Breaking News

ಡಿ.ಕೆ. ಆನಂದ ದೊಡ್ಡಕುಮೇರಿ ನಿಧನ

Advt_Headding_Middle

ತೊಡಿಕಾನ ಗ್ರಾಮದ ದೊಡ್ಡಕುಮೇರಿ ಡಿ. ಕೆ. ಆನಂದ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಮೇ. 8 ರಂದು ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಇವರು ಹಲವು ಸಮಯಗಳಿಂದ ಕಿಡ್ನಿ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದರು. ವಾರದ ಹಿಂದೆ ಕಿಡ್ನಿ ಸಮಸ್ಯೆ ಹಾಗೂ ಉಸಿರಾಟದ ಸಮಸ್ಯೆ ಉಲ್ಬಣಿಸಿದಾಗ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. 

ಮೇ. ೮ರಂದು ಮುಂಜಾನೆ ಆರೋಗ್ಯ ಸಮಸ್ಯೆ ಕಾಡಿದಾಗ ಮನೆಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು. ಅಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿದರು. ಮಂಗಳೂರಿಗೆ ತಲುಪುತ್ತಿದ್ದಂತೆ ಕೊನೆಯುಸಿರೆಳೆದರೆನ್ನಲಾಗಿದೆ.
ಮೃತರು ಪತ್ನಿ ಲಲಿತಾ , ಓರ್ವ ಪುತ್ರ ಲಿಖಿತ್ ಕುಮಾರ್ , ಸಹೋದರ ಅರಂತೋಡು ಪಂಚಾಯತ್ ಸಿಬ್ಬಂದಿ ಚೌಕಾರು ,ಸಹೋದರಿ ಸೀತಾ ರನ್ನು ಅಗಲಿದ್ದಾರೆ.
ಡಿ.ಕೆ. ಆನಂದರವರು ಹಲವು ವರ್ಷ ತಾಲೂಕು ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರೀಯರಾಗಿದ್ದರು. ತೊಡಿಕಾನ ದೊಡ್ಡಕುಮೇರಿಯ ಆದಿ ನಾಗಬ್ರಹ್ಮ ದೈವಸ್ಥಾನ ಸಮಿತಿಯಲ್ಲೂ ತೊಡಗಿಸಿಕೊಂಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.