Breaking News

ಸರಕಾರ ವಜಾಗೊಳಿಸಿ, ರಾಷ್ಟ್ರಪತಿ ಆಡಳಿತ ತನ್ನಿ : ಮಹಮ್ಮದ್ ಇಕ್ಬಾಲ್ ಎಲಿಮಲೆ

Advt_Headding_Middle

ಜನರ ಸಂಕಷ್ಟಕ್ಕೆ ಸ್ಪಂದಿಸಲು ಸೂಕ್ತ ವ್ಯವಸ್ಥೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಂಪೂರ್ಣವಾಗಿ ಎಲ್ಲಾ ಹಂತದಲ್ಲೂ ವಿಫಲವಾಗಿರುತ್ತದೆ. ತೇಜಸ್ವಿ ಸೂರ್ಯರಂತಹ ಅಪ್ರಬುದ್ಧ ಸಂಸದರು ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೊರೋನಾಕಿಂತ ಮಾರಕವಾದ ಕೋಮು ವೈರಸ್ ಅನ್ನು ಉತ್ಪಾದಿಸುವ ನೀಚ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರದೇ ಪಕ್ಷ ಕೇಂದ್ರ, ರಾಜ್ಯದಲ್ಲಿ ಆಡಳಿತದಲ್ಲಿದ್ದರೂ ಮಾರಕ ರೋಗವಾದ ಕೊರೋನಾ ತಡೆಗಟ್ಟುವಲ್ಲಿ ಸೂಕ್ತ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದನ್ನು ಒಪ್ಪಿಕೊಂಡಿರುತ್ತಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರ ಆಡಳಿತ ಮಾಡಲು ಜನತೆಗೆ ಯೋಗ್ಯ ವ್ಯವಸ್ಥೆ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದು ರಾಷ್ಟ್ರಪತಿಯವರು ದೇಶದ ಜನತೆಯ ಹಿತದೃಷ್ಟಿಯಿಂದ ಈ ಸರಕಾರಗಳನ್ನು ವಜಾ ಗೊಳಿಸಬೇಕು. ಆಕ್ಸಿಜನ್ ಬಗ್ಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ವ್ಯವಸ್ಥೆ ಮಾಡಿರುವುದು ಈ ಸರಕಾರಗಳು ವೈಫಲ್ಯಗೊಂಡಿರುವುದು ಇದಕ್ಕೆ ನಿದರ್ಶನ. ಆದುದರಿಂದ ರಾಷ್ಟ್ರಪತಿಗಳು ಈ ಸರಕಾರವನ್ನು ವಜಾಗೊಳಿಸಿ ಕೂಡಲೇ ಈ ದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ದೇಶದ ಜನತೆಗೆ ಕೊರೊನಕ್ಕೆ ಸೂಕ್ತ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಿ ಸಾವು ನೋವುಗಳನ್ನು ತಪ್ಪಿಸಿ ಜನತೆಯಲ್ಲಿ ಮಾಸಿಹೋಗಿರುವ ಆತ್ಮವಿಶ್ವಾಸವನ್ನು ನಮೂದಿಸಬೇಕಾಗಿ ಒತ್ತಾಯಿಸುತ್ತೇನೆ.
– ಮಹಮ್ಮದ್ ಇಕ್ಬಾಲ್ ಎಲಿಮಲೆ
ರಾಜ್ಯ ಕಾರ್ಯದರ್ಶಿ ಜಾತ್ಯತೀತ ಜನತಾದಳ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.