Breaking News

ಲ್ಯಾಂಪ್ಸ್ ಸೊಸೈಟಿ ಪಡಿತರ ಹಂಚಿಕೆ ನಿಗದಿಪಡಿಸಿದ ಸಮಯಕ್ಕೆ ಮೊದಲು ಬಂದ್

Advt_Headding_Middle

ಗ್ರಾಹಕರ ಒತ್ತಾಯ ಮೇರೆಗೆ ಮತ್ತೆ ಬಾಗಿಲು ತೆಗೆದು ರೇಷನ್ ವಿತರಣೆ

ಸುಳ್ಯ ಲ್ಯಾಂಪ್ ಸೊಸೈಟಿಯಲ್ಲಿ ಮಧ್ಯಾಹ್ನ 12 ಗಂಟೆಯ ವರೆಗೆ ಪಡಿತರ ನೀಡುತ್ತೇವೆ ಎಂದು ಲ್ಯಾಂಪ್ ಅಧ್ಯಕ್ಷ ಸೀತಾನಂದ ಬೇರ್ಪಡ್ಕ ಪತ್ರಿಕಾ ಹೇಳಿಕೆ ನೀಡಿದ್ದರು. ಆದರೆ ಇಂದು ಬೆಳಿಗ್ಗೆ ಎಂದಿನಂತೆ 10 ಗಂಟೆಗೆ ಸೊಸೈಟಿ ಬಾಗಿಲು ಹಾಕಿದ ಕಾರಣ ಗ್ರಾಹಕರು ಆಕ್ರೋಶಗೊಂಡ ಘಟನೆ ನಡೆಯಿತು. ಗ್ರಾಹಕರು ಆಕ್ರೋಶಗೊಂಡಿರುವ ಘಟನೆಯನ್ನು ತಿಳಿದ ಸೊಸೈಟಿ ಸಿಬ್ಬಂದಿಗಳು ಮರಳಿ ಬಂದು ಪಡಿತರ ಹಂಚಿಕೆ ಮಾಡಿದ ಘಟನೆ ಇಂದು ವರದಿಯಾಗಿದೆ.

ಸುಳ್ಯ ಹಳೆಗೇಟು ಭಾಗದ ಎಪಿಎಲ್ ಪಡಿತರ ಚೀಟಿದಾರರು ಇಂದು ಬೆಳಿಗ್ಗೆ 9.30 ರ ವೇಳೆಗೆ ಪಡಿತರ ಅಕ್ಕಿ ಪಡೆಯಲು ಬಂದಿದ್ದರು. ಈ ವೇಳೆ ಕುಚಲಕ್ಕಿ ಮತ್ತು ಬೆಳ್ತಕ್ಕಿ ವಿಷಯದಲ್ಲಿ ಚರ್ಚೆ ನಡೆದು, ಸೊಸೈಟಿ ಸಿಬ್ಬಂದಿ ಅವರನ್ನು ತಾಲೂಕು ಕಚೇರಿ ಆಹಾರ ಇಲಾಖೆ ಅಧಿಕಾರಿಯ ಬಳಿಗೆ ಕಳಿಸಿದರು. ಇವರು ತಾಲೂಕು ಕಚೇರಿಗೆ ತೆರಳಿ ಮರಳಿ ಬರುವ ವೇಳೆಗೆ ಸೊಸೈಟಿ ಸಿಬ್ಬಂದಿಗಳು ಬಾಗಿಲು ಹಾಕಿಕೊಂಡು ಹೋಗಿರುವುದು ಕಂಡುಬಂದಿತು. ಇದರಿಂದ ಆಕ್ರೋಶಗೊಂಡ ಪಡಿತರದಾರರು ” 12 ಗಂಟೆಯವರೆಗೆ ಪಡಿತರ ನೀಡುತ್ತೇವೆ ಎಂದು ಪತ್ರಿಕೆಯಲ್ಲಿ ಮಾಹಿತಿ ನೀಡಿ ಇದೀಗ 10 ಗಂಟೆಗೆ ಬಾಗಿಲು ಹಾಕಿ ಹೋಗಿರುವುದು ನಮಗೆ ತೊಂದರೆ ನೀಡುವ ಉದ್ದೇಶದಿಂದ ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರಲ್ಲೊಬ್ಬರು ಅಧ್ಯಕ್ಷ ಸೀತಾನಂದರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅಧ್ಯಕ್ಷರು ಸಿಬ್ಬಂದಿಗೆ ತಿಳಿಸಿದ ಮೇರೆಗೆ ಸಿಬ್ಬಂದಿಗಳು ಮರಳಿ ಬಂದು ಪಡಿತರವನ್ನು ಹಂಚಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಸಿಬ್ಬಂದಿ ” ನಾವು ಬೆಳಿಗ್ಗೆ 6.30 ಗಂಟೆಗೆ ಚಹಾ ಕೂಡ ಕುಡಿಯದೆ ಬರುತ್ತೇವೆ. ಅನ್ನ ನೀರು ಇಲ್ಲದೆ ಕರ್ತವ್ಯಕ್ಕೆ ನಿರ್ವಹಿಸುತ್ತೇವೆ. ಇದೀಗ 12 ಗಂಟೆಯವರೆಗೆ ಪಡಿತರ ವಿತರಿಸುವುದರ ಬಗ್ಗೆ ನಮ್ಮ ಗಮನಕ್ಕೆ ಬಾರದೇ ಇದ್ದ ಕಾರಣ ಈ ರೀತಿಯಾಗಿ ನಡೆದಿದೆ. ನಮ್ಮಿಂದ ಏನಾದರೂ ತಪ್ಪಾದ ಕೂಡಲೇ ಗ್ರಾಹಕರು ಪತ್ರಿಕೆಯವರನ್ನು ಕರೆಸಿ ನಮ್ಮನ್ನು ಹೆದರಿಸುತ್ತಾರೆ. ಆದರೆ ನೀವು ಅನ್ನ ನೀರು ಕುಡಿದಿದ್ದೀರಾ ಎಂದು ಕೇಳುವವರು ಯಾರೂ ಇಲ್ಲ ” ಎಂದು ವರದಿಗಾರರ ಮುಂದೆ ತಮ್ಮ ನೋವನ್ನು ತೋಡಿಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.