ಮರ್ಕಂಜ : ಹಲವು ವರ್ಷದ ಬೇಡಿಕೆಯಾಗಿದ್ದ ಸೇತುವೆ ಕಾಮಗಾರಿ ನೆನೆಗುದಿಗೆ

Advt_Headding_Middle

ಕೆಲಸಕ್ಕೆ ಬಂದ ಕಾರ್ಮಿಕರಿಗೆ ಭಯ ಹುಟ್ಟಿಸಿದ ಕೆಲ ಯುವಕರು! – ಕೆಲಸ ಬಿಟ್ಟು ಅರ್ಧದಿಂದ ಮರಳಿದ ಕಾರ್ಮಿಕರು

ಸ್ಥಳದಲ್ಲಿ ಅಪಾಯ ಆಹ್ವಾನಿಸುವ ಹೊಂಡ ; ಹೊಂಡ ಮುಚ್ಚುವಂತೆ ಊರವರ ಒತ್ತಾಯ

ಹಲವು ವರ್ಷಗಳ ಬೇಡಿಕೆಯಾಗಿದ್ದ ಮರ್ಕಂಜದಿಂದ ದೊಡ್ಡಹಿತ್ಲು, ಕೊಂಪುಳಿ ಕಡೆಗೆ ಹೋಗುವ ರಸ್ತೆಗೆ ಕುದುರೆಗುಂಡಿ ಎಂಬಲ್ಲಿ ನಿರ್ಮಾಣವಾಗಬೇಕಿದ್ದ ಸೇತುವೆಯ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಸೇತುವೆ ನಿರ್ಮಿಸಲು ಎರಡು ಕಡೆ ಮಾಡಿರುವ ಭಾರೀ ಗಾತ್ರದ ಹೊಂಡಗಳು ಈಗ ಅಪಾಯದ ಸೂಚನೆಯನ್ನು ನೀಡುತ್ತಿದೆ.

ಗೋಳಿಯಡ್ಕ – ಮಿನುಂಗೂರು ರಸ್ತೆಯಲ್ಲಿ ಕವಲೊಡೆದು ದೊಡ್ಡಿಹಿತ್ಲು ಕೊಂಪುಳಿ ಕಡೆಗೆ ಹೋಗುವ ರಸ್ತೆ ಮಧ್ಯೆ ಕುದುರೆಗುಂಡಿ ಎಂಬಲ್ಲಿ ಸೇತುವೆಯೊಂದು ನಿರ್ಮಾಣವಾಗಬೇಕೆಂಬುದು ಈ ಭಾಗದ ಹಲವು ವರ್ಷದ ಬೇಡಿಕೆ. ಇಲ್ಲಿ ೧೦ರಿಂದ ೧೫ ಮನೆಗಳು ಇದ್ದು ಈ ಭಾಗದವರು ಅನೇಕ ಬಾರಿ ಸೇತುವೆ ನಿರ್ಮಿಸುಕೊಡುವಂತೆ ಹಲವರಿಗೆ ಮನವಿಗಳನ್ನು ನೀಡಿದ್ದರು. ಆದರೆ ಸೇತುವೆ ಮಾತ್ರ ಆಗಿರಲಿಲ್ಲ. ಈ ಬಾರಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿಯವರ ಮೂಲಕ ಶಾಲಾ ಸಂಪರ್ಕ ಸೇತುವೆ ಯೋಜನೆಯಡಿ ಕಾಲು ಸಂಕ ಮಂಜೂರುಗೊಂಡಿತ್ತು. ಅದರಂತೆ ಗುದ್ದಲಿಪೂಜೆ ನಡೆದು ಕಾಮಗಾರಿ ವಹಿಸಿಕೊಂಡಿದ್ದ ಪುತ್ತೂರಿನ ಮಾಸ್ಟರ್ ಪ್ಲಾನರಿಯವರು ಇದೇ ಫೆಬ್ರವರಿಯಲ್ಲಿ ಕಾಮಗಾರಿಯನ್ನು ಆರಂಭಿಸಿದ್ದರು. ಅದರಂತೆ ಜಲ್ಲಿ, ಹೊಗೆ, ಕಬ್ಬಿಣ ಬಂದಿತ್ತು. ಕಾರ್ಮಿಕರು ಗೋಳಿಯಡ್ಕದಲ್ಲಿ ರೂಮಿನಲ್ಲಿ ತಂಗಿದ್ದರು. ಫಿಲ್ಲರ್ ಹಾಕಲು ತೋಡಿನ ಎರಡು ಕಡೆಗಳಲ್ಲಿ ದೊಡ್ಡ ಗಾತ್ರದ ಹೊಂಡಗಳನ್ನು ತೆಗೆದಿದ್ದರು. ಕೆಲಸ ಆರಂಭಿಸಿ ಕೆಲವೇ ದಿನಗಳಲ್ಲಿ ಯುವಕರ ತಂಡವೊಂದು ಶಿವರಾತ್ರಿಯ ದಿನದಂದು ರಾತ್ರಿ ಸೇತುವೆ ನಿರ್ಮಿಸಲು ಬಂದಿದ್ದ ಹೊರರಾಜ್ಯದ ಕಾರ್ಮಿಕರಿಗೆ ಕತ್ತಿ ಮತ್ತಿತರ ವಸ್ತುಗಳನ್ನು ತೋರಿಸಿ, ಭಯ ಹುಟ್ಟುಸಿದರೆನ್ನಲಾಗಿದೆ. ಹೀಗಾಗಿ ಅವರು ಅಲ್ಲಿ ನಿಲ್ಲಲು ಹಿಂಜರಿದರೆಂದೂ, ಮರುದಿನವೇ ಅಲ್ಲಿಂದ ಹೋದರೆಂದು ತಿಳಿದು ಬಂದಿದೆ. ಅದರೊಂದಿಗೆ ಕಾಲು ಸಂಕವನ್ನು ಅಗಲಗೊಳಿಸಬೇಕೆಂಬ ಊರವರ ಬೇಡಿಕೆಯೂ ಇತ್ತೆನ್ನಲಾಗಿದೆ. ಹೀಗಾಗಿ ಕಾಲು ಸಂಕ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದೀಗ ಮಳೆಗಾಲ ಆರಂಭಗೊಳ್ಳುತ್ತಿದ್ದು, ಮೊನ್ನೆ ಸುರಿದ ಭಾರಿ ಮಳೆಗೆ ೨ ಹೊಂಡದಲ್ಲಿಯೂ ನೀರು ನಿಂತಿದೆ. ಅಲ್ಲದೇ ಹೊಂಡ ಬದಿ ಜರಿಯುತ್ತಾ ರಸ್ತೆಯು ಜರಿಯುವ ಹಂತದಲ್ಲಿದೆ. ಇಲ್ಲಿ ಮಿನುಂಗೂರು ಕಡೆಯಿಂದ ಮತ್ತು ಬೆದ್ರಪಣೆ ಹೀಗೆ ೨ ಕಡೆಯಿಂದ ತೋಡು ಹರಿದು ಬಂದು ಕುದುರೆಗುಂಡಿ ಎಂಬಲ್ಲಿ ಸೇರುತ್ತಿದೆ. ಹೀಗಾಗಿ ಮಳೆಗಾಲದಲ್ಲಿ ವಾಹನಗಳು ಈ ನದಿ ದಾಟುವಂತಿಲ್ಲ. ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಬೆಳಿಗ್ಗೆ ಮತ್ತು ಸಂಜೆ ಜೀವಾಭಯದಿಂದ ದಾಟಿಸಬೇಕಾಗುತ್ತದೆ. ಅನಾರೋಗ್ಯ ಬಾಧಿಸಿದಲ್ಲಿಯೂ ಹೊತ್ತುಕೊಂಡೇ ದಾಟಬೇಕಾಗುತ್ತದೆ. ಇದೀಗ ಈ ದೊಡ್ಡ ಹೊಂಡ ತೆಗೆದಿಟ್ಟು ಹೋಗಿದ್ದಾರೆ. ಒಂದು ವೇಳೆ ಸಾರ್ವಜನಿಕರು ಅಥವಾ ದನಕರುಗಳು ಈ ಹೊಂಡಕ್ಕೆ ಬಿದ್ದು ಜೀವ ಕಳೆದುಕೊಂಡರೆ ಯಾರು ಹೊಣೆ. ಸೇತುವೆ ನಿರ್ಮಿಸದಿದ್ದರೆ ಹೊಂಡವನ್ನಾದರೂ ಮುಚ್ಚಿಕೊಡಿ ಎನ್ನುತ್ತಾರೆ ಸ್ಥಳೀಯರು.
ಈ ಬಗ್ಗೆ ಪಿಡಬ್ಯುಡಿ ಇಂಜಿನಿಯರ್ ಸಣ್ಣೆ ಗೌಡರನ್ನು ಸಂಪರ್ಕಿಸಿದಾಗ ಇಲ್ಲಿಗೆ ಕಾಲು ಸಂಕ ಮಂಜೂರುಗೊಂಡಿದೆ. ರೀ ಟೆಂಡರ್ ಆಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ತೊಂದರೆ ಕೊಟ್ಟಿರುವ ಕಾರಣ ಅವರು ಹೋಗಿದ್ದಾರೆ. ಕಾಮಗಾರಿ ಮಾಡುತ್ತೇವೆ. ಆದರೆ ಅದನ್ನು ಉದ್ದ ಅಥವಾ ಅಗಲ ಮಾಡಲು ಸಾಧ್ಯವಿಲ್ಲ. ಕಾಲು ಸಂಕದ ಯೋಜನೆಯಂತೆ ನಿರ್ಮಿಸಬೇಕಾಗುತ್ತದೆ. ಊರವರ ಜೊತೆ ಮಾತನಾಡಿ ಗುಂಡಿ ಮುಚ್ಚುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.