ಸುಳ್ಯಕ್ಕೆ ಆಮ್ಲಜನಕ ಘಟಕ ಮಂಜೂರು

Advt_Headding_Middle

 

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಸರಕಾರ ಕಡೆಗೂ ಅನುಮತಿ ನೀಡಿದೆ.

ಇದಕ್ಕಾಗಿ ಸರಕಾರದಿಂದ ೮೩ ಲಕ್ಷ ರೂ ಮಂಜೂರಾಗಿದೆ. ಘಟಕ ನಿರ್ಮಾಣಕ್ಕಾಗಿ ತಾಲ್ಲೂಕು ಆಸ್ಪತ್ರೆಯ ಹಿಂಭಾಗದಲ್ಲಿ ಸ್ಥಳ ಗುರುತು ಮಾಡುವ ಕಾರ್ಯವೂ ನಡೆದಿದೆ.
ಪುತ್ತೂರು ಬಂಟ್ವಾಳ ಬೆಳ್ತಂಗಡಿ ಮೊದಲಾದ ಕಡೆ ವಿವಿಧ ವ್ಯವಸ್ಥೆಯಡಿ ಘಟಕ ಸ್ಥಾಪನೆಗೆ ಪ್ರಕ್ರಿಯೆಗಳು ನಡೆದಿವೆ.
ಆರಂಭಿಕ ಹಂತದಲ್ಲಿ ಸುಳ್ಯ ಘಟಕದ ಬಗ್ಗೆ ವಿಷಯ ಇರದಿದ್ದರೂ ಕೋವಿಡ್ ಗ್ರಾಮಾಂತರಗಳಲ್ಲಿ ಹೆಚ್ಚಾಗುತ್ತಿದ್ದಾಗ ಆಕ್ಸಿಜನ್ ಕೊರತೆ ಆಗುವ ಅಪಾಯ ಅರಿತ ಸಚಿವ ಎಸ್. ಅಂಗಾರರವರ ಪ್ರಯತ್ನದಿಂದ ಸುಳ್ಯಕ್ಕೆ ಅನುದಾನ ಬಿಡುಗಡೆಯಾಗಿದೆ.
ಆಮ್ಲಜನಕ ಘಟಕ ಸುಳ್ಯದಲ್ಲಿ ಸ್ಥಾಪನೆಯಾಗಲಿರುವುದರಿಂದ ಇಲ್ಲಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ತಾಲ್ಲೂಕಿನ ಜನರಿಗೆ ದೊರೆಯಲಿದ್ದು ಓಡಾಟ ತಪ್ಪಲಿದೆ.
ಈವರೆಗೆ ಆಮ್ಲಜನಕದ ಕೊರತೆ ಸುಳ್ಯಕ್ಕೆ ಅಷ್ಟೇನು ಬಾಧಿಸಿಲ್ಲ. ಈಗ ದಿನವೊಂದಕ್ಕೆ ಸರಾಸರಿ ೫ಸಿಲಿಂಡರ್ ಆಕ್ಸಿಜನ್ ಅವಶ್ಯಕತೆ ಬೀಳುತ್ತಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಒಟ್ಟು ಮೂವತ್ತು ಸಿಲಿಂಡರ್ ಇದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.