Breaking News

ಕಾಣೆಯಾದ ತಾಯಿಯನ್ನು ಮಗನ ಮಡಿಲಿಗೆ ಸೇರಿಸಿದ ಸುಬ್ರಹ್ಮಣ್ಯ ಎಸ್.ಐ.

Advt_Headding_Middle

 

ಲಾಕ್‌ಡೌನ್ ಮಧ್ಯದಲ್ಲಿ ಕಾಣೆಯಾದ ತಾಯಿಯೊಬ್ಬಳನ್ನು ಹುಡುಕ ಹೊರಟ ಮಗನಿಗೆ ತನ್ನ ತಾಯಿಯನ್ನು ಹುಡುಕಿಕೊಡುವಲ್ಲಿ ಸುಬ್ರಹ್ಮಣ್ಯ ಎಸ್.ಐ.ಓಮನ ಎನ್.ಕೆ.ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ದೊಡ್ಡಬಳ್ಳಾಪುರದ ಕುರುಬನ ಹಳ್ಳಿಯ ಅನ್ನಪೂರ್ಣ ಎಂಬ ವೃದ್ದೆ ಇತ್ತೀಚೆಗೆ ಕಾಣೆಯಾಗಿದ್ದು ಅವರ ಮಗ ಅಂಬರೀಶ ಎಂಬವರು ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಠಾಣೆಯವರ ಗಮನಕ್ಕೆ ತಂದಿದ್ದರು. ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನ ಅವರಿಗೆ ದೂರವಾಣಿ ಮುಖಾಂತರ ಕಾಣೆಯಾಗಿರುವ ಮಾಹಿತಿ ಮತ್ತು ಪೋಟೋ ಕಳುಹಿಸಿ ಕೊಟ್ಟಿದ್ದರು. ಎಸ್.ಐ. ಓಮನರವರು ವೃದ್ದೆಯ ಪೋಟೋ ಮತ್ತು ಮಾಹಿತಿಯನ್ನು ಸುಬ್ರಹ್ಮಣ್ಯದ ವಾಟ್ಸಾಪ್ ಗ್ರೂಪ್ ಗಳಿಗೆ ಹಾಕಿ ಪತ್ತೆಗೆ ಮನವಿ ಮಾಡಿಕೊಂಡಿದ್ದರು. ಕೆಲ ದಿನಗಳಿಂದ ಸುಬ್ರಹ್ಮಣ್ಯದಲ್ಲಿ ವೃದ್ದೆಯೊಬ್ಬರು ಅಲೆದಾಡುತ್ತಿರುವುದು ಕಂಡು ಬಂದಿದ್ದು ಅದನ್ನು ಸಾರ್ವಜನಿಕರೊಬ್ಬರು ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿದಾಗ ಎಸ್‌ಐ ಓಮನರವರೂ ಅಲ್ಲಿಗೆ ಹೋಗಿ ನೋಡಿದಾಗ ಆ ವೃದ್ಧೆಯೇ ಬೆಂಗಳೂರಿನಿಂದ ಕಾಣೆಯಾದವರೆಂದು ಗೊತ್ತಾಯಿತು. ವೃದ್ದೆಯನ್ನು ಠಾಣೆಗೆ ಕರೆತಂದು ಊಟ ತಿಂಡಿ ನೀಡಿ ಸಲಹಿ, ಬಳಿಕ ವೃದ್ದೆಯ ಮಗ ಅಂಬರೀಶರಿಗೆ ಪೋನ್ ಮಾಡಿ ವಿಷಯ ತಿಳಿಸಿದರು. ಅವರು ಬಂದು ತಾಯಿಯನ್ನು ತನ್ನೂರಿಗೆ ಕರೆದೊಯ್ದರು. ಠಾಣೆಯ ಸಿಬಂದಿಗಳಾದ ನಾರಾಯಣ ಪಾಟಾಳಿ, ಭೀಮನಗೌಡ, ಬಸವರಾಜ್, ಲಕ್ಷ್ಮಿ, ಇಕ್ಬಾಲ್ ಸಹಕರಿಸಿದ್ದರು.
ಅಂತೂ ಬೆಂಗಳೂರಿನಿಂದ ಕಣ್ತಪ್ಪಿ ನೆಟ್ಟಣ ರೈಲ್ವೆ ಸ್ಟೇಶನ್ ಗೆ ತಲುಪಿ ಅದೇಗೋ ಸುಬ್ರಹ್ಮಣ್ಯ ಬಂದು ತಲುಪಿದ್ದ ವೃದ್ದೆ ಸುಬ್ರಹ್ಮಣ್ಯ ಎಸ್ ಐ ಹಾಗೂ ಪೊಲೀಸರ ಪ್ರಯತ್ನದಿಂದ ಮಗನ ಮಡಿಲು ಸೇರಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.