Breaking News

ಬಳ್ಪ: ಗ್ರಾ.ಪಂ.ನಲ್ಲಿ ಕೊರೋನಾ ಕಾರ್ಯಪಡೆ ಸಭೆ

Advt_Headding_Middle

 

 

ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರೋನಾ ಕಾರ್ಯಪಡೆಯ ಸಭೆಯು ಮೇ. 18 ರಂದು ಬಳ್ಪ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಕುಸುಮ ಎಸ್. ರೈವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಕವಿತಾ ಕೊರೋನಾ ರೋಗದ ಬಗ್ಗೆ ಮಾತನಾಡಿ ಜಾಗೃತಿ ವಹಿಸಬೇಕು, ಡೆಂಗ್ಯೂ ಹರಡುವಿಕೆ ಬಗ್ಗೆ ಎಚ್ಚರ ವಹಿಸಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೊರೋನ ಹಾಗೂ ಡೆಂಗ್ಯು ರೋಗವನ್ನು ನಿರ್ಮೂಲನೆ ಮಾಡಲು ಸಾರ್ವಜನಿಕರು ಸಹಕರಿಸುವಂತೆ ಹೇಳಿದರು. ಗ್ರಾಮ ಲೆಕ್ಕಾಧಿಕಾರಿ ಶ್ರೀಮತಿ ಜಯಂತಿ, ಮಾಜಿ ಉಪಾಧ್ಯಕ್ಷರಾದ ತಾರಾ. ಬಿ. ರೈ, ಬಳ್ಪ-ಕೇನ್ಯ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ, ಗ್ರಾ.ಪಂ. ಉಪಾಧ್ಯಕ್ಷೆ ನೇತ್ರಾವತಿ ಹೊಪ್ಪಾಲೆ, ಸದಸ್ಯರುಗಳಾದ ಚಂದ್ರಶೇಖರ ಅಕ್ಕೇನಿ, ರಾಜೀವ ಕಣ್ಕಲ್, ಸುನಿತಾ ಸಂಪ್ಯಾಡಿ, ಶೈಲಜಾ ಎಣ್ಣೆಮಜಲು, ಪ್ರಶಾಂತ್ ಪೊಟ್ಟುಕೆರೆ. ಆಶಾ ಕಾರ್ಯಕರ್ತರಾದ ರಮಾ ಗುಣಸಾಗರ ಕಟ್ಟ , ರಾಧಾ ಕೊನ್ನಡ್ಕ, ನೇತ್ರಾವತಿ ಪಾನ, ವನಜ ಎಸ್ ರೈ ಕೇನ್ಯ, ಎಣ್ಣೆ ಮಜಲು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾಲಿನಿ, ಅಂಗನವಾಡಿ ಕಾರ್ಯಕರ್ತರಾದ ಯಮುನಾ ಸಂಪ್ಯಾಡಿ, ಮಮತಾ ಪೇರಳಕಟ್ಟೆ, ಗ್ರಾಮ ಪಂಚಾಯಿತಿನ ಸಿಬ್ಬಂದಿಗಳು ಹಾಜರಿದ್ದರು. ಈ ಸಭೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ತಿಳಿಸಲಾಯಿತು. ಕೋರೋನಾ ಪಾಸಿಟಿವ್ ಬಂದವರು ಮನೆಯಲ್ಲಿದ್ದುಕೊಂಡು ಜಾಗ್ರತೆ ವಹಿಸುವಂತೆ ಹಾಗೂ ಹೋಂ ಐಸೋಲೇಷನ್ ಗೆ ಒಳಗಾಗುವಂತೆ ಸೂಚಿಸಲಾಯಿತು. ಡೆಂಗ್ಯೂ ಜ್ವರ ಹರಡುವಿಕೆಯಲ್ಲಿ ಪ್ರಮುಖ ಕಾರಣ ಕಲುಷಿತ ನೀರು ಶೇಖರಣೆ, ಮುಖ್ಯವಾಗಿ ರಬ್ಬರ್ ತೋಟಗಳಲ್ಲಿ ಮತ್ತು ಅಡಿಕೆ ತೋಟಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕೆಂದು ತಿಳಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.