Breaking News

ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ವರದಿ

Advt_Headding_Middle

ಅನಾರೋಗ್ಯ ಪೀಡಿತ ಅಟೋಚಾಲಕನ ಚಿಕಿತ್ಸೆಯ ಮನವಿಗೆ ಸ್ಪಂದಿಸಿದ ಜನತೆ

ಖಾತೆಗೆ ಜಮೆಯಾಯಿತು ರೂ.4.48 ಲಕ್ಷ

ಅನಾರೋಗ್ಯ ಪೀಡಿತ ಅಟೋಚಾಲಕ ಆಲೆಟ್ಟಿಯ ಅರಂಬೂರು ನಿವಾಸಿ ಅಝೀಝ್ ರವರ ಪುತ್ರ ಅಬ್ದುಲ್ ಫಯಾಜ್ ಕಳೆದ ಕೆಲ ದಿನಗಳ ಹಿಂದೆ ಅಪೆಂಡಿಕ್ಸ್ ಖಾಯಿಲೆಗೆ ತುತ್ತಾಗಿದ್ದು ಅವರನ್ನು ಮಂಗಳೂರಿನ ಅಥೆನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯಂತೆ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚ ತಗುಲಲಿದ್ದು ಕಡು ಬಡತನದಲ್ಲಿರುವ ಆತನ ಮನೆಯವರಿಗೆ ಅಷ್ಟೊಂದು ಹಣ ಹೊಂದಿಸಲು ಕಷ್ಟ ಸಾಧ್ಯವಾಗಿತ್ತು.ಇದನ್ನು ಮನಗಂಡ ಯುವಕರ ತಂಡ ಯುವಕನ ಚಿಕಿತ್ಸೆಗಾಗಿ ನೆರವು ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ವೆಬ್ ಸೈಟ್ ಮೂಲಕ ಮನವಿ ಮಾಡಿಕೊಂಡರು.ಜತೆಗೆ ಅಬ್ದುಲ್ ಫಯಾಜ್ ರವರ ಖಾತೆ ಸಂಖ್ಯೆಯ ವಿವರ ನೀಡಲಾಗಿತ್ತು. ಸುದ್ದಿಯನ್ನು ಗಮನಿಸಿದ ಹಲವಾರು ಮಂದಿ ಖಾತೆಗೆ ಹಣ ಜಮೆ ಮಾಡಿದರು. ಇದೀಗ ಖಾತೆಯಲ್ಲಿ ಒಟ್ಟು ರೂ.4 , 48, 264/- ಜಮೆಯಾಗಿದ್ದು ಚಿಕಿತ್ಸೆಯ ವೆಚ್ಚ ಬಂದಿರುವ ಕಾರಣದಿಂದ ಖಾತೆಯನ್ನು ಕ್ಲೋಸ್ ಮಾಡಿರುವುದಾಗಿ ಮತ್ತೆ ಮೇ.8 ರಂದು ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.