ಸುಳ್ಯ: ದಲಿತ ಯುವಕನ ಮೇಲೆ ಹಲ್ಲೆ ಆರೋಪ – ಪತ್ರಕರ್ತ ಸೇರಿ ಮೂವರ ಮೇಲೆ ಎಫ್ಐಆರ್ ದಾಖಲು

Advt_Headding_Middle

ಅಜ್ಜಾವರ ಗ್ರಾಮದ ಕಾಂತಮಂಗಲ ಎಂಬಲ್ಲಿ ಸ್ನೇಹಿತನ ಮನೆಗೆ ಸಾಲ ಪಡೆಯಲು ಬಂದಿದ್ದ ಯುವಕನೊಬ್ಬನಿಗೆ ಪತ್ರಕರ್ತರೊಬ್ಬರು ಸೇರಿದಂತೆ ಮೂವರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ದ.ಕ. ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ ರವರ ನೇತೃತ್ವದಲ್ಲಿ ಪೋಲೀಸರಿಗೆ ದೂರು ಹೋಗಿ ಮೂವರ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿರುವ ಘಟನೆ ವರದಿಯಾಗಿದೆ.


ಅಜ್ಜಾವರ ಗ್ರಾಮದ ಕಾಂತಮಂಗಲ ಗಂಧದಗುಡ್ಡೆ ನಿವಾಸಿ ರಾಜೇಶ್ ಎಂಬ ದಲಿತ ಯುವಕ ಕಾಂತಮಂಗಲದಲ್ಲಿ ಬಾಡಿಗೆ ಮನೆಯಲ್ಲಿರುವ ಸುರೇಂದ್ರ ಎಂಬವರಲ್ಲಿಗೆ ಮೇ 13 ರಂದು ಸಂಜೆ 500 ರೂ. ಸಾಲ ಪಡೆಯಲೆಂದು ಹೋಗಿದ್ದಾಗ ಅದೇ ಕಟ್ಟಡದಲ್ಲಿ ಬಾಡಿಗೆಗೆ ವಾಸವಿರುವ ಪತ್ರಕರ್ತರಾದ ಲೋಕೇಶ್ ಗುಡ್ಡಮನೆ , ಅವರ ಸ್ನೇಹಿತರಾದ ವಿಜಯ ಗೌಡ ಮತ್ತು ರಾಮದಾಸ ಎಂಬ ಮೂರು ಜನ ಸೇರಿ ರಾಜೇಶನ ಜಾತಿ ನಿಂದನೆ ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದೂ, ಪೊಲೀಸರಿಗೆ ಈ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಕೊಟ್ಟಿದ್ದಾರೆಂದೂ ರಾಜೇಶರು ಪೋಲೀಸರಿಗೆ ದೂರು ನೀಡಿದರು.


ಮೇ. 14 ರಂದು ರಾಜೇಶ್ ರವರು ಅಂಬೇಡ್ಕರ್ ರಕ್ಷಣಾ ವೇದಿಕೆಯ ದ.ಕ. ಸಮಿತಿ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆಯವರಿಗೆ ತನಗೆ ನ್ಯಾಯ ಕೊಡಿಸುವಂತೆ ಸಂಘಟನೆಗೆ ಮನವಿ ಪತ್ರ ನೀಡಿದ ಹಿನ್ನೆಲೆಯಲ್ಲಿ ಈ ವೇಳೆ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆಯವರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು, ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸುಳ್ಯ ಠಾಣಾಧಿಕಾರಿಯವರನ್ನು ಆಗ್ರಹಿಸಿದರು.


ದೂರು ಸ್ವೀಕರಿಸಿ ಸ್ಥಳ ಪರಿಶೀಲಿಸಿದ ಸುಳ್ಯ ಪೊಲೀಸರು ಲೋಕೇಶ್ ಗುಡ್ಡೆಮನೆ, ವಿಜಯ ಗೌಡ ಮತ್ತು ರಾಮದಾಸ್ ರವರ ಮೇಲೆ ದಲಿತ ನಿಂದನೆ, ಹಲ್ಲೆ ಮತ್ತು ಜೀವ ಬೆದರಿಕೆಯ ಕೇಸು ದಾಖಲು ಮಾಡಿಕೊಂಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.