ಕೊರೊನಾ ಗೆಲ್ಲಲು ಲಾಕ್ ಡೌನ್ ಅನಿವಾರ್ಯ : ಸುಬ್ರಹ್ಮಣ್ಯ ಕೆ.ಎಂ.

Advt_Headding_Middle

 

ಪ್ರಪಂಚವನ್ನೇ ತಲ್ಲಣಗೊಳಿಸಿದ ಮಹಾರೋಗಗಳಲ್ಲಿ ಕೊರೊನಾ ಕೂಡ ಒಂದು. ಈ ರೋಗವನ್ನು ಗೆಲ್ಲಬೇಕಾದರೆ ನಮ್ಮ ಯೋಚನೆಗಳು ಪಾಸಿಟಿವ್ ಇರಬೇಕು. ನಮ್ಮ ಚಿಂತನೆಗಳು ಧೃತಿಗೆಡದೆ ಧೈರ್ಯವಾಗಿರಬೇಕು. ನಾವು ಮೊದಲು ನಮ್ಮನ್ನು ಗೆಲ್ಲಬೇಕು. ಈ ಸಂದರ್ಭದಲ್ಲಿ ಸಮಾಜದಲ್ಲಿ ನಮಗಿಂತ ಬಡ ವರ್ಗದ ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಬೇಕು. ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು. ಕೊರೊನಾ ಮಹಾರೋಗವನ್ನು ಗೆಲ್ಲಬೇಕಾದರೆ ಲಾಕ್ ಡೌನ್ ಅನಿವಾರ್ಯ. ನನ್ನ ಪ್ರಕಾರ ಎಪ್ರಿಲ್ ಮೊದಲ ವಾರದಲ್ಲಿ ಲಾಕ್ ಡೌನ್ ಆಗುತ್ತಿದ್ದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಲ್ಲ ವರ್ಗದ ಜನರಿಗೆ ಸಮಸ್ಯೆಯಾಗುತ್ತಿರಲಿಲ್ಲ. ಜನರು ಅನಗತ್ಯವಾಗಿ ಹೊರಗಡೆ ಹೋಗದೆ, ಸರಕಾರದ ಆದೇಶವನ್ನು ಪಾಲನೆ ಮಾಡಿ, ಗೃಹ ಚಟುವಟಿಕೆ, ಅವರವರ ಕೃಷಿ ಚಟುವಟಿಕೆ ಹಾಗೂ ವ್ಯಾಯಾಮ, ಯೋಗ, ಸಂಗೀತ, ಓದುವ, ಬರೆಯುವ ಹವ್ಯಾಸ ರೂಢಿಸಿಕೊಂಡರೆ ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಢರಾಗುತ್ತಾರೆ ಹಾಗೂ ಧನಾತ್ಮಕ ಚಿಂತನೆಗಳು ಮೂಡುತ್ತದೆ.

ಸುಬ್ರಹ್ಮಣ್ಯ ಕೆ.ಎಂ.
ರಾಷ್ಟ್ರೀಯ ಕ್ರೀಡಾಪಟು
ಕಲ್ಪಡ, ಕೊಡಿಯಾಲ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.