ಕೊರೋನಾ ಆಪತ್ತಿಗೆ ವಿಪತ್ತು ನಿರ್ವಹಣಾ ಘಟಕದ ಮಾನವೀಯ ಕಾರ್ಯ

Advt_Headding_Middle

ಕೊರೋನಾ ಪಾಸಿಟಿವ್ ಇದ್ದ ಮನೆಯ ಆಕಳ ಮೂಕ ವೇದನೆಗೆ ಸ್ಪಂದನೆ

ಧರ್ಮಸ್ಥಳ ಗ್ರಾ. ಯೋಜನೆಯ ವಿಪತ್ತು ನಿರ್ವಹಣ ಘಟಕ ಸುಬ್ರಹ್ಮಣ್ಯ ವಲಯದ ವತಿಯಿಂದ ಕೊರೋನಾ ಪಾಸಿಟಿವ್ ಮನೆಯ ಆಕಳ ಮೂಕ ವೇದನೆಗೆ ಸ್ಪಂದಿಸಿ ಆಕಳು ಚೇತರಿಸುತ್ತಿರುವ ಘಟನೆ ವರದಿಯಾಗಿದೆ.

ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕವು ಹರಿಹರ, ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರು ಗ್ರಾಮಗಳ ಕೊರೋನಾ ಪೀಡಿತರ ಮನೆಗೆ ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದು ಅಗತ್ಯ ಬಿದ್ದರೆ ಸಹಾಯ ಮಾಡುವ ಕೆಲಸ ಕೈಗೊಂಡಿತ್ತು.

ಅದರಂತೆ ಹರಿಹರದ ಕೊರೋನಾ ಬಾಧಿತರ ಮನೆಗೆ ಭೇಟಿ ಸಂದರ್ಭ ಹಸುವೊಂದು ನರಕಯಾತನೆ ಪಡುತ್ತಿರುವ ದೃಶ್ಯ ಕಂಡು ಬಂದಿದೆ. ಕರು ಹಾಕಿದ ಹಸು ಎದ್ದು ನಿಲ್ಲಲಾಗದೆ ಒದ್ದಾಡುತ್ತಿತ್ತು. ನೆರೆಮನೆಯವರ ಸಹಕಾರದಿಂದ ಸೀರೆ ಮತ್ತು ಶೇಡ್ ನೆಟ್ ಬಳಸಿ ಎತ್ತಿ ಕೊಟ್ಟಿಗೆಯ ಚಾವಣಿಗೆ ಕಟ್ಟಿ ನೇತು ಬಿಟ್ಟಿದ್ದರೂ ಚೇತರಿಕೆ ಕಂಡುಬಂದಿಲ್ಲ ಎನ್ನಲಾಗಿದೆ.
ಬಳಿಕದ ದಿನಗಳಲ್ಲಿ ಕೊರೋನಾ ಟೆಸ್ಟ್ ಮಾಡಲು ಹೋದಾಗ ಮನೆಯವರಿಗೆ ಕೋವಿಡ್ ಪಾಸಿಟಿವ್ ಬಂದು ಕಟ್ಟಿಹಾಕಿದ ಹಸು ಹಾಗೇನೆ ನೇತಾಡಿಕೊಂಡ ಪರಿಸ್ಥಿತಿಯಲ್ಲಿಯೇ ಇರ ಬೇಕಾದ ಪ್ರಸಂಗ ಬಂದು ಮನೆಯವರಿಂದ ಏನು ಮಾಡಲಾಗದ ಪರಿಸ್ಥಿತಿ ಬಂದೊದಗಿತ್ತು. ಪಾಸಿಟಿವ್ ಇರುವುದರಿಂದ ನೆರೆಕರೆಯವರನ್ನು ಕರೆಯಲಾಗದ ದುಸ್ಥಿತಿ ಇದ್ದು ಹಸುವಿನ ಆಸೆಯನ್ನು ಮನೆಯವರು ಬಿಟ್ಟಿದ್ದರು.

ಮನೆ ಭೇಟಿಗೆ ಬಂದ ವಿಪತ್ತು ನಿರ್ವಹಣ ತಂಡದ ಸದಸ್ಯರು ಆಕಳು ಇರಲು ಹಟ್ಟಿಯನ್ನು ಮರು ನಿರ್ಮಿಸಿ
ಆಕಳನ್ನು ಆರೈಕೆ ಮಾಡಿ ಕಟ್ಟಿ ಬಿಗಿಯಾಗಿದ್ದ ಗೋಣಿ ಸಾರಿ ಗಳನ್ನು ಬಿಚ್ಚಿ, ನುರಿತವರನ್ನು ಬರ ಹೇಳಿ ಚಿಕಿತ್ಸೆ ಕೊಡಿಸಿ ಚೈನ್ ಪುಲ್ಲಿ ಸಹಾಯದಿಂದ ಹಸುವನ್ನು ಮೇಲೆತ್ತಿ ಸಾವಕಾಶವಾಗಿ ನಿಲ್ಲುವಂತೆ ಮಾಡಿದ್ದಾರೆ .
ಇದೀಗ ಆಕಳು ಸ್ವಲ್ಪ ಸುಧಾರಿಸಿಕೊಂಡಿದ್ದು ಮೇವು ತಿನ್ನುತ್ತಿದೆ. ಕರುವಿಗೆ ಹಾಲುಣಿಸಲು ಆಗದಂತ ಸ್ಥಿತಿಯಲಿದ್ದ ಆಕಳು ಹಾಲುಣಿಸುತ್ತಿರುವುದಾಗಿ ವರದಿಯಾಗಿದೆ.
ಇದಲ್ಲದೆ ಇದೇ ತಂಡ ಕೊಲ್ಲಮೊಗ್ರದ ಗೋಳಿಗುಂಡಿಯ ಕೊರೋನಾ ಪೀಡಿತ ಮನೆಗಳಿಗೆ ಪಡಿತರವನ್ನು ಅವರ ಮನೆಗೆ ತಲುಪಿಸಿ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದೆ.

ಈ ಸೇವಾಕಾರ್ಯದಲ್ಲಿ ಸಂಯೋಜಕರಾದ ಸತೀಶ್ ಟಿ ಎನ್, ಮಣಿಕಂಠ ಕಟ್ಟ ಸದಸ್ಯರುಗಳಾದ ಕುಶಾಲಪ್ಪ ಜಾಲು ಮನೆ, ಜಯಪ್ರಕಾಶ ಕಲ್ಲೇರಿ ಕಟ್ಟ, ಅಶೋಕ ಮಿತ್ತೋಡಿ, ಲಕ್ಷ್ಮಣ ಐನೆಕಿದು, ಯಶವಂತ ಕಾಜಿಮಡ್ಕ, ಬಾಲಸುಬ್ರಹ್ಮಣ್ಯ, ಸಹಕರಿಸಿದರು.
ಚೈನ್ ಪುಲ್ಲಿ ನೀಡಿ ಪುರುಷೋತ್ತಮ ಗಡಿಕಲ್ಲು ಸಹಕರಿಸಿದರೆ, ಹಸುವಿನ ಔಷಧೋಪಚಾರಕ್ಕೆ ಸುರೇಶ್ ಕಲ್ಮಕಾರು ಮತ್ತು ಗಣೇಶ್ ಭಟ್ ಪನ್ನೆ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.