ಪಂಜ ಮೊರಾರ್ಜಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ

Advt_Headding_Middle

ಸಚಿವ ಎಸ್.ಅಂಗಾರರಿಂದ ಉದ್ಘಾಟನೆ

ಪಂಜದ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರನ್ನು ತೆರೆಯಲಾಗಿದ್ದು ಇಂದು ಅದರ ಉದ್ಘಾಟನೆ ನೆರವೇರಿತು. ಸಚಿವ ಎಸ್.ಅಂಗಾರ ಸುವ್ಯವಸ್ಥಿತವಾದ ಕೋವಿಡ್ ಸೆಂಟರ್‌ರನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು ಗ್ರಾಮೀಣ ಭಾಗದಲ್ಲಿ ಆರೋಗ್ಯ ಭಾಗ್ಯ ಸಮೃದ್ಧಿಗೆ ಪೂರಕವಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಸೋಂಕಿತರಿಗೆ ಬೇಕಾದ ಸಕಲ ವ್ಯವಸ್ಥೆಯನ್ನು ಸರಕಾರದಿಂದ ಮಾಡಲಾಗಿದೆ.ಅಲ್ಲದೆ ಆಮ್ಲಜನಕ ಕನ್ಸಲೇಟರ್ ಅನ್ನು ಒದಗಿಸಿದ್ದೇನೆ.ಕಾಲಕಾಲಕ್ಕೆ ಬೇಕಾದ ಪೌಷ್ಠಿಕ ಆಹಾರವನ್ನು ವ್ಯವಸ್ಥಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ವರೂ ಆರೋಗ್ಯ ರಕ್ಷಣೆಗೆ ಕರ ಜೋಡಿಸಬೇಕು.ನಮ್ಮೊಳಗೆ ಉಂಟಾಗುವ ಜಾಗೃತಿಯೇ ರೋಗ ನಿವಾರಣೆಗೆ ಸಂಜೀವಿನಿಯಾದುದರಿಂದ ಸರ್ವರೂ ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದರು.


ಆಮ್ಲಜನಜಕ ಕನ್ಸಲೇಟರ್ ಹಸ್ತಾಂತರ:
ಈ ಸಂದರ್ಭದಲ್ಲಿ ಸಚಿವರು ವೈಯಕ್ತಿಕವಾಗಿ ಎರಡು ಆಮ್ಲಜನಕ ಕನ್ಸಲೇಟರ್ ಅನ್ನು ಕೋವಿಡ್ ಕೇರ್ ಸೆಂಟರ್‌ಗೆ ಹಸ್ತಾಂತರಿಸಿದರು. ಸ್ವತಃ ಸಚಿವರೇ ವೈಯಕ್ತಿಕವಾಗಿ ಕನ್ಸಲೇಟರ್ ಒದಗಿಸುವ ಮೂಲಕ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುವವರಿಗೆ ಆಮ್ಲಜನಕದ ಸಮಸ್ಯೆ ಬಾಧಿಸದಂತೆ ವ್ಯವಸ್ಥೆ ಮಾಡಿದರು. ಸಚಿವರ ಈ ಕಾರ್ಯವು ಶ್ಲಾಘನೆಗೆ ಪಾತ್ರವಾಯಿತು.

ಸಮಗ್ರ ಪರಿಶೀಲನೆ:
ಬಳಿಕ ಸಚಿವರು ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಹಾಸಿಗೆಗಳು, ಶೌಚಾಲಯ, ಅಡುಗೆ ಕೋಣೆ, ನೀರಾವರಿ ಸೇರಿದಂತೆ ಇತರ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿದರು.ಅಲ್ಲದೆ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಬಳಿಕ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಕೊರೋನಾ ಕಾರ್ಯಪಡೆ ಸದಸ್ಯರೊಂದಿಗೆ ಸಭೆ ನಡೆಸಿ ಕುಂದು ಕೊರತೆಗಳ ಬಗ್ಗೆ ತಿಳಿದುಕೊಂಡರು.ಅಲ್ಲದೆ ಕಾರ್ಯತತ್ಪರ ಕಾರ್ಯ ನೆರವೇರಿಸಲು ಕೊರೋನಾ ಕಾರ್ಯಪಡೆಗೆ ಧೈರ್ಯ ತುಂಬಿದರು.
ಈ ಸಂದರ್ಭ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ಅನಿತಾಲಕ್ಷ್ಮೀ,  ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್, ಹಿರಿಯ ವೈದ್ಯ ಡಾ.ರಾಮಯ್ಯ ಭಟ್, ಪ್ರಮುಖರಾದ ಸುಬ್ರಹ್ಮಣ್ಯ ಕುಳ, ಕಾರ್ಯಪ್ಪ ಗೌಡ ಚಿದ್ಗಲ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.