ಸುಳ್ಯ- ಪಾಣತ್ತೂರು ಸಂಪರ್ಕ ರಸ್ತೆ ಕೆಸರುಮಯ -ಅರ್ಧಕ್ಕೆ ನಿಂತ ಕಾಮಗಾರಿ

Advt_Headding_Middle

 

ಸ್ಥಳೀಯರಿಂದ ರಸ್ತೆಯಲ್ಲೇ ಬಾಳೆಗಿಡ ನೆಟ್ಟು ಆಕ್ರೋಶ –

ಆಡಳಿತ ಪಕ್ಷದ ವಿರುದ್ಧ
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ನಾಗರೀಕರು

ಸುಳ್ಯ ಪಾಣತ್ತೂರು ಸಂಪರ್ಕ ರಸ್ತೆಯ ಗಡಿಪ್ರದೇಶ ಕಲ್ಲಪ್ಪಳ್ಳಿ ಎಂಬಲ್ಲಿ ರಸ್ತೆಯ ಅಗಲೀಕರಣ ಕಾಮಗಾರಿ ಕೆಲಸ ನಡೆಯುತ್ತಿದ್ದು ಇದೀಗ ಕೆಲಸ ಅರ್ಧದಲ್ಲೇ ನಿಂತಿದೆ. ಇದರಪರಿಣಾಮ ರಸ್ತೆ ಪಕ್ಕದಲ್ಲಿ ಸುಮಾರು 50 ಮೀಟರ್ ನಷ್ಟು ಉದ್ದಕ್ಕೆ ಮಣ್ಣು ರಾಶಿ ಹಾಗೆಬಿಟ್ಟಿರುತ್ತಾರೆ.ಇದೀಗ ಸುರಿಯುತ್ತಿರುವ ಮಳೆಯಿಂದ ರಸ್ತೆ ಎಲ್ಲಾ ಕೆಸರುಮಯವಾಗಿದ್ದು ಹೂಳು ತುಂಬಿ ಕೆಸರು ಗದ್ದೆಯಂತಾಗಿದೆ. ವಾಹನ ಸವಾರರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.ಕೆಲವು ದ್ವಿಚಕ್ರ ಸವಾರರು ಉರುಳಿರುವುದಲ್ಲದೆ, ಚತುಷ್ಚಕ್ರ ವಾಹನ ಅಲ್ಲೇ ಹೂತು ಹೋದ ಘಟನೆಯುನಡೆದಿದೆ.ಇದರಿಂದ ಆಕ್ರೋಶಗೊಂಡ
ಸ್ಥಳೀಯರು ರಸ್ತೆಯಲ್ಲೇ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಪಂಚಾಯತ್ ಸದಸ್ಯರ ಮತ್ತು ತಾಲೂಕು ಪಂಚಾಯತ್ ಸದಸ್ಯರ ಗಮನಕ್ಕೆ ವಿಚಾರ ತರಲಾಗಿದೆ. ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರ ಕೆಲಸ ಅರ್ಧಕ್ಕೆ ಬಿಟ್ಟು ಹೋಗಿರುವುದಲ್ಲದೆ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಉತ್ತರ ನೀಡಿರುತ್ತಾರೆ.

 ಈ ರಸ್ತೆಯ ಪರಿಸ್ಥಿತಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಾಳೆಗಿಡ ನೆಟ್ಟ ಭಾವಚಿತ್ರದೊಂದಿಗೆ ಕಲ್ಲಪಳ್ಳಿ ರಸ್ತೆಯಲ್ಲಿ ಕಮ್ಯುನಿಸ್ಟ್ ವಾದಿಗಳು ಬಾಳೆಕೃಷಿ ಮಾಡುತ್ತಿದ್ದಾರೆ.


ಪಂಚಾಯತ್ ನಿಂದ ರಾಜ್ಯ ದವರೆಗೆ ಇವರದೇ ಸರಕಾರ ಇದ್ದರೂ ಇಂತಹ ಕ್ಷುಲ್ಲಕ ಕಾರಣ ಕೊಡುವುದು ಅಸಡ್ಡೆಯ ಪರಮಾವಧಿ. ಫೇಸ್ ಬುಕ್ ನಲ್ಲಿ ಕೇರಳ ಮಾಡೆಲ್ ಎಂದು ಹೇಳುವ ಪ್ರಚಾರ ಪ್ರಿಯರು ಈ ರಸ್ತೆಯನ್ನು ಸರಿಪಡಿಸಿದರೆ ಉತ್ತಮ. ಎಂಬುದಾಗಿ ಬರೆಯಲ್ಪಟ್ಟ ಪೋಸ್ಟರ್ ವ್ಯಾಪಕವಾಗಿ ವೈರಲ್ ಆಗುತ್ತಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.