Breaking News

ಗುತ್ತಿಗಾರು: ಕೊರೋನಾ ಹರಡಂತೆ ಜಾಗೃತಿ ಮೂಡಿಸಿದ ಗ್ರಾಪಂ‌ ಮತ್ತು ಗ್ರಾಮ ಭಾರತ ತಂಡದ ಸದಸ್ಯರು

Advt_Headding_Middle

 

 

ಗ್ರಾಮೀಣ ‌ಭಾಗಗಳಲ್ಲಿ‌ ಕೊರೋನಾ‌ ವೈರಸ್ ಹರಡದಂತೆ ತಡೆಯಬೇಕು ಎಂಬ ಇಚ್ಚೆಯಿಂದ
ಗುತ್ತಿಗಾರು ಗ್ರಾ. ಪಂ. ನ ಒಂದನೇ ವಾರ್ಡ್ ನ
ಗ್ರಾ ಪಂ ಸದಸ್ಯರು ಹಾಗೂ ಗ್ರಾಮ‌ಭಾರತ ತಂಡ ಸದಸ್ಯರು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕಾಲನಿಗಳಲ್ಲಿ ಕೊರೋನಾ ವೈರಸ್ ತಡೆಯ ಬಗ್ಗೆ ಮಾಹಿತಿ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮೇ.18 ರಂದು ಮಾಹಿತಿ ನೀಡಿದರು.

ಸುಬ್ರಹ್ಮಣ್ಯದ ಹೋಮಿಯೋಪತಿ ವೈದ್ಯ ಶ್ರೀ ಹೋಮಿಯೋಕೇರ್ ನ ಡಾ. ಆದಿತ್ಯ ಭಟ್ ಚಣಿಲ ಅವರ ಮಾರ್ಗದರ್ಶನದಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಯಿತು. ಅವರು ಆರೋಗ್ಯ ಕಾಳಜಿ, ಕೊರೋನಾ ಮುಂಜಾಗ್ರತೆ ಹಾಗೂ ಎದುರಿಸುವ ಬಗ್ಗೆ ಮಾಹಿತಿ ನೀಡಿದರು. ಮಾನಸಿಕವಾಗಿ ಧೈರ್ಯದಿಂದ ಇರುವಂತೆ ತಿಳಿಸಿದರು.‌ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಧರಿಸಿ, ಆಗಾಗ ಕೈ ತೊಳೆಯಿರಿ.‌ ಸಾಧ್ಯವಾದಷ್ಟು ಹಳ್ಳಿಗಳಲ್ಲೂ ಸದ್ಯ ದೂರದೂರವೇ ಇರುವಂತೆ ಸಲಹೆ ಈ ಸಂದರ್ಭ ಮಾಹಿತಿ ನೀಡಿದರು. ಆರೋಗ್ಯದ‌ಲ್ಲಿ ಯಾವುದೇ ವ್ಯತ್ಯಾಸ ಇದ್ದರೆ ತಕ್ಷಣವೇ ಆರೋಗ್ಯ ಕಾರ್ಯಕರ್ತರ ಮೂಲಕ ಸಮೀಪ ಆಸ್ಪತ್ರೆ, ವೈದ್ಯರನ್ನು‌ ಕಾಣಲು ತಿಳಿಸಿದರು. ಕೊರೋನಾವೇ ಆಗಿರಬೇಕಾಗಿಲ್ಲ ಅಂತಹ ಭಯ ಇರಬಾರದು ಎಂದರು. ಇದೇ ವೇಳೆ ದೇಹದ ರೋಗನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳನ್ನು ಉಚಿತವಾಗಿ‌ ವಿತರಿಸಿದರು.

ಗ್ರಾ.ಪಂ ಸದಸ್ಯರು ದಾನಿಗಳ ನೆರವಿನಿಂದ ಕೊರೋನಾ ಪಾಸಿಟಿವ್ ಬಂದಿರುವ ಬಡ ಕುಟುಂಬಗಳಿಗೆ ದಿನಸಿ, ತರಕಾರಿ ವಿತರಿಸಿಲಾಯಿತು.

ಈ ಸಂದರ್ಭ ಗ್ರಾಪಂ ಸದಸ್ಯರಾದ ಎಂ ಕೆ ಶಾರದಾ, ಲತಾಕುಮಾರಿ ಆಜಡ್ಕ, ವಸಂತ ಮೊಗ್ರ, ಪ್ರಮುಖರಾದ ಬಿಟ್ಟಿ‌ ಬಿ ನೆಡುನೀಲಂ, ಮಹೇಶ್ ಪುಚ್ಚಪ್ಪಾಡಿ, ಸುರೇಶ್ ಮೊಗ್ರ, ಬಾಬು ಕಮಿಲ ಮೊದಲಾದವರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.