ಪತ್ತನಾಜೆಯಂದು ಕೊರೋನಾ ಮುಕ್ತಿಗೆ ಮನೆ ಮಂಚಾವಿನಲ್ಲಿ ಪ್ರಾರ್ಥಿಸೋಣ

Advt_Headding_Middle

ಅನಾದಿಕಾಲದಿಂದಲೂ ತುಳುನಾಡಿನ ಜನ ತಮಗೆ ತಾವೇ ವಿಧಿಸಿಕೊಂಡು ಬರುತ್ತಿರುವ ಧಾರ್ಮಿಕ ಸಾಮಾಜಿಕ ಗಡುವೇ ಈ ಪತ್ತನಾಜೆ. ಅಂದಿನಿಂದ ಇಂದಿಗೂ ನಂಬಿಕೆಯ ತಳಹದಿಯಲ್ಲಿ ಈ ಪತ್ತನಾಜೆ ಪದ್ಧತಿಯು ನಡೆದುಕೊಂಡು ಬಂದಿದೆ. ತುಳುನಾಡಿನಲ್ಲಿ ಪತ್ತನಾಜೆ ದಿನವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರುವುದು ರೂಢಿ. ಮೇ. 24 ರಂದು ಪತ್ತನಾಜೆಯ ದಿನ. ಪತ್ತನಾಜೆ ತುಳು ನಾಡಿನಲ್ಲಿ ಉತ್ಸವಾದಿ ಆಚರಣೆಗೆ ಒಂದು ಗಡುವನ್ನು ನಿಗದಿ ಮಾಡುತ್ತದೆ.ದಕ್ಷಿಣ ಕನ್ನಡ ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಪತ್ತನಾಜೆ ನಿಯಮವನ್ನು ಪಾಲಿಸಲಾಗುತ್ತದೆ. ದೈವ ದೇವಸ್ಥಾನಗಳಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವ, ವಿಶೇಷ ಪರ್ವಗಳು, ಉತ್ಸವಗಳು, ಯಕ್ಷಗಾನ, ತಂಬಿಲ, ನೇಮೋತ್ಸವ ಎಲ್ಲವೂ ಈ ದಿನಕ್ಕೆ ಕೊನೆಗೊಳ್ಳುತ್ತದೆ. ಮುಂದಿನ ಮೂರು ತಿಂಗಳು ಬಿಡುವಾಗಿದ್ದು ಯಾವುದೇ ಯಕ್ಷಗಾನ ನೇಮ ,ಕೋಲ, ಅಂಕ ಆಯನಗಳು ನಡೆಯುವುದಿಲ್ಲ. ಯಾವುದೇ ವಿಶೇಷ ಉತ್ಸವಗಳು ತುಳುನಾಡಿನ ದೇವಸ್ಥಾನಗಳಲ್ಲಿ ನಡೆಯೋದಿಲ್ಲ. ಆದರೆ ನಿತ್ಯ ಪೂಜೆಯ ನಿತ್ಯಬಲಿ ಮಾತ್ರ ಎಂದಿನಂತೆ ನಡೆಯುತ್ತದೆ. ಆದರೆ ಈ ವರ್ಷ ಕೊರೋನಾ ಮಹಾಮಾರಿಯಿಂದಾಗಿ ಎಲ್ಲವೂ ಅಲ್ಲೋಲ ಕಲ್ಲೋಲವಾಗಿದೆ.ಎಲ್ಲದಕ್ಕೂ ನಾವೆಲ್ಲರೂ ಕೇವಲ ನಿಮಿತ್ತ ಮಾತ್ರ. ಮೇಲೊಬ್ಬ ಕಾಣದ ಶಕ್ತಿ ಎಲ್ಲವನ್ನೂ ನಡೆಸಿಕೊಂಡು ಹೋಗುತ್ತಾನೆ. ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲರೂ ನಮ್ಮ ಮನೆಯ ಮನೆ ಮಂಚಾವುನಲ್ಲಿ ನೆಲೆಯಾಗಿರುವ ದೈವ ದೇವರ ಎದುರು ನಿಂತು ಭಕ್ತಿಯಿಂದ ಪ್ರಾರ್ಥನೆ ಮಾಡಬೇಕಾಗಿದೆ. ಈ ಜಗತ್ತಿಗೆ ಆವರಿಸಿರುವ ಮಾರಕ ಕೊರೋನಾ ಮಹಾಮಾರಿಯನ್ನು ಹೋಗಲಾಡಿಸಿ ಎಲ್ಲರಿಗೂ ಆರೋಗ್ಯವನ್ನು ಕರುಣಿಸಬೇಕೆಂದು ಪ್ರಾರ್ಥಿಸೋಣ.

 

-ರೂಪಾನಂದ(ಹರೀಶ್)

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.