ಸುಳ್ಯ ಪೊಲೀಸ್ ಅಧಿಕಾರಿಗಳ ಪ್ರಾಣಿ ಪ್ರೇಮ

Advt_Headding_Middle

 

ಕೊರೋನ ವೈರಸ್ ಹಿನ್ನೆಲೆಯಲ್ಲಿ ಲಾಕ್ಡೌನ್ ಕಾರಣದಿಂದ ನಗರದಾದ್ಯಂತ ಅಂಗಡಿಗಳು, ಹೋಟೆಲ್ ಮುಂಗಟ್ಟುಗಳು ಕಾರ್ಯಾಚರಿಸದೆ ಬೀದಿ ಬದಿಯ ಪ್ರಾಣಿಗಳು ಅನ್ನ ನೀರು ಸಿಗದೆ ಅಲೆದಾಡುತ್ತಿರುವ ದೃಶ್ಯ ಎಲ್ಲರ ಗಮನಕ್ಕೂ ಬಂದಿರಬಹುದು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಮೂಕಪ್ರಾಣಿಗಳ ರೋದನ ಕಂಡಿದೆ. ಪ್ರಾಣಿಗಳ ಸಂಕಷ್ಟಕ್ಕೆ ಸ್ಪಂದಿಸಿರುವ ಸುಳ್ಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಾಣಿಗಳಿಗೆ ಆಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.
ಮೇ.18 ರಂದು ಜ್ಯೋತಿ ವೃತ್ತದ ಬಳಿ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಹಾಗೂ ಸಿಬ್ಬಂದಿಗಳು ತಮ್ಮ ವಾಹನದಲ್ಲಿ ಬಿಸ್ಕೆಟ್, ರಸ್ಕ್ , ಬ್ರೆಡ್ ಗಳನ್ನು ತಂದು ರಸ್ತೆಬದಿಯಲ್ಲಿ ಆಹಾರಕ್ಕಾಗಿ ಅಲೆದಾಡುವ ಶ್ವಾನಗಳಿಗೆ ಮತ್ತು ಇತರ ಪ್ರಾಣಿಗಳಿಗೆ ನೀಡುತ್ತಿರುವ ದೃಶ್ಯ ಕಂಡುಬಂತು. ಇವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಹಲವರ ಶ್ಲಾಘನೆಗೂ ಪಾತ್ರವಾಯಿತು.
ಲಾಕ್ಡೌನ್ ಸಮಯದಲ್ಲಿ ರಸ್ತೆಗಿಳಿದ ಜನತೆ ಪೊಲೀಸರನ್ನು ಕಂಡಾಗ ಎದ್ನೋ ಬಿದ್ನೋ ಎಂದು ಓಡುವ, ಕೆಲವು ಕಡೆಗಳಲ್ಲಿ ಪೊಲೀಸರು ಅಮಾನವೀಯವಾಗಿ ಜನರನ್ನು ಹೊಡೆಯುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಪೊಲೀಸರ ಮೇಲೆ ಹಲವಾರು ರೀತಿಯ ಆಕ್ರೋಶಕ್ಕೆ ಕಾರಣವಾಗಿ ಮಾಧ್ಯಮಗಳಲ್ಲಿ, ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರನ್ನು ನಿಂದಿಸುವ ಪ್ರಸಂಗಗಳು ಕಂಡುಬರುತ್ತಿದ್ದವು.
ಆದರೆ ಲಾಕ್ ಡೌನ್ ಸಂದರ್ಭದಲ್ಲಿ ಸುಳ್ಯದ ಪೋಲಿಸರ ಜನಸ್ನೇಹಿ ಕಾರ್ಯಗಳು ಒಂದಲ್ಲ ಒಂದು ರೀತಿಯಲ್ಲಿ ಜನ ಮನ್ನಣೆಗೆ ಪಾತ್ರವಾಗುತ್ತದೆ. ಕಳೆದ ಬಾರಿಯ ಲಾಕ್ ಡೌನ್ ಸಂದರ್ಭದಲ್ಲಿ ನೂರಾರು ಮಂದಿ ನಿರಾಶ್ರಿತರು, ಅಸಂಘಟಿತ ಕೂಲಿ ಕಾರ್ಮಿಕರಿಗೆ, ಆಹಾರಧಾನ್ಯಗಳ ಕಿಟ್ಟನ್ನು ವಿತರಿಸುವ ಮೂಲಕ ಸುಳ್ಯದ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಜನತೆಯ ಮನಸ್ಸಿನಲ್ಲಿ ಉಳಿದಿದ್ದರು. ಇದೀಗ ಇವರ ಪ್ರಾಣಿಗಳ ಮೇಲಿನ ಪ್ರೇಮ ಮತ್ತೊಮ್ಮೆ ಪೋಲಿಸರು ಕ್ರೂರ ಮನಸ್ಸಿನವರಲ್ಲ , ಅವರಲ್ಲಿಯೂ ದಯೆ ಧರ್ಮ ತುಂಬಿದ ವಿಶಾಲ ಹೃದಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.