Breaking News

ಆಲೆಟ್ಟಿ ಪಂಚಾಯತ್ ನಲ್ಲಿ ಕೋವಿಡ್-19 ಕಾರ್ಯಪಡೆ ಸಭೆ

Advt_Headding_Middle

ಆಲೆಟ್ಟಿ ಗ್ರಾಮ ಪಂಚಾಯತ್ ನಲ್ಲಿ ಕೋವಿಡ್-19 ರ ಕಾರ್ಯಪಡೆ ಸಭೆಯು ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ ಮೇ.15 ರಂದು ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು  ಬೇರೆ ರಾಜ್ಯಗಳಿಂದ ಅಥವಾ ಜಿಲ್ಲೆಗಳಿಂದ ಬಂದವರನ್ನು ಗುರುತಿಸಿ ಕಡ್ಡಾಯವಾಗಿ 14 ದಿನ ಹೋಮ್ ಕ್ವಾರಂಟೈನ್ ಮಾಡಬೇಕು. ಕೋವಿಡ್ ಪಾಸಿಟಿವ್ ಪ್ರಕರಣ ದೃಡಪಟ್ಟ ಮನೆಯವರನ್ನು ಕೂಡ ಕ್ವಾರಂಟೈನ್ ಮಾಡಬೇಕು. ಕ್ವಾರಂಟೈನ್ ನಲ್ಲಿ ಇರುವ ಕಡುಬಡವರ ಮನೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ವ್ಯವಸ್ಥೆ ಪಂಚಾಯತ್ ಕಡೆಯಿಂದ ಮಾಡುವುದಾಗಿ ತಿಳಿಸಿದರು.


ನಾವು ನಮ್ಮ ಕರ್ತವ್ಯ ನಿರ್ವಹಿಸುವಾಗ ಕೆಲವು ಮಂದಿ ಸ್ಪಂದಿಸುತ್ತಿಲ್ಲ. ಮನಸ್ಸಿಗೆ ನೋವಾಗುವಂತೆ ಮಾತನಾಡುತ್ತಾರೆ ಎಂದು ಆರೋಗ್ಯಕಾರ್ಯಕರ್ತೆಯರು ತಮ್ಮ ನೋವು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ನೀವು ನಿಮ್ಮ ಕರ್ತವ್ಯ ನಿರ್ವಹಿಸಿ, ಇಂತಹ ಸಂದರ್ಭ ನಿಮಗೇನಾದರು ಸಮಸ್ಯೆ ಉಂಟು ಮಾಡಿದರೆ ಅಥವಾ ನಿಯಮವನ್ನು ಉಲ್ಲಂಘನೆ ಮಾಡಿದರೆ ನೇರವಾಗಿ ಪಂ. ಪಿ.ಡಿ.ಓ ರವರಿಗೆ ತಿಳಿಸಿ ಅಂತವರ ವಿರುದ್ಧ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು. ಈ ಸಂದರ್ಭದಲ್ಲಿ ಪಂ. ಸದಸ್ಯರಾದ ಶಿವಾನಂದ ರಂಗತ್ತಮಲೆ, ರತೀಶನ್ ಅರಂಬೂರು, ಶಶಿಕಲಾ ದೋಣಿಮೂಲೆ, ವೀಣಾಕುಮಾರಿ ಆಲೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಗ್ರಾಮ ಕರಣಿಕರು,ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂ.ಸಿಬ್ಬಂದಿಯವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.