ಕೊರೋನಾ ಪಾಸಿಟಿವ್ ಬಂದವರು ಲಸಿಕಾ ಕೇಂದ್ರದಲ್ಲಿ ತಿರುಗಾಡುತ್ತಿದ್ದಾರೆ

Advt_Headding_Middle

ನ.ಪಂ. ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಸದಸ್ಯರ ಆರೋಪ

ಪಾಸಿಟಿವ್ ಬಂದವರ ಬಗ್ಗೆ ದೂರು ಬಂದರೆ ಕೋವಿಡ್ ಸೆಂಟರ್‌ಗೆ ಶಿಫ್ಟ್: ಅಧ್ಯಕ್ಷರ ಎಚ್ಚರಿಕೆ

ಕೊರೋನಾ ಪಾಸಿಟಿವ್ ಬಂದು ಕ್ವಾರಂಟೈನ್‌ನಲ್ಲಿರಬೇಕಾದವರು ತಿರುಗಾಡುತ್ತಿದ್ದಾರೆ. ನಮಗೆ ಆತಂಕವಾಗುತ್ತಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ.ಪಂ. ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಸದಸ್ಯರು ಆರೋಪಿಸಿದ ಹಾಗೂ ಪಾಸಿಟಿವ್ ಬಂದವರು ಮನೆಯಲ್ಲಿರದೆ ತಿರುಗಾಡುತ್ತಿದ್ದಾರೆ ಮಾಹಿತಿ ಬಂದರೆ ಅಂತಹವರನ್ನು ತಕ್ಷಣ ಕೋವಿಡ್ ಸೆಂಟರ್‌ಗೆ ಶಿಫ್ಟ್ ಮಾಡಲಾಗುವುದು ಎಂದು ನ.ಪಂ. ಅಧ್ಯಕ್ಷ ವಿನಯ್‌ಕುಮಾರ್ ಕಂದಡ್ಕ ಎಚ್ಚರಿಕೆ ನೀಡಿದ್ದಾರೆ.

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಟಾಸ್ಕ್ ಫೋರ್ಸ್ ಸಮಿತಿ ಸಭೆಯು ನ.ಪಂ. ಸಭಾಂಗಣದಲ್ಲಿ ಇಂದು ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ದ ನಾಯ್ಕ್, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಇಂಜಿನಿಯರ್ ಶಿವಕುಮಾರ್, ನ.ಪಂ. ಸದಸ್ಯರುಗಳು ಸಭೆಯಲ್ಲಿದ್ದರು.

ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶಪ್ಪ ಕೋವಿಡ್ ನಿಯಾಮವಳಿಗಳ ಕುರಿತು ಹಾಗೂ ಕೋವಿಡ್ ಸೆಂಟರ್ ಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ವೈದ್ಯಾಧಿಕಾರಿ ಮಾತನಾಡಿ ಕೋವಿಡ್ ಬಂದವರು ಯಾರೂ ಕೂಡಾ ಪ್ರೈಮರಿ ಕಾಂಟಕ್ಟ್ ಗಳ ಹೆಸರನ್ನು ಹೇಳುವುದಿಲ್ಲ. ಒಂದು ವಾರದಲ್ಲಿ ಅವರು ಎಲ್ಲೆಲ್ಲಿ ಹೋಗಿದ್ದಾರೋ, ಯಾರ ಸಂಪರ್ಕದಲ್ಲಿದ್ದಾರೋ ಅವರ ಮಾಹಿತಿ ನೀಡಬೇಕು.ಅವರು ನೀಡುವುದಿಲ್ಲವಾದ್ದರಿಂದ ನಾವೇ ಅವರನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕಾಗಿದೆ. ಒಂದುನೆ ಅಥವಾ ಬಿಲ್ಡ್ಂಗ್ ನಲ್ಲಿ ೫ ಅಥವಾ ಅದಕ್ಕಿಂತ ಹೆಚ್ಚು ಬಂದರೆ ಕಂಟೈನ್ ಮೆಂಟ್ ಝೋನ್ ಎಂದು ಗುರುತು ಮಾಡಬೇಕಾಗಿದೆ. ಕೋವಿಡ್ ಬಂದವರಿಗೆ ಮನೆಯಲ್ಲಿ ವ್ಯವಸ್ಥೆ ಇಲ್ಲದಿದ್ದರೆ ಅವರನ್ನು ಕೋವಿಡ್ ಸೆಂಟರ್ ನಲ್ಲಿ ವ್ಯವಸ್ಥೆ ಮಾಡಬಹುದು. ಕೋವಿಡ್ ಬಂದವರು ಹಾಗೂ ಅವರ ಮನೆಯವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು. ಅಸೌಖ್ಯ ಕಂಡು ಬಂದರೆ ಟಾಸ್ಕ್ ಫೋರ್ಸ್ ಸಮಿತಿಗೆ ತಿಳಿಸಿ ಅವರ ಮೂಲಕ ಆಸ್ಪತ್ರೆಗೆ ತಿಳಿಸಿ ನಿಮ್ಮನ್ನು ಆಸ್ಪತ್ರೆಗೆ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಬಳಿಕ ಸದಸ್ಯೆ ಶೀಲಾ ಕುರುಂಜಿಯವರು ನನ್ನ ವಾರ್ಡ್‌ನಲ್ಲಿ ಒಂದು ಮನೆಯ ಇಬ್ಬರಿಗೆ ಪಾಸಿಟಿವ್ ಬಂದಿತ್ತು. ನನಗೆ ಮಹಿತಿ ತಿಳಿದು ನಾವು ಅಲ್ಲಿಗೆ ಹೋದಾಗ ಆರಂಭದಲ್ಲಿ ಫೋಟೋ ತೆಗೆಯಲು ನಿರಾಕರಿಸಿದರು. ವಿಚಾರಿಸುವಾಗ ಆ ಮನೆಯಲ್ಲಿ ಪಾಸಿಟಿವ್ ಬಂದವರಲ್ಲಿ ಒಬ್ಬರು ಇರಲಿಲ್ಲ. ನೋಡುವಾಗ ಅವರು ಸುಳ್ಯದ ಲಸಿಕಾ ಕೇಂದ್ರದಲ್ಲಿ ಇದ್ದಾರೆಂಬ ಮಾಹಿತಿ ತಿಳಿಯಿತು ಎಂದು ಅವರು ಹೇಳಿದರು. ಹೀಗಾದರೆ ಹೇಗೆ? ಎಂದು ಪ್ರಶ್ನಿಸಿದ ಶೀಲಾ ಕುರುಂಜಿ ಪಾಸಿಟಿವ್ ಬಂದು ಮನೆಯಿಂದ ಹೊರಗೆ ಹೋದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಅವರ ಮಾತಿಗೆ ಪೂರಕವಾಗಿ ಮಾತನಾಡಿದ ಎಂ.ವೆಂಕಪ್ಪ ಗೌಡರು ಇದೆಲ್ಲವನ್ನು ನೋಡಿಕೊಳ್ಳಬೇಕಾದವರು ಯಾರು? ಕೆಲವು ಮನೆಯಲ್ಲಿ ಪಾಸಿಟಿವ್ ಬಂದರೆ ಅಲ್ಲಿ ಇರಲು ವ್ಯವಸ್ಥೆ ಆಗುವುದಿಲ್ಲ ಆದರೂ ಅವರನ್ನು ಮನೆಯಲ್ಲೇ ಐಸೊಲೇಷನ್‌ಗೆ ಇಡುತ್ತಾರೆ. ಈ ರೀತಿಯ ಕ್ರಮಗಳು ಸರಿಯಲ್ಲ. ಇದರಿಂದ ರೋಗ ಮನೆಯ ಇತರರಿಗೂ ಹರಡುತ್ತದೆ. ಕೊರೋನಾ ಎಂದರೆ ಚೈನ್ ಸಿಸ್ಟಮ್ ರಿತಿ ಆಗಿದೆ ಎಂದು ಹೇಳಿದರು. ಈ ಕುರಿತು ಚರ್ಚೆಯಾಗುತ್ತಿದ್ದಂತೆ ಮಾತನಾಡಿದ ಅಧ್ಯಕ್ಷ ವಿನಯಕಂದಡ್ಕರು ಪಾಸಿಟಿವ್ ಬಂದು ತಿರುಗಾಡುತ್ತಿದ್ದಾರೆಂದರೆ ಅಂತಹವರ ಮಾಹಿತಿ ನೀಡಿ ನಾವು ಕೋವಿಡ್ ಸೆಂಟರ್‌ಗೆ ಶಿಫ್ಟ್ ಮಾಡೋಣ. ಈಗ ಪಾಸಿಟಿವ್ ವರದಿ ನಮ್ಮ ಕೈಗೆ ಬಂದ ಕೂಡಲೆ ನಮ್ಮ ಸಿಬ್ಬಂದಿಗಳು ಹೋಗಿ ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲಿಸಿ ಬರುತ್ತಾರೆ. ಅಲ್ಲಿ ಸೂಕ್ತ ವ್ಯವಸ್ಥೆ ಇಲ್ಲವಾದರೆ ಕೋವಿಡ್ ಸೆಂಟರ್‌ನ್ ಕುರಿತು ಮಾಹಿತಿ ನೀಡುತ್ತಾರೆ ಎಂದು ಹೇಳಿದರು.

ನ.ಪಂ.ನಿಂದ ಆಹಾರ ಕಿಟ್:

ಪಾಸಿಟಿವ್ ಬಂದವರಿಗೆ ೧೭ ದಿನ ಕ್ವಾರಂಟೈನ್ ಮಾಡುತ್ತೀರಿ. ಆತ ಆ ಮನೆಯ ದುಡಿಯುವ ವ್ಯಕ್ತಿಯಾದರೆ ಅವರಿಗೆ ಆಹಾರದ ವ್ಯವಸ್ಥೆ ಹೇಗೆ? ನ.ಪಂ.ನಿಂದ ಮಾಡುತ್ತೀರೋ ಎಂದು ವೆಂಕಪ್ಪ ಗೌಡರು ಕೇಳಿದರು. ನಾವು ಈಗ ಅಗತ್ಯವೆಂದು ಕಂಡ ೧೬ ಮನೆಗಳಿಗೆ ಆಹಾರ ಕಿಟ್ ವಿತರಿಸಿದ್ದೇವೆ. ನೀವು ಹೇಳಿದ ಸಮಸ್ಯೆ ಎದುರಾದರೆ ಖಂಡಿತವಾಗಿಯೂ ನ.ಪಂ. ಆಹಾರ ಕಿಟ್‌ನ ವ್ಯವಸ್ಥೆ ಕಲ್ಪಿಸುತ್ತದೆ ಎಂದು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.