಿ ಸಂಖ್ಯೆ ಹಾಗೂ ವಾಟ್ಸಪ್ ಮೂಲಕ ಈ ಕೆಳಗೆ ಕೊಟ್ಟಿರುವ ನಂಬರಿಗೆ ಒಂದು ದಿನದ ಮುಂಚಿತವಾಗಿ ಸಂಜೆ 4 ರಿಂದ 6 ಗಂಟೆಯ ಒಳಗಾಗಿ ತಿಳಿಸಿದರೆ ಉಚಿತವಾಗಿ ತಲುಪಿಸವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ಆಲೆಟ್ಟಿ ಗ್ರಾಮದ ಕಟ್ಟೆಕ್ಕಳ, ಭೂತಕಲ್ಲು, ಮೈಂದೂರು,
ಬಾಳೆಬಲ್ಪು, ಕುಂಚಡ್ಕ, ಕುಡೆಕಲ್ಲು, ಏಣಾವರ, ಕಲ್ಲೆಂಬಿ, ಹಾರ್ಕಜೆ, ನಡುಮನೆ, ಗುಳಿಗನಕಲ್ಲು, ಬೊಳ್ಳೂರು, ಚಳ್ಳಂಗಾರು , ಕಳ್ಗಿ, ಗುಡ್ಡೆಮನೆ, ಕುದ್ಕುಳ್ಳಿ, ಮೊರಂಗಲ್ಲು, ಮಿತಡ್ಕ ಭಾಗದ ಮನೆಗಳಿಗೆ ತಲುಪಿಸಬಹುದು. ಅಗತ್ಯ ವಸ್ತುಗಳನ್ನು ಖರೀದಿಸಿದ ಸಾಮಗ್ರಿಗಳ ಮೊತ್ತವನ್ನು ನೀಡತಕದ್ದು. ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆಗಳು:
9448248713
-9741417686,
-8197042498
-9483850890
-9148628525

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.