ಲಸಿಕೆ ಕುರಿತು‌ ಕಾಂಗ್ರೆಸ್ ಅಪಪ್ರಚಾರ ಮಾಡಿದ್ದಲ್ಲ. ಬಿಜೆಪಿಯವರು ಸತ್ಯ ಅರಿತು ಮಾತನಾಡಲಿ : ಎಂ.ವೆಂಕಪ್ಪ ಗೌಡ

Advt_Headding_Middle

 

ಲಸಿಕೆ ಕುರಿತು ಕಾಂಗ್ರೆಸ್ ಯಾವತ್ತೂ ಅಪಪ್ರಚಾರ ಮಾಡಿಲ್ಲ.‌ ಈ ರೀತಿ ಆರೋಪವನ್ನು ಬಿಜೆಪಿಗರು ಮಾಡುವ ಮೊದಲು ಸತ್ಯ ತಿಳಿದು ಮಾತನಾಡಲಿ ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ, ಸುಳ್ಯ ನ.ಪಂ. ಸದಸ್ಯ ಎಂ.ವೆಂಕಪ್ಲ ಗೌಡ ಹೇಳಿದ್ದಾರೆ.

ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್‌ ಪಕ್ಷವನ್ನು ಟೀಕಿಸುತ್ತಾ ಲಸಿಕೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡಿದೆ ,ಆ ಕಾರಣಕ್ಕೆ ಕರೋನಾ ಸೋಂಕಿತರ ಸಾವಿಗೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ತಪ್ಪನ್ನು ಮುಚ್ಚಿಟ್ಟುಕೊಂಡು ಮಾತನಾಡುದನ್ನು ಜನ ಕಂಡಿದ್ದಾರೆ .ವಾಸ್ತವ ಸಂಗತಿ ಏನೆಂಬುದನ್ನು ಜನ ತಿಳಿದುಕೊಳ್ಳ ಬೇಕಾಗಿದೆ .ಈ ದೇಶದಲ್ಲಿ ಲಸಿಕೆ ತಯಾರುಮಾಡುವ ಒಂದೆರಡು ಕಂಪೆನಿಗಳನ್ನೇ ನಂಬಿಕೊಂಡು ಬಿಡಲಾಯಿತು. ಅಷ್ಟಕ್ಕೂ ಲಸಿಕೆ ಪ್ರಯೋಗ ಹಂತದಲ್ಲಿ ಇರುವಾಗಲೇ ಬಿಜೆಪಿ ಲಸಿಕೆ ಯನ್ನು ಮುಂದಿಟ್ಟುಕೊಂಡು ಮೋದಿಜಿಯನ್ನು ಮತ್ತಷ್ಟು ಪ್ರಚಾರ ಮಾಡಲು ಹೊರಟಿರುವ ಸಂದರ್ಭದಲ್ಲಿ ಲಸಿಕೆ ಯ ಎಲ್ಲಾ ಹಂತದ ಪ್ರಯೊಗ ಪೂರೈಸದೆ ಉಪಯೋಗಿಸುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿರುವುದು ಇದೆ. ಅದರೆ ಅದರ ಆರ್ಥ ಬಿಜೆಪಿ ಯವರು ಹೇಳಿದಂತೆ ಕಾಂಗ್ರೆಸ್ ಅಪಪ್ರಚಾರ ಮಾಡಿದ್ದು ಅಲ್ಲ .ಇದಕ್ಕೆ ಪೂರಕ ಎಂಬಂತೆ ಜಗತ್ತಿನಲ್ಲಿ ಈಗ 12 ಲಸಿಕಾ ಕಂಪೆನಿಗಳಿವೆ .ಅವೆಲ್ಲವೂ ನಮ್ಮ ದೇಶಕ್ಕೆ ಲಸಿಕೆ ಒದಗಿಸಲು ಗ್ಲೋಬಲ್ ಟೆಂಡರ್ ನ್ನು ಈಗಷ್ಟೇ ಕರೆಯಲಾಗಿದೆ .ಇದನ್ನೇ ಅಂದೇ ಕರೆಯಬಹುದಿತ್ತಲ್ಲಾ ? ಇದನ್ನು ಕಾಂಗ್ರೆಸ್ ಕೇಳಿದ್ದು. ಇನ್ನೊಂದು ವಿಚಾರ ನಮ್ಮ ರಾಜ್ಯದಲ್ಲಿ ಅಕ್ಸಿಜನ್, ಬೆಡ್ ದೊರೆಯದೆ ಅದೆಷ್ಟು ಜನ ಸತ್ತರು ? ಇದನ್ನ ನೊಂದವರ ಕಡೆಯಿಂದ ಕಾಂಗ್ರೆಸ್ ಪಕ್ಷ ಮತ್ತು ಮಾಧ್ಯಮ ಸಮರ್ಥವಾಗಿ ಪ್ರಶ್ನೆ ಮಾಡಿತ್ತು. ಇದರಿಂದ ರಾಜ್ಯದ ಸಾವಿರಾರು ಜನರ ಪ್ರಾಣ ಉಳಿಯಿತು .ಇದನ್ನೆ ನ್ಯಾಯಾಲಯಗಳು ಹೇಳಬೇಕಾದ ಪರಿಸ್ಥಿತಿ ಕೂಡಾ ಬಂದೊದಗಿತು. ಹಾಗಾಗಿ ಸರಕಾರ ಕೋರ್ಟ್ ಗಳಿಂದ ಛೀಮಾರಿ ಹಾಕಿಸಿಕೊಂಡಿತು. ಇದನ್ನ ಮುಚ್ಚಿಹಾಕಲು ಬಿಜೆಪಿ ಕಾಂಗ್ರೆಸ್ ಮೇಲೆ ಗೂಭೆ ಕೂರಿಸುವ ಕೆಲಸ ಮಾಡುತ್ತಿರೋದು ಮಾತ್ರ ದುರಾದೃಷ್ಟಕರ ಎಂದು ವೆಂಕಪ್ಪ ಗೌಡರು ಹೇಳಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.