Breaking News

ಸುಳ್ಯದ ಲ್ಯಾಂಪ್ ಸೊಸೈಟಿಯಲ್ಲಿ ಮಧ್ಯಾಹ್ನ 10 ಗಂಟೆಯವರೆಗೆ ಬಂದವರಿಗೂ ಪಡಿತರ ನೀಡುತ್ತೇವೆ : ಲ್ಯಾಂಪ್ ಅಧ್ಯಕ್ಷ ಸೀತಾನಂದ ಬೇರ್ಪಡ್ಕ ಹೇಳಿಕೆ

Advt_Headding_Middle

 

“ಸುಳ್ಯದ ಲ್ಯಾಂಪ್ ಸೊಸೈಟಿಯಲ್ಲಿ ಬೆಳಿಗ್ಗೆ 1೦ ಗಂಟೆವರೆಗೆ ಬಂದವರಿಗೂ ಪಡಿತರ ವಿತರಿಸುತ್ತೇವೆ. ಬಂದವರನ್ನು ವಾಪಾಸ್ ಕಳುಹಿಸುವುದಿಲ್ಲ” ಎಂದು ಲ್ಯಾಂಪ್ ಸೊಸೈಟಿ ಅಧ್ಯಕ್ಷ ಸೀತಾನಂದ ಬೇರ್ಪಡ್ಕ ಹೇಳಿದ್ದಾರೆ.


ಲ್ಯಾಂಪ್ ಸೊಸೈಟಿಯಲ್ಲಿ ಪಡಿತರ ವಿತರಣೆಗಾಗಿ ಬೆಳಿಗ್ಗೆ 7೦ ಟೋಕನ್ ವಿತರಿಸುತ್ತಿದ್ದು, ಅದಕ್ಕಿಂತ ಹೆಚ್ಚು ಮಂದಿ ಬಂದರೆ ವಾಪಸ್ ಹೋಗಬೇಕಾಗಿ ಬರುತ್ತಿದೆ ಎಂದು ಸಾರ್ವಜನಿಕ ದೂರು ಬಂದ ಹಿನ್ನಲೆಯಲ್ಲಿ ಮೇ.19ರಂದು ಬೆಳಿಗ್ಗೆ 7 ಗಂಟೆಗೆ ಸುದ್ದಿ ಲ್ಯಾಂಪ್ ಸೊಸೈಟಿಗೆ ಭೇಟಿ ನೀಡಿತು. ಅದಾಗಲೇ ಪಡಿತರ ಪಡೆಯಲು ಬಂದಿದ್ದ ಜನರು ಸರತಿಯ ಸಾಲಲ್ಲಿ ನಿಂತಿದ್ದರು.

7೦ ಜನರಿಗೆ ಟೋಕನ್ ಕೊಡುವುದರಿಂದ ಆದಷ್ಟು ಬೇಗ ಟೋಕನ್ ಪಡೆದುಕೊಳ್ಳಬೇಕೆಂದು ಜನರು ಬೆಳಿಗ್ಗೆ 6 ಗಂಟೆಗೇ ಬರುತ್ತಾರೆ. ಸಿಬ್ಬಂದಿ ಕೂಡಾ 6.3೦ಕ್ಕೆ ಬಂದು ಟೋಕನ್ ವಿತರಿಸುತ್ತಾರೆ. 7 ಗಂಟೆಗೆ ಕಂಪ್ಯೂಟರ್ ಸಿಬ್ಬಂದಿ ಬರುತ್ತಾರೆ. ಓಟಿಪಿ ಆರಂಭವಾಗುವುದು 7 ಗಂಟೆಗಾದ್ದರಿಂದ ಅವರು ಟೋಕನ್ ಪಡೆದು ಸರತಿಯ ಸಾಲಿನಲ್ಲಿ ನಿಂತಿರುತ್ತಾರೆ. 7೦ ಜನರಿಗಿಂತ ಹೆಚ್ಚು ಕಾರ್ಡುದಾರರು ಬಂದರೆ ಅವರು ವಾಪಸ್ ಹೋಗಬೇಕಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಮೇ.18 ರಂದು 91 ಮಂದಿಗೆ ರೇಶನ್ ಕೊಟ್ಟಿರುವುದು ಕಂಡುಬಂತು.

“7೦ ಮಂದಿಗೆ ಟೋಕನ್ ನೀಡಿದ್ದರೂ, 1೦ ಗಂಟೆವರೆಗೆ ಬಂದವರಿಗೆ ರೇಶನ್ ಕೊಡುತ್ತಿದ್ದೇವೆ. ತಿಂಗಳ ಅಂತ್ಯದವರೆಗೂ ರೇಶನ್ ಕೊಡುತ್ತೇವೆ. ಎಲ್ಲರೂ ಒಮ್ಮೆಗೇ ಬರಬೇಕಾಗಿಲ್ಲ ಎಂದು ನಾವು ಎಲ್ಲರೊಡನೆ ಹೇಳುತ್ತಲೇ ಇದ್ದೇವೆ. ಆದರೂ ಜನ ಬಂದು ರಶ್ ಏರ್ಪಡುತ್ತಿದೆ ” ಎಂದು ರೇಶನ್ ವಿತರಣಾ ಸಿಬ್ಬಂದಿ `ಸುದ್ದಿ’ಯೊಂದಿಗೆ ಹೇಳಿದರು.
“ನಾವು ಬರುವಾಗ ಇಲ್ಲಿ ಟೋಕನ್ ವಿತರಿಸಿ ಆಗಿರುವುದಾಗಿ ಹೇಳಿದ್ದರಿಂದ ಇವತ್ತು ಇಲ್ಲಿ ನಿಂತು ಪ್ರಯೋಜನವಿಲ್ಲವೆಂದು ವಾಪಸ್ ಹೋಗಿದ್ದೇವೆ. ಪುನಃ ಇವತ್ತು ಬೆಳಿಗ್ಗೆ ಬೇಗನೆ ಬಂದು ಟೋಕನ್ ಪಡೆದು ಕ್ಯೂ ನಿಂತಿದ್ದೇವೆ” ಎಂದು ಇಬ್ಬರು ಪಡಿತರದಾರರು ಹೇಳಿದರು.
ಸುದ್ದಿ ಪ್ರತಿನಿಧಿ ಸ್ಥಳದಿಂದಲೇ ತಹಶೀಲ್ದಾರರನ್ನು ಸಂಪರ್ಕಿಸಿ ವಿಚಾರಿಸಿದಾಗ ೧೨ ಗಂಟೆವರೆಗೂ ರೇಶನ್ ವಿತರಿಸಬೇಕು. ಅವರು ಕೊಡದಿದ್ದರೆ ಜನರು ನನಗೆ ತಿಳಿಸಲಿ. ನಾನು ಕೊಡಿಸುತ್ತೇನೆ ಎಂದು ತಹಶೀಲ್ದಾರ್ ಕು.ಅನಿತಾಲಕ್ಷ್ಮಿ ಹೇಳಿದರು.
ಸುದ್ದಿ ಪ್ರತಿನಿಧಿ ಲ್ಯಾಂಪ್ ಸೊಸೈಟಿ ಅಧ್ಯಕ್ಷ ಸೀತಾನಂದ ಬೇರ್ಪಡ್ಕರಿಗೆ ಫೋನ್ ಮಾಡಿ ವಿಚಾರಿಸಿದಾಗ, ಅಧ್ಯಕ್ಷರು ಕೂಡಲೇ ಲ್ಯಾಂಪ್ ಸೊಸೈಟಿಯ ರೇಶನ್ ವಿತರಣಾ ವಿಭಾಗಕ್ಕೆ ಬಂದರು.
“ರೇಶನ್‌ಗೆ ಬಂದ ಯಾರನ್ನೂ ನಾವು ವಾಪಸ್ ಕಳಿಸುತ್ತಿಲ್ಲ. ಕಳೆದೆರಡು ದಿನಗಳಿಂದ ನಾನೇ ಬೆಳಿಗ್ಗೆ ಬಂದು ನಿಲ್ಲುತ್ತಿದ್ದೇನೆ. ತಹಶೀಲ್ದಾರರು 12 ಗಂಟೆವರೆಗೆ ಕೊಡಬೇಕೆಂದು ಹೇಳಿದರೆ ನಾವು ಕೊಡಲು ಸಿದ್ಧರಿದ್ಧೇವೆ. ಆದರೆ ಪೊಲೀಸರು 1೦ ಗಂಟೆಗೆ ಬರುವುದರಿಂದ ಮತ್ತೆ ಜನ ಇರುವುದಿಲ್ಲ. ಆದರೂ ನಾವು ಇವತ್ತಿನಿಂದ 1೦ ಗಂಟೆಯವರೆಗೆ ಬಂದವರೆಲ್ಲರಿಗೂ ಪಡಿತರ ನೀಡುತ್ತೇವೆ. ಬರಿಗೈಯಲ್ಲಿ ವಾಪಸ್ ಕಳಿಸುವುದಿಲ್ಲ ” ಎಂದು ಅವರು ಭರವಸೆ ನೀಡಿದರು.

ಬೆಳ್ತಿಗೆ – ಕುಚ್ಲು ಅಕ್ಕಿ ಪ್ರಮಾಣ
ಸರ್ಕಾರ ಶೇ.೫೦ ಕುಚ್ಲು – ಶೇ.೫೦ ಬೆಳ್ತಿಗೆ ಅಕ್ಕಿ ಕೊಡಬೇಕೆಂದು ಆದೇಶಿಸಿದ್ದರೂ ಶೇ.೬೦ ಕುಚ್ಲು ಹಾಗೂ ಶೇ.೪೦ ಬೆಳ್ತಿಗೆ ಅಕ್ಕಿ ನೀಡುತ್ತಿರುವ ಬಗ್ಗೆ ಸ್ಥಳಕ್ಕೆ ಬಂದ ಆಹಾರ ನಿರೀಕ್ಷಕರನ್ನು ಕಾರ್ಡುದಾರರು ಪ್ರಶ್ನಿಸಿದರು.
“ಕಾರ್ಡುದಾರರು ಕೊಂಡೊಯ್ಯದೆ ಉಳಿದಿರುವ ಕುಚ್ಲು ಅಕ್ಕಿ ಇಲ್ಲೇ ಉಳಿದರೆ ಹಾಳಾಗಿ ನಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಹಾಗೆ ವಿತರಿಸಲು ನಮ್ಮ ಜಿಲ್ಲೆಯಲ್ಲಿ ಮೇಲಧಿಕಾರಿಗಳು ಸೂಚಿಸಿದ್ದಾರೆ. ಮುಂದಿನ ತಿಂಗಳು ಪೂರ್ತಿ ಬೆಳ್ತಿಗೆ ಅಕ್ಕಿಯೇ ಬರುತ್ತದೆ”ಎಂದು ಆಹಾರ ನಿರೀಕ್ಷಕರು ಹೇಳಿದರು. ಇದು ಕಾರ್ಡುದಾರರಿಗೆ ಸಮಾಧಾನ ತರಲಿಲ್ಲ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.