ಸೇವಾಜೆ : ಅಪೂರ್ಣಗೊಂಡ ಮರುನಿರ್ಮಾಣದ ಸೇತುವೆ, ಅರಂತೋಡು – ಎಲಿಮಲೆ ರಸ್ತೆ ಸಂಪರ್ಕ ಸಂಪೂರ್ಣ ಬಂದ್

Advt_Headding_Middle

ಅರಂತೋಡು – ಎಲಿಮಲೆ ರ ರಸ್ತೆಯ ಸೇವಾಜೆ ಬಳಿ ಇದ್ದ ಸೇತುವೆಯನ್ನು ಸಂಪೂರ್ಣ ಕೆಡವಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದ್ದು ಅಕಾಲಿಕವಾಗಿ ಆರಂಭವಾದ ಮಳೆಯಿಂದ ಸೇತುವೆ ಕಾಮಗಾರಿಗೆ ತೊಡಕಾಗಿದೆಯಲ್ಲದೆ, ಈ ರಸ್ತೆ ಬಂದ್ ಆಗಿದೆ.
ಇದೇ ಜೂನ್ 30 ರೊಳಗೆ ಸೇತುವೆ ಸಂಪೂರ್ಣಗೊಂಡು ಸಂಚಾರಕ್ಕೆ ಅನುವು ಮಾಡಿ ಕೊಡುವ ಬಗ್ಗೆ ಗುತ್ತಿಗೆದಾರ ಕಂಪೆನಿ ನೀಡಿತ್ತು. ಹಳೆಯ ಸೇತುವೆ ಕೆಡವಿ ಹೊಸ ಸೇತುವೆ ಮಾಡುವ ಕಾರಣ ಸೀಮಿತ ಅವಧಿಗೆ ವಾಹನ ಸಂಚಾರ ನಿರ್ಭಂದಿಸಿ ಅರಂತೋಡು ಮತ್ತು ಎಲಿಮಲೆ ಬಳಿ ಸೂಚನಾ ಫಲಕಗಳನ್ನು ಅಳವಡಿಸಲಾಗಿತ್ತು. ಸ್ಥಳೀಯ ವಾಹನಗಳು ಸಂಚರಿಸಲು ನದಿಗೆ ಮೋರಿ ಪೈಪ್ ಗಳನ್ನು ಅಳವಡಿಸಿ ಬದಲಿ ರಸ್ತೆ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿತ್ತು. ಈ ವರ್ಷ ಇದು ಪೂರ್ತಿಗೊಳ್ಳುವುದಿಲ್ಲ ಎಂದು ಸ್ಥಳೀಯರು ಮಾತನಾಡಲಾರಂಭಿಸಿದ್ದರು. ಈ ವರ್ಷ ಏಪ್ರಿಲ್ ತಿಂಗಳಿನಿಂದಲೇ ಬಿಡುವಿಲ್ಲದೆ ಪ್ರತಿ ದಿನ ಮಳೆ ಸುರಿದ ಪರಿಣಾಮ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಕಳೆದ ಮೇ.14ರಿಂದ ಚಂಡಮಾರುತ ಪ್ರಭಾವದಿಂದ ದಿನವಿಡೀ ಮಳೆ ಸುರಿದ ಪರಿಣಾಮ ಹೊಳೆಯ ನೀರು ಏಕಾ ಏಕಿ ಏರಿ ತಾತ್ಕಾಲಿಕ ರಸ್ತೆಯು ನೀರಿನಲ್ಲಿ ಕೊಚ್ಚಿ ಹೋಗಿದೆ. ಪರಿಣಾಮ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಇದೀಗ ತಾತ್ಕಲಿಕ ದುರಸ್ಥಿ ಮಾಡಿದ್ದರೂ ಸಂಚಾರಿಸಲು ಸಾಧ್ಯವೇ ಇಲ್ಲ. ಇಲ್ಲಿ ಈಗ ರಸ್ತೆಗೆ ಮರ ಹಾಗೂ ಕಲ್ಲು ಬಂಡೆಗಳನಿಟ್ಟು ಬದಲಿ ರಸ್ತೆಯಲ್ಲಿ ಕೆಳಗೆ ಇಳಿಯದಂತೆ ಬಂದ್ ಮಾಡಿದ್ದಾರೆ. ಇದೀಗ ಒಂದು ಪಿಲ್ಲರ್ ಮಾತ್ರ ಎದ್ದು ನಿಂತಿದೆ. ಇನ್ನು ಒಂದು ಕಡೆ ಕಬ್ಬಿಣ ಅಳವಡಿಸಲಾಗಿದೆ. ಮತ್ತೊಂದು ಕಡೆ ಹಾಗೇ ಇದೆ. ಒಟ್ಟಾಗಿ ಜೂ. 30 ರೊಳಗೆ ಸೇತುವೆ ಪೂರ್ತಿಯಾಗುವುದು ಮಾತ್ರ ಕನಸಿನ ಮಾತೇ ಸರಿ.
ಈ ವರ್ಷ ಈ ರಸ್ತೆಯಲ್ಲಿ ಸಾಗುವವರು ಸುತ್ತಿ ಬಳಸಿ ಪ್ರಯಾಣಿಸುವುದು ಅನಿವಾರ್ಯವಾಗಿದೆ. ಅರಂತೋಡಿನಿಂದ ಸುಬ್ರಹ್ಮಣ್ಯ ಕಡೆಗೆ ಅಥವಾ ಮಡಪ್ಪಾಡಿ ಕಡೆಗೆ ಹೋಗುವವರು ಮರ್ಕಂಜದಿಂದ ದೊಡ್ಡತೋಟದ ಮೂಲಕ ಸಾಗಿ ಎಲಿಮಲೆ ಕಡೆಗೆ ಪ್ರಯಾಣಿಸಬೇಕು. ಅಥವಾ. ಮರ್ಕಂಜದಿಂದ ದೊಡ್ಡತೋಟ ರಸ್ತೆಯಲ್ಲಿ ಬೊಮ್ಮಾರು ವರೆಗೆ ಹೋಗಿ ಅಲ್ಲಿಂದ ಬಲಕ್ಕೆ ಮಂದ್ರಪ್ಪಾಡಿ ಮೂಲಕ ಒಳ ರಸ್ತೆಯಲ್ಲಿ ಸಾಗಿದರೆ ಅದು ಎಲಿಮಲೆ ಮಡಪ್ಪಾಡಿ ರಸ್ತೆಯನ್ನು ಸೇರುತ್ತದೆ. ಇಲ್ಲಿ ರಸ್ತೆ ಫಲಕ ಅಳವಡಿಸಿದರೆ ಎಲ್ಲರಿಗೂ ಅನುಕೂಲವಾಗಬಹುದು ಎಂಬುದು ಸ್ಥಳೀಯರ ಅನಿಸಿಕೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.