ಶ್ವಾಸಕೋಶದ ಆರೋಗ್ಯಕ್ಕೆ ಹಬೆ ಚಿಕಿತ್ಸೆ

Advt_Headding_Middle

 

ದೇಶದಲ್ಲೆಡೆ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಎಲ್ಲೆಡೆ ಕೊರೊನದೆ ಸುದ್ದಿ.ನಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಕೊರೊನ ವೈರಾಣು ನಮ್ಮ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಇದರಿಂದಾಗಿ, ಗಂಟಲು ನೋವು, ಗಂಟಲು ಕೆರೆತ, ಕಫ, ಕೆಮ್ಮು ಮುಂತಾದ ಉಸಿರಾಟದ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ.
ಉಸಿರಾಟದ ತೊಂದರೆ ಇರುವಾಗ ಬಿಸಿ ಹಬೆಯನ್ನು ತೆಗೆದುಕೊಳ್ಳುವುದು ಹಿಂದಿನ ಕಾಲದಿಂದಲೂ ರೂಢಿಯಲ್ಲಿದೆ. ಅದೇ ವಿಧಾನವನ್ನು ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ ಪಾಲಿಸುವುದು ಸೂಕ್ತ. ಕುದಿಯುವ ನೀರಿನ ಆವಿಯನ್ನು ಎಳೆದುಕೊಳ್ಳುವುದಕ್ಕೆ ಹಬೆ ಚಿಕಿತ್ಸೆ ಎನ್ನುತ್ತಾರೆ.

ಹಬೆ ತೆಗೆದುಕೊಳ್ಳುವ ವಿಧಾನ :
ಚೆನ್ನಾಗಿ ತೊಳೆದಿರುವ ಒಂದು ಪಾತ್ರೆಗೆ ಅರ್ಧದಷ್ಟು ಶುದ್ಧ ನೀರನ್ನು ತುಂಬಿಸಿ ಅದಕ್ಕೆ 5-6 ತುಳಸಿ ಎಲೆ, 2 ಕರ್ಪೂರ, 2-3 ಪುದಿನ ಎಲೆ ಹಾಗೂ ಓಂಕಾಳನ್ನು ಹಾಕಿ ಸ್ವಲ್ಪ ಹೊತ್ತು ಕುದಿಯಲು ಬಿಡಿ. ನಂತರ, ಪಾತ್ರೆಯನ್ನು ಕೆಳಗಿಳಿಸಿ, ನಿಮ್ಮ ಮುಖಕ್ಕೂ ಪಾತ್ರೆಗೂ ನಿರ್ಧಿಷ್ಟ ಅಂತರದಲ್ಲಿ ಹಬೆಯನ್ನು ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ನಿಮ್ಮ ಕಣ್ಣುಗಳು ಮುಚ್ಚಿಸಬೇಕು. ಹಬೆ ಹೊರಗೆ ಹೋಗದ ಹಾಗೇ ಒಂದು ಬಟ್ಟೆಯನ್ನು ತಲೆಯ ಮೇಲೆ ಹೊದ್ದುಕೊಂಡು 2-3 ನಿಮಿಷಗಳ ಕಾಲ ಮೂಗಿನಿಂದ ಹಬೆಯನ್ನು ಎಳೆದುಕೊಳ್ಳಬೇಕು. ದಿನಕ್ಕೆ ಎರಡು ಬಾರಿ ಹಬೆ ತೆಗೆದುಕೊಳ್ಳುವುದು ತುಂಬಾ ಒಳ್ಳೆಯ ಅಭ್ಯಾಸ.
ಹಬೆ ತೆಗೆದುಕೊಳ್ಳುವಾಗ ತುಳಸಿ ಎಣ್ಣೆ, ನೀಲಗಿರಿ ಎಣ್ಣೆ ಅಥವಾ ಲವಂಗದ ಎಣ್ಣೆಯನ್ನು ಕೂಡ ಉಪಯೋಗಿಸಿದರೆ ಇನ್ನೂ ಉತ್ತಮ. ಸ್ಟೀಮರ್ ಇರುವವರು ಸ್ಟೀಮರ್ ಸಹಾಯದಿಂದ ಕೂಡ ಹಬೆಯನ್ನು ತೆಗೆದುಕೊಳ್ಳಬಹುದು.

ಹಬೆ ಚಿಕಿತ್ಸೆಯ ಪ್ರಯೋಜನಗಳು:
– ಹಬೆ ತೆಗೆದುಕೊಳ್ಳುವುದರಿಂದ ಶ್ವಾಸಕೋಶದಲ್ಲಿ ಗಟ್ಟಿಯಾಗಿರುವ ಕಫವನ್ನು ಸಡಿಲ ಮಾಡಿ ಹೊರ ಹಾಕಲು ಸಹಾಯ ಮಾಡುತ್ತದೆ.ಹಾಗು ಶ್ವಾಸಕೋಶದಲ್ಲಿ ಕಫ ಶೇಖರವಾಗುವುದನ್ನು ತಡೆಯಬಹುದು.
-ಕುದಿಯುವ ನೀರಿನ ಆವಿಯು ಶ್ವಾಸಕೋಶದ ಮಾಂಸಖಂಡಗಳಿಗೆ ವಿಶ್ರಾಂತಿಯನ್ನು ನೀಡಿ ಕೆಮ್ಮು ಬಾರದ ಹಾಗೆ ತಡೆಯುತ್ತದೆ.
-ಗಂಟಲು ನೋವು, ಗಂಟಲು ಕೆರೆತ ನಿವಾರಣೆ: ಆವಿ ತೆಗೆದುಕೊಳ್ಳುವುದರಿಂದ ಗಂಟಲು ಹಾಗೂ ಮೂಗಿನ ತೇವಾಂಶವನ್ನು ಕಾಪಾಡಿ ಕಫ, ಉರಿಯೂತವನ್ನು ನಿವಾರಿಸುತ್ತದೆ.
-ಮೂಗಿನ ಸೈನಸ್ ರಂಧ್ರಗಳಲ್ಲಿ ಕಫ ಕಟ್ಟಿರುವುದನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ, ತಲೆ ಭಾರವನ್ನು ಕಡಿಮೆ ಮಾಡಬಹುದಾಗಿದೆ.
“ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬರದಂತೆ ತಡೆಯುವುದು ಒಳ್ಳೆಯದು”. ಹಾಗಾಗಿ, ಕೊರೊನ ಹತ್ತಿಕ್ಕಲು ಕೈ-ಕಾಲುಗಳ ಸ್ವಚ್ಛತೆ, ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಧರಿಸುವುದು, ಪ್ರಾಣಾಯಾಮ, ಯೋಗಾಭ್ಯಾಸ,ಕಷಾಯ ಮಾಡಿ ಕುಡಿಯುವುದು, ಆರೋಗ್ಯಯುಕ್ತ ಆಹಾರ ಪದ್ಧತಿಯನ್ನು ಅನುಸರಿಸುವುದರ ಜೊತೆಗೆ ಹಬೆ ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳುವುದು ಒಂದು ಒಳ್ಳೆಯ ಅಭ್ಯಾಸ.

ಡಾ// ಗ್ರೀಷ್ಮಾ ಗೌಡ ಆರ್ನೋಜಿ
ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸ್ ಮೂಡಬಿದರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.