Breaking News

ಆಶಾ ಕಾರ್ಯಕರ್ತರ ನೇಮಕ ಕೋರಿ ಎಂ ಬಿ. ಸದಾಶಿವರಿಂದ ಮನವಿ

Advt_Headding_Middle


ಸುಳ್ಯ ನಗರ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರನನ್ನು ನೇಮಕ ಮಾಡುವಂತೆ ಎಂ ಬಿ. ಸದಾಶಿವರವರು ಮನವಿ ಮಾಡಿದ್ದಾರೆ.

ಸುಳ್ಯ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕೋವಿಡ್ ೧೯ರ ನಿಯಂತ್ರಣದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಪಾತ್ರ ಅತೀ ಮುಖ್ಯ ವಾಗಿದೆ. ಮನೆ ಮನೆ ತೆರಳಿ ಜಾಗೃತಿ ಮಾಹಿತಿ ಮುಂತಾದ ಕೆಲಸಗಳೊಂದಿಗೆ ವೈದ್ಯಕೀಯ ಇಲಾಖೆ ಯೊಡನೆ ನಿಕಟ ಸಂಪರ್ಕ, ಸೊಂಕೀತರ ಚಲನ ವಲನ ಗಮನ ಹರಿಸುವುದೇ ಮುಂತಾದ ಕ್ಲಿಷ್ಟ ಕೆಲಸಗಳನ್ನು ನಿಭಾಯಿಸಿದ್ದಾರೆ.
ಸುಳ್ಯ ನಗರ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರು ಇಲ್ಲದೆ ಇರುವುದು ಸೊಂಕೀತರ ಮಾಹಿತಿ ಅವರ ಸಂಪರ್ಕ ಗಳ ಬಗ್ಗೆ ಮತ್ತು ಲಸಿಕೆ ಪಡೆದುಕೊಳ್ಳುವಂತೆ ಎಲ್ಲಾ ಮನೆಗಳಿಗೆ ಭೇಟಿ ನೀಡಿ ತಿಳಿಸಲು ಸಮಸ್ಯೆಯಾಗಿ ಪರಿಣಮಿಸಿದೆ. ಸುಳ್ಯ ನಗರವು ವಿಸ್ತೀರ್ಣವಾಗಿದ್ದು ದುಗ್ಗಲಡ್ಕ, ಕೊಯಿಕುಳಿ, ಪಾರಿವಾರಕಾನದ ವರೆಗೆ ಚಾಚಿಕೊಂಡಿದ್ದು ಅರೋಗ್ಯ ಇಲಾಖೆಯ ಸಿಬ್ಬಂದಿಗಳ ಕೊರತೆ ಇರುವುದರಿಂದ ತಕ್ಷಣ ಆಶಾ ಕಾರ್ಯಕರ್ತೆಯರನ್ನು ನೇಮಿಸಬೇಕು. ಕನಿಷ್ಠ ತಾತ್ಕಾಲಿಕ ನೆಲೆಯಾಲ್ಲಾದರೂ ನೇಮಿಸಬೇಕು. ಗೃಹ ರಕ್ಷಕದಳದಲ್ಲಿ ಆರ್ಥಿಕ ಕಾರಣಕ್ಕೆ ಕೈ ಬಿಟ್ಟ ಅನೇಕರು ಬದ್ಧತೆ ಉಳ್ಳವರಾಗಿದ್ದು ಅವರನ್ನೂ ಪರಿಗಣಿಸಿ ಸಮಾರೋಪಾದಿಯಲ್ಲಿ ಸಾಂಕ್ರಾಮಿಕ ರೋಗ ಹಬ್ಬುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಎಂ ಬಿ. ಸದಾಶಿವರವರು ಮನವಿ ಮಾಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.