ಚೆಂಬು : ಜನತಾ ಕಾಲೊನಿಯಲ್ಲಿ ತೆರೆದ ಬಾವಿ ಕಾಮಗಾರಿ ಆರಂಭ

Advt_Headding_Middle

ಸುದ್ದಿ ನ್ಯೂಸ್ ಫಲಶ್ರುತಿ

ಚೆಂಬು ಗ್ರಾಮದ ಊರುಬೈಲು ಜನತಾ ಕಾಲನಿಯಲ್ಲಿ ಕುಡಿಯುವ ನೀರಿಗಾಗಿ ಹಲವು ಸಮಯಗಳಿಂದ ಜನತಾ ಕಾಲನಿಯ ನಿವಾಸಿಗಳಿಂದ ಬೇಡಿಕೆ ಇದ್ದು, ಇದಕ್ಕೆ ಹಿಂದಿನ ಅವಧಿಯ ಗ್ರಾಮ ಪಂಚಾಯತ್ ಸ್ಪಂದಿಸದೇ ಈ ಭಾಗದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿ ಶೌಚಾಲಯಕ್ಕೆ ಗುಂಡಿಯನ್ನು ತೆಗೆಯದೆ ಅಪೂರ್ಣವಾಗಿತ್ತು.
ಈ ಬಗ್ಗೆ ಜನತಾ ಕಾಲನಿಯ ನಿವಾಸಿಗಳು ‘ಸುದ್ದಿ’ಗೆ ಈ ಸಮಸ್ಯೆಯನ್ನು ತಿಳಿಸಿದರು. ನಮಗೆ ಇಲ್ಲಿ ಶೌಚಾಲಯದ ಅಗತ್ಯವಿಲ್ಲ. ನಮಗೆ ಇಲ್ಲಿ ಕುಡಿಯುವ ನೀರಿನ ಬಾವಿಯನ್ನು ತೆಗೆದು ಕೊಟ್ಟಿದ್ದರೆ ನಮಗೆ ತುಂಬಾ ಸಹಕಾರವಾಗುತ್ತಿತ್ತು. ಈ ಬಗ್ಗೆ ಸುದ್ದಿ ಪತ್ರಿಕೆಯು ಸಮಸ್ಯೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಪಂಚಾಯತ್ ಸದಸ್ಯರಾದ ರಮೇಶ್ ಹುಲ್ಲುಬೆಂಕಿ ಮತ್ತು ವಸಂತರವರು ಈ ಸ್ಥಳದಲ್ಲಿ ತೆರೆದ ಬಾವಿಯನ್ನು ತೆಗೆಸಲು ಪಂಚಾಯತ್‌ನಿಂದ ಅನುಮತಿ ತೆಗೆದು ಕಾಮಗಾರಿ ಆರಂಭಿಸಿದ್ದಾರೆ. ಗ್ರಾ.ಪಂ. ಅಧ್ಯಕ್ಷೆ ಕುಸುಮಾರವರು ಸಹಕಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.