ನಿವೃತ್ತಿ ಅಂಚಿನಲ್ಲಿರುವ ಸರ್ಕಾರಿ ಉದ್ಯೋಗಿಯ ಮಾನವೀಯ ಕಾರ್ಯ

Advt_Headding_Middle

ಹತ್ತು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ ಕೃಷ್ಣಪ್ಪ ಗೌಡ ಪಡ್ಡಂಬೈಲ್

ಸುದ್ದಿ ಸಹಾಯವಾಣಿಯ ಮುಖಾಂತರ ವಿತರಣೆ


ಇದೇ ತಿಂಗಳ 31 ರಂದು ತನ್ನ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಮಂಗಳೂರಿನ ಪ್ರಸಿದ್ಧ ತಾರಸಿ ಕೃಷಿಕ, ಮಂಗಳೂರಿನ ಸರಕಾರಿ ಶಿಕ್ಷಕ ಶಿಕ್ಷಣ ಕಾಲೇಜಿನ ಪ್ರಥಮ ದರ್ಜೆ ಸಹಾಯಕ ಮೂಲತಃ ಸುಳ್ಯದ ಪಡ್ಡಂಬೈಲು ಕೃಷ್ಣಪ್ಪ ಗೌಡರು 10 ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.


ಸುದ್ದಿ ಸಹಾಯವಾಣಿಯ ಮುಖಾಂತರ ಅರ್ಹ 10 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಕಾರ್ಯ ಮಾಡಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವಲ್ಲಿ ಸೌಹಾರ್ದತೆ ಮೆರೆದಿದ್ದಾರೆ.
ಕೇವಲ ಬಡ ಕುಟುಂಬವಲ್ಲದೆ ಅನಾರೋಗ್ಯದಿಂದ ಹಾಸಿಗೆ ಹಿಡಿದವರಿಗೂ ಪ್ರಾಮುಖ್ಯತೆ ಕೊಟ್ಟಿದ್ದಾರೆ.

ಮಂಗಳೂರಿನ ಕುಲಶೇಖರದ ಮರೋಳಿ ಬಳಿ ನೆಲೆಸಿರುವ ಕೃಷ್ಣಪ್ಪ ಗೌಡರು ತನ್ನ ಮನೆಯ ತಾರಸಿಯ ಮೇಲೆ ಕೃಷಿ ಹಾಗೂ ಭತ್ತದ ಬೆಳೆ ಸಾಧನೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.

ಕಿಟ್ ವಿತರಣೆ ಸಂದರ್ಭ ಕೃಷ್ಣಪ್ಪ ಗೌಡರ ಸಹೋದರ ವಿಜಯ ಪಡ್ಡಂಬೈಲು, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಸುದ್ದಿ ಬಿಡುಗಡೆಯ ವರದಿಗಾರ ಶರೀಫ್ ಜಟ್ಟಿಪಳ್ಳ , ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್, ಸಿದ್ದೀಕ್ ಕೊಕ್ಕೊ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.