Breaking News

ಕಲ್ಲುಗುಂಡಿಯಿಂದ ಕಳವಾದ ಬೈಕ್ ಕೇರಳದ ಕೋಝಿಕೋಡ್‌ನಲ್ಲಿ ಪತ್ತೆ

Advt_Headding_Middle

ಸಂಪಾಜೆಯಿಂದ ಕಳವಾದ ಬೈಕೊಂದು 12 ದಿನಗಳ ಬಳಿಕ ಕೇರಳದ ಕೋಝಿಕೋಡ್‌ನಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಸಂಪಾಜೆಯ ದೇವಿರಾಜ್ ಅವರ ಡಿಯೋ ಮೇ.೮ರಂದು ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿ ಕಾಣೆಯಾಗಿತ್ತು, ಈ ಬಗ್ಗೆ ಸುಳ್ಯ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿತ್ತು. ಬೈಕ್ ಕಳವು ಮಾಡಿದ ವ್ಯಕ್ತಿ ಕ್ಯಾಲಿಕಟ್ ನಲ್ಲಿ ರಿಕ್ಷಾ ಚಾಲಕನ ಜೊತೆ ತಮಿಳು ನಾಡಿಗೆ ಹೋಗುವ ರೈಲು ಇದೆಯಾ ಎಂದು ವಿಚಾರಿಸಿದ್ದಾನೆ. ಆಗ ರಿಕ್ಷಾದವನು ರೈಲು ಸಂಚಾರ ಕೊರೋನದಿಂದ ಸ್ಥಗಿತಗೊಂಡಿದೆ ಹೇಳಿದ್ದಾನೆ. ಬೈಕ್ ಸವಾರನು ಸ್ವಲ್ಪ ಮುಂದೆ ಹೋಗಿ ಕೆಲವು ದಾಖಲೆ ಪತ್ರಗಳನ್ನು ರಸ್ತೆ ಬದಿ ಬಿಸಾಡಿದ್ದು, ಇದನ್ನು ನೋಡಿ ಅನುಮಾನ ಬಂದು ರಿಕ್ಷಾ ಚಾಲಕನು ಆ ದಾಖಲೆಗಳನ್ನು ಪೋಲಿಸರಿಗೆ ನೀಡಿದ್ದಾನೆ. ನಂತರ ದಾಖಲೆ ಪರಿಶೀಲಿಸಿ ತನಿಖೆ ನಡೆಸಿದಾಗ ಮತ್ತು ಆ ದಾಖಲೆಯಲ್ಲಿ ದೇವಿರಾಜ್ ಅವರ ಮಾವನ ಮಿಲಿಟರಿ ಕಾರ್ಡು ಆಧಾರಿಸಿ ಫೋನ್ ಮಾಡಿದಾಗ ಕದ್ದು ಹೋದ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದರು.
ಮೇ.16 ರಂದು ತಾನು ಚಲಾಯಿಸಿದ ಸ್ಕೂಟಿಯನ್ನು ಕೋಝಿಕೋಡ್‌ನಲ್ಲಿ ಬಿಟ್ಟು ಬೇರೊಂದು ಬೈಕಲ್ಲಿ ಮುಂದೆ ಹೋಗಿರುವುದಾಗಿ ಮಾಹಿತಿ ಬಂದು ಈ ಬಗ್ಗೆ ಕೋಝಿಕೋಡ್ ಪೊಲೀಸರು ಸುಳ್ಯ ಠಾಣೆಗೆ ಮಾಹಿತಿ ನೀಡಿದರು. ಇಂದು ಸುಳ್ಯ ಕ್ರೈಂ ಪೊಲೀಸ್ ಮತ್ತು ದೇವಿರಾಜ್ ಮತ್ತು ಇಬ್ಬರು ಕುಕ್ಕಂದೂರು ರಾಮಕೃಷ್ಣ ಅವರ ಕಾರಿನಲ್ಲಿ ಡಿಯೋವನ್ನು ತರಲು ಕೋಝಿಕೋಡ್‌ಗೆ ಹೋಗಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.