Breaking News

ಕುಂಟಿಕಾನದಲ್ಲಿ ಸ್ಕೂಟಿಗೆ ಢಿಕ್ಕಿ ಹೊಡೆದು ಟಿಪ್ಪರ್ ಪರಾರಿ: ಗಾಯಾಳು ದಂಪತಿ ಚೇತರಿಕೆ

Advt_Headding_Middle

ದೊಡ್ಡತೋಟ ಜೋಗಿಯಡ್ಕ ರಸ್ತೆ ಮಧ್ಯೆ ಕುಂಟಿಕಾನ ಬಳಿ ನಿನ್ನೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ದಂಪತಿ ಚೇತರಿಸುತ್ತಿದ್ದಾರೆ.
ನಿನ್ನೆ ಸಂಜೆ ಈ ಅಪಘಾತ ಸಂಭವಿಸಿತ್ತು. ಗೂನಡ್ಕದ ಪೆಲತ್ತಡ್ಕ ನಿವಾಸಿಗಳಾದ ಗಣೇಶ್ ಮತ್ತು ಅವರ ಪತ್ನಿ ವೀಣಾ ಕಾಣಿಯೂರಿಗೆ ಹೋಗಿ ಬರುತ್ತಿರುವಾಗ ಕುಂಟಿಕಾನ ಎಂಬಲ್ಲಿ ಸ್ಕೂಟಿಗೆ ಟಿಪ್ಪರೊಂದು ಡಿಕ್ಕಿ ಹೊಡೆದು ಪರಾರಿಯಾಯಿತೆನ್ನಲಾಗಿದೆ. ದಂಪತಿ ಗಾಯಗೊಂಡರು. ಕೂಡಲೇ ಸ್ಥಳೀಯ ಮನೆಗಳವರು ಧಾವಿಸಿ ಗಾಯಾಳುಗಳನ್ನು ಉಪಚರಿಸಿದರು. ಈ ವೇಳೆ ಆ ದಾರಿಯಾಗಿ ಜೀಪಿನಲ್ಲಿ ಬಂದ ಮಹಿಮಾ ಇಲೆಕ್ಟ್ರಿಕಲ್ಸ್‌ನ ಸುಬ್ರಹ್ಮಣ್ಯ ಭಟ್‌ರವರು ತನ್ನ ಜೀಪಿನಲ್ಲಿ ಗಾಯಾಳುಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು. ಬಳಿಕ ಗಂಭೀರವಾಗಿ ಗಾಯಗೊಂಡ ಗಣೇಶ್ ಅವರನ್ನು ಮಂಗಳೂರು ಆಸ್ಪತ್ರೆಗೆ ಅಂಬ್ಯುಲೆನ್ಸ್‌ನಲ್ಲಿ ಕೊಂಡೊಯ್ಯಲಾಯಿತು. ಕೈಗೆ ಗಂಭೀರ ಗಾಯಗಳಾಗಿರುವ ಅವರು ಅಲ್ಲಿ ಚೇತರಿಸುತ್ತಿದ್ದು, ವೀಣಾ ಅವರನ್ನು ಕೆವಿಜಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಯಿತು.
( ನಿನ್ನೆ ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಈ ಅಪಘಾತದ ವರದಿಯಲ್ಲಿ ತಪ್ಪು ಮಾಹಿತಿಯ ಕಾರಣ ಕಂದಡ್ಕದಲ್ಲಿ ಅಪಘಾತ ಎಂದೂ, ಗಾಯಾಳುಗಳನ್ನು ಪ್ರಗತಿ ಅಂಬ್ಯುಲೆನ್ಸ್‌ನಲ್ಲಿ ಕೊಂಡೊಯ್ಯಲಾಯಿತು ಎಂದೂ ಪ್ರಕಟವಾಗಿತ್ತು. )

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.