Breaking News

ಕೊರೊನಾ ಲಸಿಕೆ ಸಮರ್ಪಕವಾಗಿ ಪೂರೈಸಲು ಸಾಧ್ಯವಾಗದ ಬಿಜೆಪಿ ಸರಕಾರ ಕಾಂಗ್ರೆಸ್ ಕಡೆ ಬೊಟ್ಟು ಮಾಡುವುದು ಹಾಸ್ಯಾಸ್ಪದ : ಯು.ಟಿ. ಖಾದರ್

Advt_Headding_Middle

 

“ಕೊರೊನಾ ಲಸಿಕೆಯನ್ನು ಸಮರ್ಪಕವಾಗಿ ಪೂರೈಸಲು ಸಾಧ್ಯವಾಗದ ಬಿಜೆಪಿ ಸರಕಾರ ವಿನಾ ಕಾರಣ ಕಾಂಗ್ರೆಸ್ ನವರು ಲಸಿಕೆಗೆ ವಿರೋಧ ಮಾಡಿದ್ದಾರೆಂದು ಹೇಳುತ್ತಿರುವುದು ಹಾಸ್ಯಾಸ್ಪದ. ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ ಇಲ್ಲಿಯ ಜನರು ಬುದ್ದಿವಂತರಿದ್ದು ಎಲ್ಲವನ್ನು ಗಮನಿಸುತ್ತಿದ್ದಾರೆ. ಮುಂದಿನ ದಿನ ಸರಿಯಾದ ನಿರ್ಧಾರವನ್ನು ಜನರೇ ತೆಗೆದುಕೊಳ್ಳುತ್ತಾರೆ” ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಯು.ಟಿ. ಖಾದರ್ ಹೇಳಿದರು.
ಇಂದು ಸುಳ್ಯಕ್ಕೆ ಆಗಮಿಸಿದ ಯು.ಟಿ. ಖಾದರ್‌ರವರು ಸುಳ್ಯದ ಗ್ರಾಂಡ್ ಪರಿವಾರ ಹೋಟೆಲ್ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಲಸಿಕೆ ಬಂದ ಆರಂಭದಲ್ಲೇ ಕಾಂಗ್ರೆಸ್ ಸಲಹೆ ನೀಡಿತ್ತು. ಲಸಿಕೆಯನ್ನು ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಪಡೆದು ಆ ಮೂಲಕ ಜನರಲ್ಲಿ ಜಾಗೃತಿಗೆ ಸಲಹೆ ನೀಡಿತ್ತು. ಆದರೆ ಬಿಜೆಪಿ ಸರಕಾರ ಹಾಗೆ ಮಾಡಿಲ್ಲ. ಜತೆಗೆ ಲಸಿಕೆ ಪೂರೈಕೆ ಮಾಡುವಲ್ಲಿಯೂ ವಿಫಲವಾಗಿದೆ. ಈ ದೇಶದಲ್ಲಿ 135  ಕೋಟಿ ಜನ ಸಂಖ್ಯೆ ಇದ್ದಾರೆ. ಮಕ್ಕಳನ್ನು ಹೊರತು ಪಡಿಸಿ, 1೦೦ ಕೋಟಿ ಜನರಿಗೆ 2 ಡೋಸ್‌ನಂತೆ 2೦೦ ಕೋಟಿ ಡೋಸ್ ಲಸಿಕೆ ಬೇಕಾಗುತ್ತದೆ. ಅಷ್ಟು ಲಸಿಕೆಯನ್ನು ಸರಕಾರ ಪೂರೈಸಿದೆಯೋ? ಎಂದು ಪ್ರಶ್ನಿಸಿದ ಖಾದರ್‌ರವರು, ಸರಕಾರ ಲಸಿಕೆ ಪೂರೈಕೆ ಮಾಡಲು ವಿಫಲವಾಗಿದ್ದು ಎಲ್ಲರಿಗೂ ಗೊತ್ತಾಗಿದೆ. ಅದರಿಂದ ತಪ್ಪಿಸುವುದಕ್ಕಾಗಿ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಲಸಿಕೆ ಬೇಕಾದರೆ ಕಂಪೆನಿಗಳಿಗೆ ಹಣ ಪಾವತಿಸಿ ಆರ್ಡರ್ ಮಾಡಬೇಕು. ಆ ರೀತಿಯ ಕೆಲಸ ಸರಕಾರ ಮಾಡಿದೆಯೋ? ಂಆಡಿದ್ದರೆ ಅದರ ಮಾಹಿತಿ ನೀಡಿ ಎಂದು ಹೇಳಿದರು.
ಈ ಸರಕಾರಕ್ಕೆ ಮಾನವೀಯತೆ ಎಂಬಹುದೇ ಇಲ್ಲವಾಗಿದೆ. ಕೊರೊನಾಕ್ಕೆ ಪೂರಕ ಚಿಕಿತ್ಸೆ ಸಿಗದೆ ಆಗುತ್ತಿರುವ ಘಟನೆಗಳನ್ನು ದಿನನಿತ್ಯ ನಾವು ನೋಡುತ್ತಿzವೆ. ರೋಗ ಕಂಟ್ರೋಲ್ ಮಾಡಲು ಈ ಸರಕಾರದಿಂದ ಆಗಿಲ್ಲ.

ಇಲ್ಲಿಯ ಸಚಿವರ ನಡುವೆ ಹೊಂದಾಣಿಕೆಯೇ ಇಲ್ಲ. ಕರ್ನಾಟಕ ಹೊರತು ಪಡಿಸಿ ಉಳಿದ ರಾಜ್ಯದಲ್ಲಿ ಹೇಗೆ ಕೊರೊನಾ ಕಂಟ್ರೋಲ್‌ಗೆ ಬಂದಿದೆ. ನಮ್ಮಲ್ಲಿ ಜನರ ಕಷ್ಟವನ್ನು ನ್ಯಾಯಾಲಯ ನೋಡಿ ಆಕ್ಸಿಜನ್, ವೆಂಟಿಲೇಟರ್, ಬೆಡ್ ನೀಡಲು ಸೂಚನೆ ನೀಡಖಾದ ಪರಿಸ್ಥಿತಿ ಬಂದಿದೆ. ಕೋರ್ಟ್ ಸೌಲಭ್ಯ ಒದಗಿಸಿ ಎಂದು ಹೇಳಬೇಕೆಂದರೆ ಸರಕಾರಗಳು ಯಾಕೆ ?. ಬಿಜೆಪಿಯವರು ಲಸಿಕೆ ಪೂರೈಕೆ ಮಾಡುವುದು ಇರಲಿ, ಆಸ್ಪತ್ರೆಗಳಲ್ಲಿ ಝಿಂಕ್ ಮಾತ್ರೆ ಸಮರ್ಪಕವಾಗಿ ಒದಗಿಸಲು ಈ ಸರಕಾರಕ್ಕೆ ಆಗುತಿಲ್ಲ. ತೀರಿ ಹೋದವರ ಮನೆಯವರಿಗೆ ಶವ ಸಂಸ್ಕಾರಕ್ಕೆ ಪಿಪಿಇ ಕಿಟ್ ಕೊಡಲೂ ಇವರಿಂದ ಆಗಿಲ್ಲ. ಹಲವು ಮಂದಿ ನಮ್ಮಲ್ಲಿ ಈ ಬಗ್ಗೆ ದೂರಿಕೊಂಡಿದ್ದಾರೆ.

ನಾವು ಪ್ರತಿಪಕ್ಷದಲ್ಲಿದ್ದು ಸರಕಾರದ ವೈಫಲ್ಯವನ್ನು ಹೇಳಬೇಕಾಗುತ್ತದೆ. ನಾವು ಹೇಳಿದಾಗ ಕಾಂಗ್ರೆಸ್ ರಾಜಕಾರಣ ಮಾಡುತ್ತದೆ ಎಂದು ಮತ್ತೆ ಅವರು ಹೇಳುತ್ತಾರೆ. ಕಾಂಗ್ರೆಸ್ ಪಕ್ಷ ಇಲ್ಲಿಯ ಜನರ ಕಷ್ಟಕ್ಕೆ ಸ್ಪಂದಿಸುಲ್ಲಿ ನಿರಂತರ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ನಿಂದ ಜಾಗೃತಿ ಕಾರ್ಯ : ಕೊರೊನಾ ಹರಡದಂತೆ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ನಿರಂತರ ಜಾಗೃತಿ ಕಾರ್ಯ ಮಾಡುತ್ತಿದೆ. ಸುಳ್ಯ ತಾಲೂಕಿನಿಂದ ಯಾರಿಗಾದರೂ ಮಂಗಳೂರು ಆಸ್ಪತ್ರೆಯಲ್ಲಿ ಸಹಾಯ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಬಹುದು. ಅವರಿಗೆ ಸಹಾಯ ಮಾಡುತ್ತೇವೆ.

ಅದಕ್ಕೆಂದು ಮಂಗಳೂರಿನಲ್ಲಿ ಕಚೇರಿಯನ್ನು ತೆರೆಯಲಾಗಿದೆ ಎಂದು ಹೇಳಿದ ಯು.ಟಿ. ಖಾದರ್ ನಾವೆಲ್ಲರೂ ಜಾಗೃತಿಯಲ್ಲಿ ತೊಡಗಿಸಿಕೊಂಡು ರೋಗ ಬಾರದಂತೆ ನೋಡಿಕೊಳ್ಳಬೇಕಾಗಿದೆ. ಕೊರೊನಾ ಬಂದು ವೆಂಟಿಲೇಟರ್ ಗೆ ಹೋದರೆ ಮತ್ತೆ ಆತ ಬರುವುದು ತುಂಬಾ ಕಷ್ಟ. ಆದ್ದರಿಂದ ಈ ಬಗ್ಗೆ ಎಚ್ಚರ ಇರಬೇಕು.

ಕ್ಯೂನಲ್ಲಿರುವ ಪ್ರತಿಯೊಬ್ಬನಿಗೂ ಪಡಿತರ ಸಿಗಲಿ : ಕೊರೊನಾದ ಈ ಸಮಯದಲ್ಲಿ ಪಡಿತರ ವಿತರಣೆಯಲ್ಲಿಯೂ ಸರಕಾರ ಎಡವಿದೆ. ಲಾಕ್ ಡೌನ್ ಮಾಡುವ ಸಂದರ್ಭ ಸಿದ್ಧತೆಗಳಿಲ್ಲದೆ ಲಾಕ್ ಡೌನ್ ಮಾಡಿದೆ. ರೇಶನ್ ಅಂಗಡಿಯ ಮುಂದೆ ಜನ ಗುಂಪು ಗುಂಪಾಗಿದ್ದಾರೆ. ಅವರಿಗೆ ಕ್ಯೂನಲ್ಲಿ ಬರುವ ಹಾಗೂ ಕುಳಿತುಕೊಳ್ಳುವ ವ್ಯವಸ್ಥೆ ಮಾಡುವಂತೆ ರೇಶನ್ ಅಂಗಡಿಯವರಿಗೆ ಸೂಚನೆ ನೀಡಿಲ್ಲ. ಎ.ಪಿ.ಎಲ್. ನವರಿಗೆ ಇನ್ನೂ ಅಕ್ಕಿ ನೀಡಿಲ್ಲ. ಅಕ್ಕಿ ಬಂದರೂ ಅದಕ್ಕೆ ಹಣ ನೀಡಬೇಕಂತೆ. ಈ ಸರಕಾರ ಯಾಕೆ ಹೀಗೆ ಮಾಡುತ್ತದೆ ಎಂದು ಗೊತ್ತಾಗುತ್ತಿಲ್ಲ. ಅಕ್ಕಿ ಬೇಕು ಎಂದು ಯಾರು ಕ್ಯೂ ನಲ್ಲಿ ನಿಲ್ಲುತ್ತಾನೋ ಎಲ್ಲರಿಗೂ ಅಕ್ಕಿ ಸಿಗುವಂತಾಗಬೇಕು. ಕಷ್ಟದಲ್ಲಿರುವವನು ಮಾತ್ರ ಕ್ಯೂನಲ್ಲಿರುತ್ತಾನೆ. ಅದರಲ್ಲಿ ಎಪಿಎಲ್, ಬಿಪಿಎಲ್ ಎಂದು ನೋಡಬಾರದು. ಕಾಂಗ್ರೆಸ್ ಸರಕಾರ ೭ ಕೆ.ಜಿ. ಅಕ್ಕಿ ನೀಡುತ್ತಿತ್ತು. ಅದನ್ನು ಬಿಜೆಪಿ ಸರಕಾರ ಕಡಿತಗೊಳಿಸಿ ೫ ಕೆ.ಜಿ. ಕೊಡುತ್ತಿದೆ ಇದು ಸರಿಯಲ್ಲ ಎಂದು ಅವರು ಹೇಳಿದರು.
ಸಚಿವರು ಮಾಡಬೇಕು : ಚೆಂಡ ಮಾರುತದಿಂದ ಮೀನುಗಾರರು ಸಂಕಷ್ಕ್ಕೀಡಾಗಿದ್ದಾರೆ. ಆ ಭಾಗದಲ್ಲಿ ಹಾಣಿ ಸಂಭವಿಸಿದೆ. ಅದಕ್ಕೆಲ್ಲ ಮೀನುಗಾರಿಕಾ ಸಚಿವರು ಕ್ರಮ ಕೈಗೊಂಡು ಪರಿಹಾರಕ್ಕೆ ಸೂಚನೆ ನೀಡಬೇಕು. ಆದರೆ ಸಚಿವರು ಸಿ.ಎಂ.ಗೆ ಮನವಿ ಮಾಡುತ್ತಾ ನಿಂತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ, ಭರತ್ ಮುಂಡೋಡಿ, ಟಿ.ಎಂ.ಶಹೀದ್, ಸುಳ್ಯ ಉಸ್ತುವಾರಿ ಜಿ.ಕೃಷ್ಣಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಜಿಲ್ಲಾ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಇಂಟಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಯುವ ಇಂಟಕ್ ಅಧ್ಯಕ್ಷ ಅನಿಲ್ ಬಳ್ಳಡ್ಕ, ನ.ಪಂ. ಸದಸ್ಯ ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಎನ್.ಎಸ್.ಯು.ಐ. ಅಧ್ಯಕ್ಷ ಕೀರ್ತನ್ ಕೊಡಪಾಲ, ನ.ಪಂ. ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ , ಕೆ.ಗೋಕುಲ್ ದಾಸ್, ಸುರೇಶ್ ಎಂ.ಹೆಚ್., ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ಶಶಿಧರ್ ಮೊದಲಾದವರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.