ಕೊರೋನಾ – ಜಾಗೃತಿ ಗೀತೆ

Advt_Headding_Middle

 

ಕೊರೋನಾ ಬಂದಾತು ಜೋಪಾನ
ಓ ಅಣ್ಣಯ್ಯ, ಓ ಅಕ್ಕಯ್ಯ, ಓ ತಮ್ಮಯ್ಯ
ಕೊರೋನಾ ಬಂದಾತು ಜೋಪಾನ||2||

ಮಾಸ್ಕ್, ಸ್ಯಾನಿಟೈಸರ್ ಬಿಡಂಗಿಲ್ಲ
ದೈಹಿಕ ಅಂತರ ಮರೆಯಂಗಿಲ್ಲ|
ಸಿಕ್ಕಸಿಕ್ಕಲ್ಲಿ ಗುಂಪುಗೂಡಿ
ಶೀತ ಕೆಮ್ಮು ಎಲ್ಲಾ ಹರಡಿ
ಕೊರೋನಾವನ್ನು ಹಬ್ಬಿಸ್ಕೊಂಡು
ಜೀವಕ್ಕೆ ಅಪಾಯ ತರ್ತೀರಲ್ಲ
ನೀವು ಜೀವಕ್ಕೆ ಅಪಾಯ ತರ್ತೀರಲ್ಲ||ಕೊರೋನಾ||

ಮೂಗು ಬಾಯಿ ಮುಟ್ಟಂಗಿಲ್ಲಾ
ಕೈಕಾಲು ಸ್ವಚ್ಛತೆ ದಿನವೆಲ್ಲಾ|
ಖರೀದಿಗೆಂದು ಪೇಟೆಗೆ ಹೋಗಿ
ಸಿಕ್ಕ ಸಿಕ್ಕ ವಸ್ತು ಮುಟ್ಟಬೇಡ
ಎಲ್ಲೆಂದರಲ್ಲಿ ಉಗುಳಬೇಡ
ಉಗುಳಿ ರೋಗ ಹರಡಬೇಡ||ಕೊರೋನಾ||

ಮನೆಯಿಂದ ಹೊರಗೆ ಹೋಗುತ್ತೀಯಾ
ಎಲ್ಲೆಂದರಲ್ಲಿ ಅಲೆಯುತ್ತೀಯಾ
ನೀತಿ ನಿಯಮ ಗಾಳಿಗೆ ತೂರಿ
ಅವ್ರಿವ್ರನ್ನು ಆಡ್ಕೋತೀಯಾ
ಕೊರೋನಾ ಕೇಸ್ ಹೆಚ್ಚಾಯ್ತೂಂತಾ
ಸರ್ಕಾರವನ್ನು ದೂರುತ್ತೀಯಾ||ಕೊರೋನಾ||

ಆಕ್ಸಿಜನ್ ಬೆಡ್ ದಂಧೆ ಮಾಡಿ
ಬಡವ್ರ ಜೀವದ ಜೊತೆ ಆಟಡ್ತೀಯಾ
ಜೀವದ ಬೆಲೆ ತಿಳಿದು ನೀನು
ಮಾನವನಾಗೋದು ಕಲಿಯಯ್ಯಾ
ಜೀವವೇ ಇಲ್ಲ ಎಂದ ಮೇಲೆ
ಹಣ ಅಂತ ಯಾಕ್ ಸಾಯುತ್ತೀಯಾ
ಸತ್ತ ಮೇಲೆ ಯಾರೂ ಏನು
ಜೊತೆಗೆ ಒಯ್ಯೋದಿಲ್ಲೆಂದು ತಿಳಿಯಯ್ಯ||ಕೊರೋನಾ||

ಡಾಕ್ಟ್ರ್, ನರ್ಸ್ ಪೋಲೀಸ್ರೆಲ್ಲಾ
ತಮ್ಮ ಜೀವದ ಹಂಗು ತೊರೆದು
ನಿಮ್ಮನ್ನು ಕಾಯ್ಕೊಂಡಿರ್ತಾರಲ್ಲ
ಅವ್ರಿಗೂ ಹೆಂಡತಿ-ಮಕ್ಕಳೈತೆಂದು
ಅರಿತು ಎಲ್ರೂ ಬದುಕಬೇಕು
ನಿಮ್ಮ ಆರೋಗ್ಯ ನೀವೇ ನೋಡ್ಕೊಂಡು
ಆನಂದದಿಂದ ಬಾಳಬೇಕು||ಕೊರೋನಾ||

ಮನೆಯ ಮುಂದೆ ಗಿಡ ನೆಡಬೇಕು
ಶುದ್ಧಗಾಳಿ ಸೇವಿಸಬೇಕು
ಊರ ಮುಂದೆ ಸ್ವಚ್ಛಬೇಕು
ಸ್ವಚ್ಛ ನೀರು ಕುಡಿಯಬೇಕು
ಜೀವದ ಬೆಲೆ ತಿಳಿದು ನೀನು
ಸುಂದರ ಬದುಕು ಸಾಗಿಸಬೇಕು||ಕೊರೋನಾ||

*ಡಾ. ಅನುರಾಧಾ ಕುರುಂಜಿ*
*ಉಪನ್ಯಾಸಕರು, ಎನ್ನೆಂಸಿ, ಸುಳ್ಯ*

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.