Breaking News

ಕೊಲ್ಲಮೊಗ್ರು ಗ್ರಾ. ಪಂ. ಅಧ್ಯಕ್ಷ ಉದಯ ಕೊಪ್ಪಡ್ಕ ರಿಂದ ಅರಣ್ಯಾಧಿಕಾರಿಗಳ ಮೇಲೆ ಪೊಲೀಸ್ ದೂರು

Advt_Headding_Middle

ಕೊಲ್ಲಮೊಗ್ರು ಗ್ರಾ. ಪಂ. ಅಧ್ಯಕ್ಷ ಉದಯ ಕೊಪ್ಪಡ್ಕ ರಿಂದ ಅರಣ್ಯಾಧಿಕಾರಿಗಳಾದ ಅಪೂರ್ವ ಮತ್ತು ಪ್ರಕಾಶ್ ಅಗಸಿಮನಿ ಮೇಲೆ ಮೇ. 7 ರಂದು ಪೊಲೀಸ್ ದೂರು ನೀಡಿದ್ದಾಗಿ ವರದಿಯಾಗಿದೆ.

ಉದಯರು ತಮ್ಮ ದೂರಿನಲ್ಲಿ ತಮ್ಮ ಚಿಕ್ಕಪ್ಪನವರ ಸ್ವಂತ ಕಟ್ಟಡದಲ್ಲಿ ಕೋವಿಡ್ ಕಾರ್ಯಲಯ ತೆರೆದಿದ್ದು ಕೋವಿಡ್ ಸೋಂಕಿತರ ಮನೆಗೆ ಆಹಾರ ಮತ್ತು ಔಷಧಿಗಳನ್ನು ಒದಗಿಸುತ್ತಾ ಬಂದಿರುವುದಾಗಿದೆ ಎಂದಿನಂತೆ ಮೇ.೪ ರಂದು ರಾತ್ರಿ ಕೊರೋನಾ ಕಾರ್ಯಪಡೆಯ ಸದಸ್ಯರು ಆಹಾರ ಮತ್ತು ಔಷಧ ನೀಡಲು ತೆರಳುವ ಸಂದರ್ಭದಲ್ಲಿ ಅಪೂರ್ವ ಪಾರೆಸ್ಟರ್ ನೇತೃತ್ವದಲ್ಲಿ ಆಗಮಿಸಿದ ಆಗಮಿಸಿ ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಟಾರ್ಚ್ ಬೆಳಕನ್ನು ಮುಖಕ್ಕೆ ಹಾಯಿಸುತ್ತಾ ಪಿರ್ಯಾದಿದಾರರ ಕೋವಿಡ್ ಕಾರ್ಯಾಲಯಕ್ಕೆ ಬಂದು ಅವರನ್ನು ಬೆದರಿಸುತ್ತಾ .ನೀವು ನಮ್ಮ ವಾಹನವನ್ನು ಬೈಕಿನಲ್ಲಿ ಹಿಂಬಾಲಿಸಿರುವುದಾಗಿ ಅನಾವಶ್ಯಕವಾಗಿ ನಿಂದಿಸುತ್ತಾ ನಿಮಗೇನು ಕೆಲಸ ನೀವು ಯಾರು ಎಂದು ಗದರಿಸಿದ್ದಾರೆ. ನಾನು ಗುರುತಿನ ಕಾರ್ಡ್ ತೋರಿಸಿ ನಾನು ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಎಂಬುದಾಗಿ ಮನವರಿಕೆ ಮಾಡಿದರೂ ತಂಡದಲ್ಲಿದ್ದ ಪ್ರಕಾಶ್ ಅಗಸಿಮನಿ ಎಂಬುವರು ನಾನು ಖಾಕಿ ಹಾಕಿದ್ದೇನೆ ಅದನ್ನು ಕೇಳಲು ನೀನು ಯಾರು ಹಾಗೂ ರಾತ್ರಿ ಪಾಳಿ ಕೋವಿಡ್ ಕೆಲಸ ನಮಗೆ ನೀಡಿರುತ್ತಾರೆ ಎಂದು ಸುಳ್ಳು ಹೇಳಿಕೆ ನೀಡುತ್ತಾ ತನ್ನನ್ನು ದೂರಕ್ಕೆ ತಳ್ಳಿ ದೈಹಿಕವಾಗಿ ಕೈಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿರುತ್ತಾರೆ ಹಾಗೂ ಕಾರ್ಯಕ್ಕೆ ತಡೆ ಮಾಡಿರುತ್ತಾರೆ ಎಂಬಿತ್ಯಾದಿ ದೂರಿನಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರು ದೂರು ದಾಖಲಿಸಿ ಕಲಂ ೫೦೪, ೫೦೬,೩೨೩ ಪ್ರಕಾರ ಕೇಸು ದಾಖಲಿಸಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.