Breaking News

ಅರಂತೋಡು : ಪಡಿತರ ಧಾನ್ಯಗಳ ಬೈಲುವಾರು ವಿತರಣಾ ಕಾರ್ಯಕ್ರಮ

Advt_Headding_Middle

 

 

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ವ್ಯಾಪ್ತಿಗೆ ಸಂಬಂಧಿಸಿದ BPL ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಕೇಂದ್ರ ಸರಕಾರದ ಗರೀಬ್ ಕಲ್ಯಾಣ್ ಯೋಜನೆ ಮತ್ತು ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯ ಮೇ ತಿಂಗಳ ಪಡಿತರ ಧಾನ್ಯಗಳ ಬೈಲುವಾರು ವಿತರಣಾ ಕಾರ್ಯಕ್ರಮ ತೊಡಿಕಾನ ಮತ್ತು ಆರಂತೋಡು ಗ್ರಾಮದ ಅಡ್ತಲೆಯಲ್ಲಿ ನಡೆಯಿತು. ಸಹಕಾರ ಸಂಘ ಗ್ರಾಮ ಪಂಚಾಯತ್ ಮತ್ತು ಸ್ವಯಂಸೇವಕರ ಸಹಕಾರದಿಂದ ಒಟ್ಟು 223 ಕುಟುಂಬಗಳಿಗೆ ಪಡಿತರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ಉಪಾಧ್ಯಕ್ಷರಾದ ದಯಾನಂದ ಕುರುಂಜಿ ನಿರ್ದೇಶಕರುಗಳಾದ ಚಂದ್ರಶೇಖರ ಚೋಡಿಪಣೆ, ವಿನೋದ್ ಉಳುವಾರು, ಕುಸುಮಾಧರ ಅಡ್ಕಬಳೆ, ಕೇಶವ ಅಡ್ತಲೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ರವೀಂದ್ರ ಪಂಜಿಕೋಡಿ ಭವಾನಿ ಚಿಟ್ಟನ್ನೂರ್ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪಕರಾದ ಆನಂದ ಕಲ್ಲುಗದ್ದೆ, ಸಹಕಾರಿ ಸಂಘದ ಮಾಜಿ ನಿರ್ದೇಶಕರುಗಳಾದ ಭವಾನಿಶಂಕರ ಅಡ್ತಲೆ, ಜನಾರ್ದನ ಬಾಳೆಕಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ಸಹಕಾರ್ಯನಿರ್ವಾಹಣಾಧಿಕಾರಿ ಪ್ರದೀಪ್ ಸಿಬ್ಬಂದಿಗಳಾದ ಅರ್ಜುನ್, ನಯನಕುಮಾರ್, ಕಿರಣ್ ಕುಂಟುಕಾಡು, ಸವಿತಾ ಬಾಳೆಕಜೆ, ಸ್ವಯಂಸೇವಕರಾಗಿ ಶಶಿಕುಮಾರ್ ಕೆ, ಲಿಂಗರಾಜ ಬಾಳೆಕಜೆ, ಮಿಲನ್, ವಿನುತಾ , ಶರತ್ ಅಡ್ಯಡ್ಕ, ಸ್ವಾತಿಕ್ ಕಿರ್ಲಾಯ, ಶಶಿಕುಮಾರ್ ಅಡ್ತಲೆ, ಅಶೋಕ್ ಬೆದ್ರುಪಣೆ, ಜೀವನ್ ಎಂ. ಎ, ಮತ್ತು ಸ್ಪಂದನ ಗೆಳೆಯರ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.